Site icon TUNGATARANGA

ಶಿವಮೊಗ್ಗದಲ್ಲಿಂದು 810 ಜನರಿಗೆ ಕೊರೊನಾ ಸೊಂಕು, 19 ಸಾವು ಶಿವಮೊಗ್ಗದ ಇಂದಿನ ಕಥೆ, ವ್ಯಥೆ ನೋಡಿ


ಶಿವಮೊಗ್ಗ : ಜಿಲ್ಲೆಯಲ್ಲಿ ಬುಧವಾರವಾದ ಇಂದು ಕೊರೊನಾ ಸೋಂಕು ಕಂಡು ಬಂದಿರುವವರ ಸಂಖ್ಯೆ ನಿನ್ನೆಗಿಂತ ಹೆಚ್ಚಿದ್ದು, 810 ಜನರಲ್ಲಿ ಸೊಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇದಕ್ಕೆ ತುತ್ತಾಗಿ ಬರೊಬ್ಬರಿ 19 ಮಂದಿ ಸಾವಿಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷಿತ 2206 ಜನರಲ್ಲಿ 810 ಮಂದಿಗೆ ಸೋಂಕು ತಗುಲಿದ್ದು, 884 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ


ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 635 ಕ್ಕೆ ಏರಿದೆ.
ಶಿವಮೊಗ್ಗ ತಾಲೂಕಿನಲ್ಲಿ 216, ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 133, ಶಿಕಾರಿಪುರ 62, ತೀರ್ಥಹಳ್ಳಿಯಲ್ಲಿ 94, ಸೊರಬ 128, ಸಾಗರ 140, ಹೊಸನಗರ 19 ಹಾಗೂ ಇತರೆ ಜಿಲ್ಲೆಗಳ 18 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ.
29 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 6882 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Exit mobile version