Site icon TUNGATARANGA

ಸರಳ ಮದುವೆಗೊಂದು ಸುಂದರ ಉಪಾಯ, ಮಥುರಾ ರೆಸಿಡೆನ್ಸಿಯಲ್ಲಿ ಬಾರೀ ರಿಯಾಯಿತಿ

ಮಗಳ ಮದುವೆ ಮಾಡಬೇಕು. ಗಂಡಿನ ಕಡೆಯ ಒಂದೈವತ್ತು ಜನ ಬರ‍್ತಾರೆ, ನಾವೊಂದೈವತ್ತು ಜನ. ನೂರು ಜನರನ್ನಿಟ್ಟುಕೊಂಡು ಈ ಪುಟ್ಟ ಮನೆಯಲ್ಲಿ ಮದುವೆ ಮಾಡೋದು ಕಷ್ಟ. ಶಾಮೀಯಾನ ಹಾಕುವಂತಿಲ್ಲ. ಜನ ಜಾಸ್ತಿಯಾದರೆಂತ ಮಾಡೋದು, ಕಲ್ಯಾಣ ಮಂದಿರದ ಬಾಡಿಗೆ ಜಾಸ್ತಿ…. ಎಲ್ಲಿ ಮದುವೆ ಮಾಡಲಿ..,
ಹೀಗೆ ಮದುವೆ, ನಾಮಕರಣ, ಜನುಮದಿ ನದ ಸಂಭ್ರಮ ಆಚರಣೆಯ ಬಗ್ಗೆ ಚಿಂತಿಸು ವವರಿಗೊಂದು ಸಿಹಿ ಸುದ್ದಿ ಇಲ್ಲಿದೆ ನೋಡಿ. ಶಿವಮೊಗ್ಗ ಹೃದಯಭಾಗವಾದ ಬಾಲರಾಜ್ ಅರಸ್ ರಸ್ತೆಯ ಮಥುರಾ ರೆಸಿಡೆನ್ಸಿ ಇಂತಹ ವರ ನೆರವಿಗೊಂದು ಸುಲಭ ಉಪಾಯ ಹುಡುಕಿಕೊಟ್ಟಿದೆ. ಈ ಮದುವೆಯಲ್ಲಿ ನಮ್ಮ ಸಹಕಾರವೂ ಇರಲೆಂದು ನಿರ್ಧರಿಸಿರು ಮಥುರಾ ಅದಕ್ಕಾಗಿ ಶೇ. ೫೦ಕ್ಕಿಂತ ಕಡಿಮೆದ ರದಲ್ಲಿ ವಿಶಾಲವಾದ ವೇದಿಕೆಯನ್ನು ಕಟ್ಟಿಕೊ ಡಲು ನಿರ್ಧರಿಸಿದೆ. ನಗರದ ಪ್ರಮುಖ ಸ್ಥಳದಲ್ಲಿರುವ ಈ ವಿಶಾಲವಾದ ವೇದಿಕೆಯಲ್ಲಿ ಎಲ್ಲಾ ಸೌಲಭ್ಯಗ ಳನ್ನು ಕೈಗೆಟಕುವ ದರದಲ್ಲಿ ಕೊಡಿಸುವ ಚಿಕ್ಕ ಪ್ರಯತ್ನದ ಜೊತೆಗೆ ಕಂಕಣ ಭಾಗ್ಯಕ್ಕೆ ಸಹಾಯಹಸ್ತ ನೀಡಲು ಮುಂದಾಗಿದೆ.
ಕೋವಿಡ್ ೧೯ ಕೊರೊನಾ ಕಿರಿಕ್ ನಡುವೆ ಸರಳ ವಿವಾಹ ಆಚರಿಸಲು ಯಾವುದೇ ತೊಂದರೆ ಇಲ್ಲದಂತೆ ಕನಿಷ್ಟ ಹಾಗೂ ಗರಿಷ್ಟ ನೂರು ಜನರಿಗೆ ವಿಶಾಲವಾದ ವೇದಿಕೆಯಲ್ಲಿ ಮದುವೆ ಸಮಾರಂಭ ನಡೆಸಲು ವೇದಿಕೆ ಕಟ್ಟಿಕೊಡುವ ಕಾರ್ಯ ಸ್ತುತಾರ್ಹ.
ಈ ಹಿನ್ನೆಲೆಯಲ್ಲಿ ಮಥುರಾ ಸೇವಾಕೇಂದ್ರ ವನ್ನು ಆರಂಭಿಸಿದ್ದು ಮದುವೆಯ ಸಡಗರಕ್ಕೆ ಎಲ್ಲಿಯೂ ಲೋಪ ಬಾರದಂತೆ ನೋಡಿಕೊ ಳ್ಳಲು ಅ.ನಾ. ವಿಜಯೇಂದ್ರರಾವ್ ನೇತೃತ್ವದಲ್ಲಿ ಯುವ ತಂಡವೊಂದನ್ನು ರೂಪಿಸಲಾಗಿದೆ.
ಶುದ್ದವಾದ ಕುಡಿಯುವ ನೀಡು, ಗಾಳಿ ಬೆಳಕಿರುವ ನಗರದೊಳಗಿನ ಈ ವಿಶಾಲ ವೇದಿಕೆ ಹಾಗೂ ಇದರ ವ್ಯವಸ್ಥೆಗಳ ಸೌಲಭ್ಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 94481 22646, 94487 90127 ಗೆ ಸಂಪರ್ಕಿಸಬಹುದೆಂದು ರೆಸಿಡೆನ್ಸಿಯ ಗೋಪಿನಾಥ್ ತಿಳಿಸಿದ್ದಾರೆ.

ಇಲ್ಲಿ ಎಲ್ಲವೂ ಲಭ್ಯ

Exit mobile version