ಶಿವಮೊಗ್ಗ,ಜು.04: ಶಿವಮೊಗ್ಗ ಜಿಲ್ಲೆಯ ಕೊರೊನಾ ಏರಿಕೆ ಬಗ್ಗೆ ಭಯ ಮಾಮೂಲಿಯಾಗಿದೆ. ಕಳೆದ ನಾಲ್ಕು ದಿನದಿಂದ ದಿನಪ್ರತಿ 23, 23, 31,8 ಹಾಗೂ ಇಂದು ಬಿತ್ತರವಾದ 24 ರ ನಂತರದ ನಾಳೆ ಕನಿಷ್ಟ 32 ಜನರಿಗೆ ಸೊಂಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಈ ವರದಿ ನಾಳೆ ಸಂಜೆಯ ಹೊತ್ತಿಗೆ ಅಧಿಕೃತವಾಗಿ ಹೊರಬೀಳಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಈಗಾಗಲೆ 275 ಗಡಿಯ. ಜಿಲ್ಲೆಯ ಕೊರೊನಾ ಸೊಂಕಿತರ ಸಂಖ್ಯೆ ನಾಳೆಗೆ ಮೂರು ಶತಕ ಮುಗಿಸಿ 307 ಅಂಚಲ್ಲಿ ನಿಲ್ಲುತ್ತದೆನ್ನಲಾಗಿದೆ.
ನಾಳಿನ ವರದಿಯಲ್ಲಿ ತ್ರಿಶತಕದ ದಾಟಿದ ಸಂಖ್ಯೆ ಕಾಣುವ ಎಲ್ಲಾ ಲಕ್ಷಣಗಳಿವೆ.
ನಿನ್ನೆ ರಾತ್ರಿ ತುಂಗಾತರಂಗ ಪತ್ರಿಕೆ ಹೇಳಿದ್ದಂತೆ ಶಿವಮೊಗ್ಗದಲ್ಲಿ ಇಂದು 23ರ ಎಣಿಕೆ ಒಂದಷ್ಟೆ ಹೆಚ್ಚಾಗಿ ಜನರಿಗೆ ಸೊಂಕು ಕಾಣಿಸಿಕೊಂಡಿದೆ. ಇದರಲ್ಲಿ ನಗರದ ಎಂಟು ಸೇರಿದಂತೆ ಬಹುತೇಕ ಎಲ್ಲಾ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದೆ.
ನಗರವೇ ಸೀಲ್ಡೌನ್ ಮಾಡಬೇಕಿದೆ
ನಾಳೆ ಸಂಜೆಯ ಹೊತ್ತಿಗೆ ಹೊರಬರುವ ಈ ಅಂಕಿ ಅಂಶಗಳಲ್ಲಿ ಮತ್ತೆ ಶಿವಮೊಗ್ಗ ನಗರದ್ದೇ ಮೇಲುಗೈ ಎನ್ನಬಹುದು.
ಶಿವಮೊಗ್ಗದ ಹೊಸಮನೆಯಲ್ಲಿ ಮತ್ತೊಂದು, ಗಾಂಧಿಬಜಾರ್ , ವಿನೋಬನಗರ, ಬಸವನಗುಡಿ, ಅಶೋಕನಗರ,ಟಿಪ್ಪುನಗರ,ಬಪೆಕ್ಷನ್ ಬಡಾವಣೆ, ವಿದ್ಯಾನಗರ, ಟ್ಯಾಂಕ್ ನಗರ ಅಶೋಕರಸ್ತೆ ಸೇರಿದಂತೆ ಜಿಲ್ಲೆಯಲ್ಲಿ ಕನಿಷ್ಟ 48 ಸ್ಥಳಗಳನ್ಮು ಸೀಲ್ ಡೌನ್ ಮಾಡಲಾಗಿದೆ.
ಶಿವಮೊಗ್ಗ ನಗರದಲ್ಲಿ 11,ಶಿಕಾರಿಪುರ (ಶಿರಾಳಕೊಪ್ಪ) 7, ಹೊಸನಗರ (ರಿಪ್ಪನ್ ಪೇಟೆ) 5, ಭದ್ರಾವತಿಯಲ್ಲಿ 2 ಇಂದಿನ ಈ ಕೇಸುಗಳಾಗಿವೆ ಎನ್ನಲಾಗಿದೆ.