ರಾಯಚೂರು: ಮೂಗಿನಲ್ಲಿ ನಿಂಬೆ ಮೂರು ಮೂರು ಹನಿ ನಿಂಬೆ ರಸ ಹಾಕಿಕೊಂಡ್ರೆ ಕೊರೊನಾ ವೈರಸ್ ವಕ್ಕರಿಸೋಲ್ಲ ಅನ್ನೋ ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ಆದ್ರೆ, ಆರೋಗ್ಯವಾಗಿದ್ದ ಶಿಕ್ಷಕರೊಬ್ಬರು ಇದನ್ನ ನಂಬಿ ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನಟರಾಜ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ನಗರದ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಮೃತ ಪಟ್ಟಿದ್ದಾರೆ.
ಆರೋಗ್ಯವಾಗಿಯೇ ಇದ್ದ 43 ವರ್ಷದ ಬಸವರಾಜ, ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂಚೂರು ಆತಂಕಗೊಂಡಿಡ್ರು. ಅದ್ರಂತೆ, ಮೂಗಿಗೆ ನಿಂಬೆ ರಸ ಹಾಕಿಕೊಂಡ್ರೆ ಕೊರೊನಾ ಬರುವುದಿಲ್ಲ ಅಂತಾ ಭಾವಿಸಿ, ಬೆಳಗ್ಗೆ ಮೂಗಿಗೆ ನಿಂಬೆರಸ ಹಾಕಿಕೊಂಡಿದ್ದಾರೆ.
ಬಳಿಕ ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಅಂದ್ಹಾಗೆ, ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಅವ್ರು, ‘ಮೂಗಿನಲ್ಲಿ ನಾಲ್ಕು ಹನಿ ಲಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತೆ. ನಾನು ಇದನ್ನ ಸ್ವತಃ ಪ್ರಯೋಗಿಸಿದ್ದೇನೆ. ಪರಿಚಯದ 200 ಜನರ ಮೇಲೆ ಪ್ರಯೋಗ ಮಾಡಿ ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ. ಇನ್ನು ಮೂಗಿನಲ್ಲಿ ಲಿಂಬೆರಸ ಹಾಕುವುದರಿಂದ ಲಂಗ್ಸ್‌ನಲ್ಲಿರುವ ಕಫ ಹೊರ ಬರುತ್ತೆ ಆಗ ಆಕ್ಸಿಜನ್ ಪ್ರಮಾಣ ಹೆಚ್ಚಾಗಿ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದು ಹೇಳಿದ್ದರು.