Site icon TUNGATARANGA

ಫೆ.22ರಂದು ದೇವಕಾತಿಕೊಪ್ಪ ವ್ಯಾಪ್ತಿಯಲ್ಲಿ ಕರೆಂಟ್ ಕಟ್

Lâmpadas incandescentes devem ser retiradas do mercado brasileiro até 2016 (Marcello Casal Jr/Agência Brasil)

ಶಿವಮೊಗ್ಗ‌ : ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಕುಂಸಿ ಉಪವಿಭಾಗದ ಶ್ರೀರಾಂಪುರ ಶಾಖಾ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿಯ ಪ್ರಗತಿಯಲ್ಲಿರುವುದರಿಂದ ಆಲ್ಕೋಳ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ

ಎ.ಎಫ್-13, ಮತ್ತು ಎ.ಎಫ್-19 ಮಾರ್ಗಗಳ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಾದ ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ ಬೋವಿಕಾಲೋನಿ, ಅಂಬೇಡ್ಕರ್ ನಗರ, ಭೈರನಕೊಪ್ಪ, ಹನುಮಂತ ನಗರ, ವೆರ್ಟನರಿ ಕಾಲೇಜ್, ಕ್ರಷರ್ಸ್ ವ್ಯಾಪ್ತಿ, ಕೆ.ಹೆಚ್.ಬಿ.ಲೇಔಟ್, ಮಹಾಲಕ್ಷೀ ಲೇಔಟ್, ಶಿವಸಾಯಿ

ಕ್ಯಾಸ್ಟಿಂಗ್ ಪ್ಯಾಕ್ಟರಿ ಹಾಗೂ ಇನ್ನಿತರೆ ಸುತ್ತಮುತ್ತ ಪ್ರದೇಶಗಳ ವ್ಯಾಪ್ತಿಯಲ್ಲಿ ಫೆ.22 ರಂದು ಬೆಳಗ್ಗೆ 10.00 ಘಂಟೆಯಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪಾ&ನಿ ಉ.ವಿ.ದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Exit mobile version