ನಮ್ಮ ಓದುಗರಿಗೆ ಸಮಗ್ರ ಮಾಹಿತಿ
ಶಿವಮೊಗ್ಗ, ಜೂ.29: ರಾಜ್ಯಾದ್ಯಂತ ಕೊರೊನಾ ಮಾಹಿತಿ ಪಡೆಯಲು ವೈದ್ಯರು, ಪೊಲೀಸರಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಕಷ್ಟಪಟ್ಟು ಸಂಗ್ರಹಿಸಿದ ಮಾಹಿತಿ ಭಯ ಮೂಡಿಸುತ್ತೆ.
ಕೆಮ್ಮು, ಶೀತ ಹಾಗೂ ಜ್ವರ ಮತ್ತಿತರೆ ವಿಷಯಗಳಾದ ಬಿಪಿ, ಶುಗರ್ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಲಭ್ಯವಾದ ಮಾಹಿತಿ ನಿಮಗಾಗಿ.
ಇಪ್ಪತ್ತು ಬಲಿ
ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ ಬರೋಬ್ಬರಿ 20 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 246ಕ್ಕೇರಿಕೆಯಾಗಿದೆ.
ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ನಾಲ್ವರು ಸೇರಿದಂತೆ ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಎಂಬಂತೆ 95 ಜನ ಮೃತಪಟ್ಟಿದ್ದರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಬೆಂಗಳೂರಿನಲ್ಲಿ 503 ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ 947 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15242ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗದಲ್ಲಿ ಇಪ್ಪತ್ತಕ್ಕೂ ಜಾಸ್ತಿ ಬಂದು ಆತಂಕ ಸೃಷ್ಟಿಸಿದೆ. ಮಾಹಿತಿ ನಿಮಗಾಗಿ
ನಮ್ಮೆಲ್ಲಾ ಓದುಗರಿಗಾಗಿ ಈ ಸಮಗ್ರ ಮಾಹಿತಿ