Site icon TUNGATARANGA

ಶಿವಮೊಗ್ಗದಲ್ಲಿಂದು ಮೂರು, ನಾಳೆ 22…?

ಮಲೆನಾಡು ಕೊರೊನಾಗೆ ನಿಜಕ್ಕೂ ತತ್ತರಿಸಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ನಿನ್ನೆ 23ಸೊಂಕು ತಗುಲಿದ ಬೆನ್ನಲ್ಲೇ ಇಂದು 3ಜನರಿಗೆ ಸೊಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ದುರಂತವೆಂದರೆ ನಾಳೆ 22 ಜನರಿಗೆ ಸೊಂಕು ಕಾಣಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಹೊರಬಿದ್ದಿರುವ ಮೂರು ಸೇರಿ ಜಿಲ್ಲೆಯಲ್ಲಿ ಒಟ್ಟು 176 ಜನರಿಗೆ ಸೊಂಕು ಕಾಣಿಸಿಕೊಂಡಿತ್ತು. ನಾಳಿನ ಇಪ್ಪತ್ತು ಸೇರ್ಪಡೆ ಸೇರಿದರೆ ದ್ವಿಶತಕದ ಸಮೀಪದಅಂಕೆ ತಲುಪುವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗಿದೆ.
ಈಗ 109 ಜನ ಬಿಡುಗಡೆಯಾಗಿದ್ದಾರೆ. 65 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀರಾ ಭಯ ಹುಟ್ಟಿಸಿರುವ ಶಿವಮೊಗ್ಗ ನಗರದ
ಸ್ವಾಮಿ ವಿವೇಕಾನಂದ ಬಡಾವಣೆ, ಕುಂಬಾರಗುಂಡಿ, ತುಂಗಾನಗರ ಸೀಲ್ಡೌನ್ ಆದ ನಂತರ ಈಗ ರಾಜೇಂದ್ರ ನಗರ,ವಿನೋಬನಗರ, ಶಿವಪ್ಪನಾಯ್ಕ ಬಡಾವಣೆ, ಜಿಎಸ್ ಕೆಎಂ ರಸ್ತೆ, ಭರ್ಮಪ್ಪ ಬೀದಿ ಸೇರಿದಂತೆ
ಭದ್ರಾವತಿ ಕಾಗದನಗರ, ಹಳೇನಗರ,ಶಿರಾಳಕೊಪ್ಪ, ತೀರ್ಥಹಳ್ಳಿ, ಶಿಕಾರಿಪುರದ ಹಲವು ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ನಿನ್ನೆ ಶಿವಮೊಗ್ಗ ಸೊಂಕಿತರ ಸಂಖ್ಯೆ 176ಆಗಿದ್ದರೆ, ಈಗಾಗಲೇ 109ಜನ ಗುಣಮುಖರಾಗಿದ್ದಾರೆ. ಚನ್ನಗಿರಿ ಮೂಲದ ಮಹಿಳೆ ಹಾಗೂ ಶಿಕಾರಿಪುರ ಮೂಲದ ಮಹಿಳೆ ಸೇರಿ ಇಬ್ಬರು ಸಾವು ಕಂಡಿದ್ದಾರೆ.
ಭಯದ ನಡುವೆ ಬದುಕುತಿರುವ ಮಲೆನಾಡಿನಲ್ಲಿ ಮಳೆಯಾಗುವ ಲಕ್ಷಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಅಗತ್ಯ ಎನ್ನಲಾಗುತ್ತಿದೆ.
ಅನುಮಾನದ ಹುತ್ತದಲ್ಲಿ
ಈಗಿನ 22 ಪ್ರಕರಣಗಳ ಅನುಮಾನ ವಿದೇಶ, ಅಂತರರಾಜ್ಯ, ರಾಜದಾನಿ ಹಾಗೂ ಕೊರೊನಾ ಸೊಂಕಿತರಿಂದ ಬಂದಿವೆ ಎನ್ನಲಾಗಿದೆ. ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಇದು ಕಾಣಿಸಿಕೊಂಡಿದೆ.

Exit mobile version