ಶಿವಮೊಗ್ಗ: ಭದ್ರಾವತಿಯ ವಿಐಎಸ್ ಎಲ್ ಕಛೇರಿ ಕ್ವಾರ್ಟರ್ಸ್ ನಲ್ಲಿ ಶ್ರೀಗಂಧದ ಮರ ಕಡಿದು ಸಾಗಿಸಲು ಯತ್ನಿಸಿದ್ದ ಮೂವರಿಗೆ ಭದ್ರಾವತಿ ನ್ಯಾಯಾಲಯ ತಲಾ ಐದು ವರ್ಷ ಸಾದಾ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ.
ಶಿವಮೊಗ್ಗದ ಸಮಿವುಲ್ಲ (39), ತೇನ್ ಸಿಂಗ್(41), ಸ್ಟ್ಯಾನ್ಲಿ (45) ಶಿಕ್ಷೆಗೆ ಒಳಗಾದವರು.
2018ರ ಜ.9ರ ರಾತ್ರಿ ವಿಐಎಸ್ ಎಲ್ ಕಛೇರಿ ಕ್ವಾರ್ಟರ್ಸ್ ನಲ್ಲಿ ಬೆಳೆದಿದ್ದ ಗಂಧದ ಮರ ಕಡಿದು ಸಾಗಿಸುತ್ತಿದ್ದಾಗ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಪಿಎಸ್ಐಗಳಾದ ಶಾಂತಲಾ ( ಹಾಲಿ ಶಿವಮೊಗ್ಗ ಮಹಿಳಾ ಠಾಣೆ) ಮತ್ತು ಸಿ. ಪ್ರಕಾಶ್ ( ಹರಪ್ಪನಹಳ್ಳಿ ಪೊಲೀಸ್ ಠಾಣೆ) ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
50 ಗ್ರಾಂ ತೂಕದ ಮಾಂಗಲ್ಯ ಸರ ಅಪಹರಣ
ಶಿವಮೊಗ್ಗ: ಸಾಗರದಲ್ಲಿ ಬೈಕ್ ನಲ್ಲಿ ಬಂದ ಕಳ್ಳನೋರ್ವ ಮಾರಿಕಾಂಬ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ 50 ಗ್ರಾಂ ತೂಕದ ಮಾಗಲ್ಯಸರ ಅಪಹರಿಸಿದ್ದಾನೆ.
ಸುಭಾಷ್ ನಗರದ ಮಹಾದೇವಿ (45) ಎಂಬುವವರು ಪೇಟೆಯಲ್ಲಿ ಕೆಲ ಸಾಮಾಗ್ರಿಗಳನ್ನು ಖರೀದಿಸಿ ಸ್ನೇಹಿತೆ ಜತೆ ನಡೆದುಕೊಂಡು ಹೋಗುವಾಗ ಎದುರಿಗೆ ಬೈಕ್ ನಲ್ಲಿ ಬಂದ ಕಳ್ಳ ಮಾಹದೇವಿ ಅವರ ಕುತ್ತಿಗೆಗೆ ಕೈ ಹಾಕಿ 2 ಲಕ್ಷ ರೂ. ಮೌಲ್ಯದ 50 ಗ್ರಾಂ ತೂಕದ ಸರ ಕದ್ದೊಯ್ದಿದ್ದಾನೆ. ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.