Site icon TUNGATARANGA

ಜು.09ಕ್ಕೆ ಬ್ಯಾಂಕ್‍ ಆಫ್ ಮಹಾರಾಷ್ಟ್ರ ಶಾಖೆ ಉದ್ಘಾಟನೆ

ಶಿವಮೊಗ್ಗ: ನಗರದ ನೆಹರು ರಸ್ತೆಯ ಮೂರನೇ ತಿರುವಿನಲ್ಲಿ ಜುಲೈ 9ರಂದು ಬೆಳಗ್ಗೆ 11.45ಕ್ಕೆ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಿವಮೊಗ್ಗದ ಮೊದಲ ಶಾಖೆಯನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸಲಿದ್ದಾರೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ದೇಶಾದ್ಯಂತ ಸಾವಿರಾರು ಶಾಖೆಗಳನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ದೇಶದಲ್ಲಿ 1834 ಶಾಖೆಗಳು ಇದ್ದು, ಕರ್ನಾಟಕ ರಾಜ್ಯದಲ್ಲಿ 56 ಶಾಖೆಗಳಿವೆ. ಶಿವಮೊಗ್ಗದಲ್ಲಿ ಆರಂಭವಾಗುತ್ತಿರುವ ಮೊದಲ ಹಾಗೂ ರಾಜ್ಯದ 57 ಶಾಖೆ ಇದಾಗಲಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್, ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರರಾವ್, ವಲಯ ವ್ಯವಸ್ಥಾಪಕ ಅನುಸೂಯರಾವ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಶಿವಮೊಗ್ಗ ಬ್ರಾಂಚ್ ಮ್ಯಾನೇಜರ್ ಪಿ.ಪಾರ್ಥೀಬನ್ ಹಾಜರಿರುತ್ತಾರೆ.

Exit mobile version