ಭದ್ರಾವತಿ: ಲಾಕ್ ಡೌನ್ ಇದೆ ಹೊರಕ್ಕೆ ಬರಬೇಡಿ, ಮಾಸ್ಕ್ ಧರಿಸು ಎಂಬ ಕಾರಣಕ್ಕಾಗಿ ಪೌರಕಾರ್ಮಿಕನನ್ನು ಇರಿದು ಕೊಂದಿರುವ ಘಟನೆಗೆ ಸಂಬಂಧಿಸಿದಂತೆ ಹಳೇ ನಗರ ಪೊಲೀಸರು ಐವರವನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಸಾಬೀತ್ (20), ಇದಾಯತ್ (20), ನಿಶಾದ್ ಪಾಷ (21), ಮಹಮದ್ ಜುನೇದ್ (20), ತಬ್ರೇಜ್ ಪಾಷ (20) ಇವರನ್ನು ಬಂಧಿಸುವ ಜೊತೆಗೆ ಕೃತ್ಯಕ್ಕೆ ಬಳಸಿದ ಆಯುಧ, 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ವಿವರ: ಅನ್ವರ್ ಕಾಲೋನಿಯ ಯುವಕ ಸಾಬೀಬ್ ಎಂಬಾತ ಜೈ ಭೀಮ್ ನಗರಕ್ಕೆ ನಿನ್ನೆ ಬಂದಿದ್ದು, ಈ ವೇಳೆ ಪೌರ ಕಾರ್ಮಿಕ ಸುನಿಲ್ ಎಂಬಾತ ಲಾಕ್ ಡೌನ್ ಇದೆ, ಬರಬೇಡಿ. ಅಲ್ಲದೇ ಮಾಸ್ಕ್ ಧರಿಸಿ ಎಂದು ಬುದ್ದಿ ಹೇಳಿದ್ದಾನೆ. ಆದರೆ, ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಸಿಟ್ಟಿಗೆದ್ದ ಅನ್ವರ್ ಕಾಲೋನಿಯ ಯುವಕ ತನ್ನ ಸ್ನೇಹಿತರೊಂದಿಗೆ ಬಂದು ಬುದ್ದಿ ಹೇಳಿದ ಸುನಿಲ್’ಗೆ ಚಾಕುವಿನಿಂದ ಇರಿದಿದ್ದಾರೆ.
ಇದರಿಂದ ಅಸ್ವಸ್ಥಗೊಂಡ ಸುನೀಲ್’ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದಾನೆ. ಹಳೇ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ
- ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
- ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ
- ಮೇ.24 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
- ” ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
- ” ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ.
- ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ,
- ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
- ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
- ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
- ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
- ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
- ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ.
- ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.