ಮೇ – ಜುಲೈ ತಿಂಗಳವರೆಗೆ ಆಯೋಜನೆ
ಶಿವಮೊಗ್ಗ ನಗರದ ಪ್ರಖ್ಯಾತ ನೃತ್ಯ ಸಂಸ್ಥೆಯಾದ ಸ್ಟೈಲ್‌ಡ್ಯಾನ್ಸ್ ಕ್ರಿವ್ ನೃತ್ಯಸಂಸ್ಥೆಯ 13ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ತ “ಲಾಕ್‌ಡೌನ್ ಫ್ಯಾಮಿಲಿ ಪ್ಯಾಕ್ – ಇದು ಆನ್‌ಲೈನ್ ಎಂಟರ್‌ಟೈನ್‌ಮೆಂಟ್ ಟಾಸ್ಕ್ ಫೆಸ್ಟಿವಲ್” ವಿನೂತನ ಆನ್ಲೈನ್ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಈ ಸ್ಫರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರತಿ ಕುಟುಂಬದ ಸದಸ್ಯರು ಭಾಗವಹಿಸಿ ಮನರಂಜನೆ ಮತ್ತು ಉತ್ಸಾಹವನ್ನ ಒಟ್ಟಾಗಿ ನಿಮ್ಮ ನಿಮ್ಮ ಮನೆಯಲ್ಲಿಯೇ ಒಟ್ಟಾಗಿ ಕಳೆಯಲು ಸುವರ್ಣಾವಕಾಶ ಇದಾಗಿದೆ.
ಈ ಸ್ಪರ್ಧೆಯಲ್ಲಿ ಬಗೆಬಗೆಯ ಮತ್ತು ವಿಶೇಷ ಮಾದರಿಯ ಆನ್‌ಲೈನ್ ಸ್ಪರ್ಧೆಯನ್ನು ಏರ್ಪಡಿಸಿದ್ದು, ಆಸಕ್ತರು ನಿಮ್ಮ ನಿಮ್ಮ ಮನೆಗಳಿಂದಲೇ 2ರಿಂದ 70 ವರ್ಷದವರೆಗಿನ ವಯಸ್ಕರು ಭಾಗವಹಿಸಬಹುದಾಗಿದೆ. ಸ್ಪರ್ಧಾಳುಗಳ ಎಲ್ಲಾ ವಿಡಿಯೋಗಳನ್ನು ಎಸ್‌ಡಿಸಿ, ಫೇಸ್‌ಬುಕ್ ಪೇಜಿಗೆ ಅಪ್‌ಲೋಡ್ ಮಾಡಿ ಜನರ ಓಟಿಂಗ್ ಮತ್ತು ನೃತ್ಯ ತೀರ್ಪುಗಾರರ ಅಂಕಗಳ ಮೂಲಕ ಆಯ್ಕೆ ಮಾಡಲಾಗುವುದು
ಮನೆಯಲ್ಲಿಯೇ ಇದ್ದು ಹೆಚ್ಚು ಹೆಚ್ಚು ಆಕರ್ಷಕ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಲು ಕೂಡಲೇ ಸಂಪರ್ಕಿಸಿ. 9845388028, 9845388135 ಸಂಪರ್ಕಿಸಿ.
ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ
- ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಮೇ.24 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ. - ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
- ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ.
- ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
- ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
- ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
- ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
- ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
- ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ.
- ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.