ಶಿವಮೊಗ್ಗದಲ್ಲಿ ಒಂದೆಡೆ ಕೊರೊನಾ ರಣಕೇಕೆ ಹಾಕುತ್ತಿದ್ದು, ಇದರ ನಡುವೆ ಗುರುವಾರ ಸಂಜೆಯಿಂದ ರಾತ್ರಿ 9ರವರೆಗೂ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಬಿಸಿಲಿಗೆ ಬೇಸತ್ತಿದ್ದ ಶಿವಮೊಗ್ಗದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.
ಬಾರಿ ಮಳೆಗೆ ನಗರದ ಬಾಪೂಜಿ ನಗರ, ಹೊಸಮನೆ, ಗೋಪಾಳಗೌಡ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದ ಪರಿಣಾಮ ಜನರು ಕಷ್ಟ ಅನುಭವಿಸುವಂತಾಯಿತು.
ರಾಜ್ಯಕ್ಕೆ ಈ ವರ್ಷದ ಮೊದಲ ಚಂಡಮಾರುತ ಮೇ 16ಕ್ಕೆ ಅಪ್ಪಳಿಸಲಿದೆ. ಗುಜರಾತ್ ಕರಾವಳಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದ ಚಂಡಮಾರುತ ಅಪ್ಪಳಿಸಲಿದ್ದು, ರಾಜ್ಯದಲ್ಲಿ 4 ದಿನಗಳ ಕಾಲ ( ಮೇ 13 -16) ವ್ಯಾಪಕ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು.
ಮುಂಗಾರು ಪ್ರವೇಶ : ಕೇರಳಕ್ಕೆ ಈ ಬಾರಿ ಜೂನ್ 1ರಂದು ಮಾನ್ಸೂನ್ ಪ್ರವೇಶವಾಗಲಿದೆ. ಅದಕ್ಕೂ ಮುನ್ನ ವರ್ಷದ ಮೊದಲ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ.