ಸೊರಬ: ಅಜಾಗರೂಕತೆ ಚಾಲನೆಯಿಂದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಅಂಕರವಳ್ಳಿಯಲ್ಲಿ ನಡೆದಿದೆ.
ಅಂಕರವಳ್ಳಿ ಗ್ರಾಮದ ಕೆ. ಹನೀಫ್ ಸಾಬ್ (55) ಮೃತ ದುರ್ದೈವಿ. ಬೆಲ್ಲದ ಸಾಗಾಣಿಕೆಯ ಖಾಲಿ ಟ್ಯಾಂಕರ್ ಚಂದ್ರಗುತ್ತಿಯಿಂದ ಸೊರಬ ಮಾರ್ಗವಾಗಿ ಆಗಮಿಸುವ ವೇಳೆ ಈ ದುರ್ಘಟನೆ ಜರುಗಿದೆ.
ಲಾರಿಯು ಅಪಘಾತದ ತರುವಾಯ ಮತ್ತೆ ಎರಡು ಮರಗಳಿಗೆ ಡಿಕ್ಕಿ ಹೊಡೆದಿದ್ದು, ಒಂದು ಮರ ಧರೆಗೆ ಉರುಳಿದ್ದು, ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.
ಗಾಯಾಳುಗಳಾದ ಲಾರಿ ಚಾಲಕ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಕಿರಣ ಮತ್ತು ಚಂದ್ರಗುತ್ತಿಯ ಮಹೇಶ್ ಎಂಬುವವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.