ವಿನೋಬನಗರ ಇನ್ಸ್ ಸ್ಪೆಕ್ಟರ್ ರವಿ ನೇತೃತ್ವದಲ್ಲಿ ಆರೋಪಿ ಬಂಧನ
ವರುಷದ ಹಿಂದೆ ಕಳವು ಮಾಡಿದ್ದ ಈ ಆರೋಪಿ ಪತ್ತೆಗೆ ಇನ್ಸ್ಪೆಕ್ಟರ್ ರವಿ ನೇತೃತ್ವದ ತಂಡಕ್ಕೆ ಸಿಸಿಕ್ಯಾಮರಾ ದಾಖಲೆ ಮೂಲ ಅಸ್ತ್ರವಾಗಿತ್ತೆನ್ನಲಾಗಿದೆ. ಈ ಆರೋಪಿ ಹಳೇ ಕಳ್ಳ ಎನ್ನಲಾಗಿದ್ದು ಬೇರೆ ರಾಜ್ಯದಲ್ಲಿ ಮೂರು ವರುಷ ಬಂದಿತನಾಗಿದ್ದನೆನ್ನಲಾಗಿದೆ.
ಶಿವಮೊಗ್ಗ, ಫೆ.21:
ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಹಾಗೂ ಕಳುವಾದ ಮಾಲಿನ ಪತ್ತೆ ಬಗ್ಗೆ
ಪ್ರಶಾಂತ್ ಮುನ್ನೋಳಿ, Dsp, ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ
ರವಿ. ಎನ್ ಎಸ್, CPI ವಿನೋಬನಗರ ವೃತ್ತ ರವರ ನೇತೃತ್ವದ
ಕೋಮಲ, PSI ಜಯನಗರ ಪೊಲೀಸ್ ಠಾಣೆ, ಸೋಮು. ಕೆ ASI ಹಾಗೂ ಸಿಬ್ಬಂದಿಗಳಾದ ಹೆಚ್. ಸಿ ಸುಧಾಕರ್,
ಪಿ. ಸಿ ಆದರ್ಶ್, ಶಿವರಾಜ್ ನಾಯಕ್, ರಾಮಕೃಷ್ಣ, ರೋಷನ್ ರವರುಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿ ರಮೇಶ, 67 ವರ್ಷ ವಾಸ ಚಿಕ್ಕಮಗಳೂರು ಈತನನ್ನು ದಸ್ತಗಿರಿ ಮಾಡಿ
ಆರೋಪಿತನಿಂದ 2020ನೇ ಸಾಲಿನಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ 01 ಮನೆಗಳ್ಳತನ ಪ್ರಕರಣ ಹಾಗೂ
ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ 01 ಮನೆಗಳ್ಳತನ ಪ್ರಕರಣ ಸೇರಿ
ಒಟ್ಟು 02 ಮನೆಗಳ್ಳತನ ಪ್ರಕರಣಗಳನ್ನು ಬೇಧಿಸಿ
ಒಟ್ಟು ರೂ 12,00,000 /- (ರೂಪಾಯಿ ಹನ್ನೆರಡು ಲಕ್ಷ) ಮೌಲ್ಯದ ಒಟ್ಟು 255 ಗ್ರಾಂ ತೂಕದ ಬಂಗಾರದ ಆಭರಣಗಳು
ಹಾಗೂ 170 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು
ವಶಪಡಿಸಿಕೊಂಡು
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತದೆ ಎಂದು ಎಂದು ಪೊಲೀಸ್ ಅಧೀಕ್ಷಕರಾದ ಕೆ.ಎಂ ಶಾಂತರಾಜು ರವರು ತಿಳಿಸಿರುತ್ತಾರೆ