ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ 755 ಮಂದಿಗೆ ಕೊರೊನ ಸೋಂಕು ಪತ್ತೆಯಾಗಿದ್ದು, ಕೋವಿಡ್ ಎರಡನೇ ಅಲೆ ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ. ಒಟ್ಟು ಮೂರು ರೋಗಿಗಳು ಸಾವಿಗೀಡಾಗಿದ್ದು, ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 374ಕ್ಕೆ ಏರಿದೆ. ಶಿವಮೊಗ್ಗ ತಾಲೂಕಿನಲ್ಲಿ ಗುರುವಾರ ಒಂದೇ ದಿನ 221 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 103, ಶಿಕಾರಿಪುರ 67,ತೀರ್ಥಹಳ್ಳಿಯಲ್ಲಿ 108,ಸೊರಬ 87,ಸಾಗರ 117,ಹೊಸನಗರ 33 ಹಾಗೂ ಇತರೆ ಜಿಲ್ಲೆಗಳ 19 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ. 36 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 2439ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಚುನಾವಣೆ: ಫಲಿತಾಂಶಕ್ಕೂ ಮುನ್ನ ಅಭ್ಯರ್ಥಿ ಸಾವು
ರಾಮನಗರ: ಇಲ್ಲಿನ ನಗರಸಭೆ ಚುನಾವಣೆಯಲ್ಲಿ ೪ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲೀಲಾ ಗೋವಿಂದರಾಜು (೪೨) ಕೋವಿಡ್ ಸೋಂಕಿನಿಂದ ನಿಧನರಾದರು.
ವಾರದ ಹಿಂದೆ ಚುನಾವಣೆ ಪ್ರಚಾರದ ಸಂದರ್ಭವೇ ಅವರಿಗೆ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಬೆಳಿಗ್ಗೆ ಮೃತಪಟ್ಟರು.
ಇದೇ ತಿಂಗಳ ೨೭ರಂದು ರಾಮನಗರ ನಗರಸಭೆ ಚುನಾವಣೆ ನಡೆದಿದ್ದು, ೩೦ರಂದು ಮತ ಎಣಿಕೆ ನಡೆಯಲಿದೆ.
ಮದುವೆ ‘ವರ’ ಕೊರೊನಾಗೆ ಬಲಿ
ಚಿಕ್ಕಮಗಳೂರು: ಗುರುವಾರ ಮದುವೆಯಾಗಬೇಕ್ಕಿದ್ದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಕುಂಚೂರು ಸಮೀಪದ ದೇವರಕೊಡಿಗೆಯ ಪೃಥ್ವಿರಾಜ್ (32) ಅವರ ಕೊರೊನಾಗೆ ಸಾವು ಕಂಡಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ನೌಕರಿ ಮಾಡುತಿದ್ದ ಪೃಥ್ವಿಗೆ ತಂದೆ ಮಂಜು ನಾಥ್ ಅವರು ವಧು ಗೊತ್ತುಮಾಡಿದ್ದರು. ಕೋವಿಡ್ ನಿಯಮದಂತೆ ಮದುವೆ ಮಾಡಲು ಗುರುವಾರ ಮುಹೂರ್ತವೂ ನಿಗದಿಯಾಗಿತ್ತು.
ಮದುವೆ ತಯಾರಿಗೆ ಬಂದಿದ್ದ: ಮದುವೆ ವಾರ ಇರುವಾಗಲೇ ಊರಿಗೆ ಬಂದಿದ್ದ ಪೃಥ್ವಿ ನವಜೀವನದ ಕನಸು ಕಾಣಿವಾಗಲೇ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕೊಪ್ಪಕ್ಕೆ ಬಂದಿದ್ದ ಆತ ಕೋವಿಡ್ ಟೆಸ್ಟ್ ಮಾಡಿ ಸಿಕೊಂಡಿದ್ದ ಆದರೆ ಅಲ್ಲಿ ನೆಗೆಟಿವ್ ವರದಿ ಬಂದಿತ್ತು. ಹೊಟ್ಟೆನೋವು ನಿಲ್ಲದ ಕಾರಣ ಪೋಷಕರು ಶಿವಮೊಗ್ಗಕ್ಕೆ ಕರೆತಂದಿದ್ದರು. ಇಲ್ಲಿ ಪರೀಕ್ಷೆ ಮಾಡಿದಾಗ ಕೊರೊನ ಇರುವುದು ದೃಢಪಟ್ಟಿತ್ತು. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಲ್ಲಿಯೇ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ಉಸಿ ರಾಟದ ತೊಂದರೆಯಾಗಿ ಕೊನೆಯುಸಿರೆಳೆದ.
ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್ ಮೂಲಕ ಬಂದು ಶವ ಸಂಸ್ಕಾರ ಮಾಡಲಾಗಿದೆ. ವಯಸ್ಸಿನ ಮಿತಿಯಿಲ್ಲದೆ ಕಾಡುವ ಮಹಾಮಾರಿಗೆ ಮದುವೆಯಾಗಬೇಕಿದ್ದ ಹುಡುಗ ಇನ್ನಿಲ್ಲವಾಗಿದ್ದು, ಕೊರೊನ ಕಾಯಿಲೆಯ ಕರಾಳತೆ ತೋರಿಸುತ್ತಿದೆ.