Site icon TUNGATARANGA

ಪಾಲಿಕೆ ಕಾರ್ಯ, ತುಂಗಾತರಂಗ ವರದಿ ಫಲಶೃತಿ

ಕೊನೆಗೂ ಆಸ್ತಿತೆರಿಗೆದಾರರಿಗೆ ನೆರಳಾದ ನಗರಪಾಲಿಕೆ…!

ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಗೆ ಕಣ್ಣಿಲ್ಲ, ಕಿವಿಯಿಲ್ಲ ಕನಿಷ್ಟ ಪಕ್ಷ ಗಮನಿಸುವ ವ್ಯವದಾನವೂ ಇಲ್ಲ ಎಂಬಂತೆ ಮಾತನಾಡುತ್ತಿದ್ದ ಶಿವಮೊಗ್ಗ ನಗರದ ಜನರಿಗೆ ಇಲ್ಲೊಂದು ಪಾಸಿಟೀವ್ ಮಾಹಿತಿ ಇದೆ.


ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಮಾಡುವ ಸ್ಥಳದಲ್ಲಿನ ಅವ್ಯವಸ್ಥೆಯ ಬಗ್ಗೆ ಹಾಗೂ ತೆರಿಗೆ ಕಟ್ಟಲು ಬಂದವರು ಪಡುತ್ತಿದ್ದ ಕಷ್ಟಗಳ ಬಗ್ಗೆ ತುಂಗಾ ತರಂಗ ಪತ್ರಿಕೆ ಚಿಕ್ಕದೊಂದು ವರದಿ ನೀಡಿತ್ತು. ಇಡೀ ಪಾಲಿಕೆಯ ಅಧಿಕಾರಿಗಳ ವ್ಯವಸ್ಥೆಯನನು ಚಿಕ್ಕ ಹಾಗೂ ಚೊಕ್ಕ ಪದಗಳಲ್ಲಿ ಜಾಡಿಸಿತ್ತು.


ತುಂಗಾ ತರಂಗದ ವರದಿ ಆಧಾರದಲ್ಲಿ ತಡವಾಗಿಯಾದರೂ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಈಗ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸುವ ಹೊರಾಂಗಣದಲ್ಲಿ ನೆರಳಿನ ವ್ಯವಸ್ಥೆ ಮಾಡಿದ್ದಾರೆ. ಕುಡಿಯುವ ನೀರನ್ನು ಇಟ್ಟಿದ್ದಾರೆ. ಕುರ್ಚಿಗಳನ್ನು ಹಾಕಿದ್ದಾರೆ. ನಿಜಕ್ಕೂ ಇದು ಸಂತೋಷದ ಸಂಗತಿಯಯೇ ಹೌದು.
ತೆರಿಗೆ ಪಾವತಿಸಲು ಬರುವ ವೃದ್ಧರು, ಅಂಗವಿಲಕರು, ಮಹಿಳೆಯರು ಬಿಸಿಲ ಬೇಗೆಯಲ್ಲಿ ಬೆಂದು ಹಣ ಪಾವತಿಸಿ ದಾಖಲೆ ಪಡೆಯುವವರೆಗೆ ಕಾಯಬೇಕಿತ್ತು. ಈಗ ನೆರಳಿದೆ, ನೀರಿದೆ, ಕುಳಿತುಕೊಳ್ಳಲು ಆಸನಗಳಿವೆ. ಸಂತೋಷ. ಹಾಗೆಯೇ ವ್ಯವಸ್ಥೆ ಮಾಡಿಕೊಟ ಆಡಳಿತಕ್ಕೆ ಧನ್ಯವಾದ. ಆದರೆ ಇದು ನಾಲ್ಕು ದಿನದ ಜೂಜಾಟವಾಗದಿರಲಿ. ತುಂಗಾ ತರಂಗ ಇಂತಹ ಸೂಕ್ಷ್ಮ ವಿಚಾರಗಳನ್ನು ಕಣ್ಣುಬಿಟ್ಟು ನೋಡುತ್ತಲೇ ಇರುತ್ತದೆ.

Exit mobile version