Site icon TUNGATARANGA

ಕೋವಿಡ್ ಸುರಕ್ಷಾ ಪಡೆಗೆ ಬೆಕ್ಕಿನಕಲ್ಮಠದ ಸ್ವಾಮೀಜಿಯಿಂದ ನೆರವಿನ ಹಸ್ತ

ಶಿವಮೊಗ್ಗ : ಸೇವಾ ಭಾರತಿ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ ಕೋವಿಡ್ ಸುರಕ್ಷಾ ಪಡೆಗೆ ಇಲ್ಲಿನ ಬೆಕ್ಕಿನಕಲ್ಮಠದ ಸ್ವಾಮೀಜಿಯವರು ನೆರವಿನ ಹಸ್ತ ಚಾಚಿದ್ದಾರೆ.
ಇಂದು ಬೆಳಿಗ್ಗೆ ಬೆಕ್ಕಿನ ಕಲ್ಮಠ ಆವರಣ ದಲ್ಲಿ ಸುಮಾರು 5 ಕ್ವಿಂಟಾಲ್‌ಗೂ ಹೆಚ್ಚು ಅಕ್ಕಿ, ತೆಂಗಿನಕಾಯಿ, ಔಷಧಿ ಸೇರಿದಂತೆ ಇತರ ವಸ್ತುಗಳನ್ನು ಸುರಕ್ಷಾ ಪಡೆಗೆ ನೀಡಿದರು.


ನಂತರ ಮಾತನಾಡಿದ ಬೆಕ್ಕಿನಕಲ್ಮಠ ಶ್ರೀಗಳಾದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಕೊರೊನಾದ ಇಂತಹ ಭಯದ ವಾತಾವರಣದಲ್ಲಿ ಸಾಂತ್ವನ ನೀಡುವ ಕೆಲಸವಾಗಬೇಕಿದೆ. ಇದು ಸಂಭ್ರ ಮದ ಕಾಲ ಅಲ್ಲ. ಆತಂಕ ಎಲ್ಲರನ್ನು ಕಾಡು ತ್ತಿದೆ. ಗೊತ್ತು ಗುರಿಯಿಲ್ಲದ ಪ್ರಯಾಣದಂ ತಾಗಿದೆ. ಗಾಳಿಪಟದ ಸೂತ್ರವೇ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಮನುಷ್ಯ ಮನುಷ್ಯರ ನಡುವೆ ಪ್ರೀತಿ, ಆಂತಕರಣ, ಸಹಾಯದ ಹಸ್ತ, ಸೇವಾ ಮನೋಭಾವನೆ ಬೆಳೆಯ ಬೇಕಾಗಿದೆ ಎಂದರು.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ


ವಿಶ್ವಾಸಗಳು ಮತ್ತೆ ಮೂಡಬೇಕಾಗಿದೆ. ಉರಿಯುವ ಮನೆಯಲ್ಲಿ ಗಳ ಎಳೆಯುವ ಮನಸ್ಸುಗಳು ದೂರವಾಗಬೇಕಾಗಿದೆ. ಮನು ಷ್ಯನ ದುರಾಸೆಗಳು ಈಗಾಗಲೇ ನಮಗೆ ಪಾಠ ವಾಗಿವೆ. ಸಂಕಷ್ಟಗಳನ್ನು ಎದುರಿಸಲಾಗದ ಸ್ಥಿತಿಗೆ ಮನುಷ್ಯ ತಲುಪಿದ್ದಾನೆ. ಪ್ಲೇಗ್, ಕಾಲರಾ, ಸಿಡುಬು ಮುಂತಾದ ಅನೇಕ ಸಾಂಕ್ರಮಿಕ ರೋಗಗಳನ್ನು ಎದುರಿಸಿರುವ ನಾವು ಈಗ ಕೊರೊನಾ ಸಂಕಷ್ಟಕ್ಕೆ ಎದುರಾ ಗಿದ್ದೇವೆ ಎಂದರು.
ಇದರಿಂದ ಪಾರಾಗಲು ಒಳ್ಳೆಯ ಮನಸ್ಸಿನ ಒಳ್ಳೆಯ ಸೇವೆಯ ಜೊತೆಗೆ ಸರ್ಕಾ ರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಿಕೊಳ್ಳುವುದು ಆಗ ಬೇಕಾಗಿದೆ. ಎಲ ಕ್ಕಿಂತ ಹೆಚ್ಚಾಗಿ ಆತ್ಮ ವಿಶ್ವಾಸವನ್ನು ಗಳಿಸಿ ಕೊಂಡು ಮಾನವೀಯತೆಯನ್ನು ಮೆರೆಯ ಬೇಕಾಗಿದೆ ಮತ್ತು ಇಡೀ ಸಮಾಜವೇ ಒಟ್ಟಾಗಿ ಈ ಕೊರೋನಾವನ್ನು ದೂರಮಾಡ ಬೇಕಾಗಿದೆ ಎಂದರು.


ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸಮಾಜಕ್ಕೆ ಸಂಕಷ್ಟ ಉಂಟಾದಾಗ ಮಠಾಧೀಶ್ವರರು ನೆರವು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ಬೆಕ್ಕಿನ ಕಲ್ಮಠದ ಶ್ರೀಗಳು ಕೋವಿಡ್ ಪಡೆಗೆ ಅಕ್ಕಿ, ತೆಂಗಿನಕಾಯಿ ಇತಾ ದಿಗಳನ್ನು ನೀಡಿ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಸ್ಪಂದನೆಗೆ ನಮ್ಮ ಕೃತಜ್ಞತೆಗಳು ಎಂದರು.
ಪ್ರಮುಖರಾದ ಎಸ್.ದತ್ತಾತ್ರಿ, ಡಾ.ರವಿ ಕಿರಣ್, ವಾಸು ದೇವ್, ಮಂಡೇನಕೊಪ್ಪ ದೇವರಾಜ್, ಸೇರಿದಂತೆ ಹಲವರಿದ್ದರು.

Exit mobile version