Site icon TUNGATARANGA

ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪೌರಕಾರ್ಮಿಕರಿಗೆ ಕೊರೊನ ಆರೈಕೆ ಕೇಂದ್ರ

ಶಿವಮೊಗ್ಗ : ನಗರ ಪಾಲಿಕೆ ಪೌರ ಕಾರ್ಮಿಕರು ಹಾಗೂ ಇತರೆ ಸಿಬ್ಬಂದಿಗೆ ಕೊರೊನಾ ಚಿಕಿತ್ಸೆ ನೀಡಲು ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪ್ರತ್ಯೇಕವಾದ ಕೊರೊನಾ ಕೇರ್ ಸೆಂಟರ್ ಮುಂದಿನ ವಾರದಿಂದ ಆರಂಭಗೊಳ್ಳಲಿದೆ ಎಂದು ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.
ಆದಿಚುಂಚನಗಿರಿ ಶಾಖಾ ಮಠ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದೆ. ೨೫ ಹಾಸಿಗೆ ಸಾಮರ್ಥ್ಯದ ಈ ಕೇರ್ ಸೆಂಟರ್‌ನಲ್ಲಿ ಐದು ಆಕ್ಸಿಜನ್ ಬೆಡ್‌ಗಳೂ ಇರಲಿವೆ. ಇದರ ನಿರ್ವಹಣೆ ನಗರ ಪಾಲಿಕೆಯದ್ದು, ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಶೂಶ್ರೂಷಕರನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ


ನಗರದ ಯಾವುದೇ ಆಸ್ಪತ್ರೆಗಳು ಪಾಲಿಕೆ ಹಿಡಿತದಲ್ಲಿಲ್ಲ. ಹೀಗಾಗಿ ಪಾಲಿಕೆ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದರೆ ತುರ್ತು ಆರೋಗ್ಯ ಸೇವೆ ಸಿಗುವುದು ಕಷ್ಟವಾಗಬಹುದು ಎಂಬ ಕಾರಣಕ್ಕೆ ಪ್ರತ್ಯೇಕ ಕೊರೊನಾ ಕೇರ್ ಸೆಂಟರ್ ಮಾಡಲಾಗುತ್ತಿದೆ
.

ಪ್ರತ್ಯೇಕ ವ್ಯವಸ್ಥೆ ಬೇಕಿತ್ತು: ಮೇಯರ್
ಶಿವಮೊಗ್ಗ ನಗರಪಾಲಿಕೆಯ ಸಿಬ್ಬಂದಿಗೆ ಕೊರೊನಾ ಸೋಂಕಿಗೆ ಒಳಗಾದರೆ ಅವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವ್ಯವಸ್ಥೆ ಬೇಕಿತ್ತು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನಾಥ ಸ್ವಾಮೀಜಿ ಅವರ ಬಳಿ ನಮ್ಮ ವಿಚಾರ ತಿಳಿಸಿದಾಗ ಅವರು ಕೊರೊನಾ ಕೇರ್ ಸೆಂಟರ್ ಆರಂಭಕ್ಕೆ ನೀಡಿದ್ದಾರೆ ಎಂದು ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಹಾರೈಕೆ ಕೇಂದ್ರದ ಪರಿಶೀಲನೆ ನಡೆಸಲಿದ್ದಾರೆ. ವೈದ್ಯರು ಹಾಗೂ ಶೂಶ್ರೂಷಕರನ್ನು ಒದಗಿಸುವಂತೆ ಡಿಸಿಗೆ ಪ್ರಸ್ತಾವನೆ ನೀಡಲಿದ್ದೇವೆ ಎಂದು ಹೇಳಿದ್ದಾರೆ.

Exit mobile version