Site icon TUNGATARANGA

ಶಿವಮೊಗ್ಗದಲ್ಲಿಂದು 676 ಜನರಿಗೆ ಕೊರೊನಾ ಸೊಂಕು,15 ಸಾವು

ಶಿವಮೊಗ್ಗದ ಇಂದಿನ ಕಥೆ, ವ್ಯಥೆ ನೋಡಿ


ಶಿವಮೊಗ್ಗ, ಮೇ.17:
ಜಿಲ್ಲೆಯಲ್ಲಿ ಭಾನುವಾರವಾದ ಇಂದು ಕೊರೊನಾ ಸೋಂಕು ಕಂಡು ಬಂದಿರುವವರ ಸಂಖ್ಯೆ ನಿನ್ನೆಗಿಂತ ಹೆಚ್ಚಿದ್ದು, 676 ಜನರಲ್ಲಿ ಸೊಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇದಕ್ಕೆ ತುತ್ತಾಗಿ 15 ಮಂದಿ ಸಾವಿಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷಿತ 2765 ಜನರಲ್ಲಿ 676 ಮಂದಿಗೆ ಸೋಂಕು ತಗುಲಿದ್ದು, 1028 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.


ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 601ಕ್ಕೆ ಏರಿದೆ.
ಶಿವಮೊಗ್ಗ ತಾಲೂಕಿನಲ್ಲಿ 162, ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 58, ಶಿಕಾರಿಪುರ 103, ತೀರ್ಥಹಳ್ಳಿಯಲ್ಲಿ 101, ಸೊರಬ 88, ಸಾಗರ 141, ಹೊಸನಗರ 9 ಹಾಗೂ ಇತರೆ ಜಿಲ್ಲೆಗಳ 14 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ.
35 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 6828 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ

Exit mobile version