Site icon TUNGATARANGA

ಬೆಂಗಳೂರು ಥಂಡಾ… ಶಿವಮೊಗ್ಗದಲ್ಲಿ ಒಂದೂವರೆ ಶತಕ

ಬೆಂಗಳೂರು,ಜೂ.23: ದಿನ ಕಳೆಯುತ್ತಿದ್ದಂತೆ ರಾಜದಾನಿ ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ರುದ್ರ ನರ್ತನ ಶುರು ಮಾಡಿದ್ದು ಇಂದೂ ಸಹ ಹೊಸದಾಗಿ 738 ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಇಂದು ಒಂದೇ ದಿನ 1105 ಮಂದಿಗೆ ಸೋಂಕು ತಗುಲಿದೆ. 
ರಾಜ್ಯದಲ್ಲಿ ಕೊರೋನಾಗೆ ಇಂದು ಅತಿಹೆಚ್ಚು ಮಂದಿ ಬಲಿಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 226 ಕ್ಕೆ ಏರಿಕೆಯಾಗಿದೆ. 
ಇಂದು ಹೊಸದಾಗಿ 1105 ಪ್ರಕರಣಗಳು ವರದಿಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 14,295 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 7683 ಮಂದಿ ಗುಣಮುಖರಾಗಿದ್ದು ಡಿಸ್ಚಾರ್ಜ್ ಆಗಿದ್ದಾರೆ.  6382 ಜನರು ಸಕ್ರಿಯರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗ ತತ್ತರ
ಮಲೆನಾಡು ಕೊರೊನಾಗೆ ನಿಜಕ್ಕೂ ತತ್ತರಿಸಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಇಂದು ಐದು ಹೆಚ್ಚಿದ್ದು ನಿನ್ನೆಯ 13 ಹಾಗೂ ಇಂದಿನ 5 ಸೇರಿ ಒಟ್ಟು 151 ಜನರಿಗೆ ಸೊಂಕು ಕಾಣಿಸೊಕೊಂಡಿದೆ.
ನಾಳೆ ಇನ್ನಷ್ಡು ಭಯದ ಫಲಿತಾಂಶ ಬರಲಿದೆ ಎನ್ನಲಾಗಿದೆ.
ಸ್ವಾಮಿ ವಿವೇಕಾನಂದ ಬಡಾವಣೆ, ಕುಂಬಾರಗುಂಡಿ, ತುಂಗಾನಗರ ಸೀಲ್ಡೌನ್ ಆದ ನಂತರ ಈಗ ರಾಜೇಂದ್ರ ನಗರ, ಜಿಎಸ್ ಕೆಎಂ ರಸ್ತೆ, ಭರ್ಮಪ್ಪ ಬೀದಿ ಸೇರಿದಂತೆ ಹಲವೆಡೆ ಸೀಲ್ಡೌನ್ ಮಾಡಲಾಗಿದೆ. ಮೂವರು ವೈದ್ಯರಿಗೆ ಸೊಂಕು ಕಾಣಿಸಿಕೊಂಡಿದೆ.
ಭದ್ರಾವತಿ ಕಾಗದನಗರ, ಶಿರಾಳಕೊಪ್ಪ, ತೀರ್ಥಹಳ್ಳಿ ಶಿಕಾರಿಪುರದ ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ಪ್ರಸಕ್ತ ಶಿವಮೊಗ್ಗ ಸೊಂಕತರ ಸಂಖ್ಯೆ 151 ಆಗಿದ್ದರೆ, ಈಗಾಗಲೇ 109ಜನ ಗುಣಮುಖರಾಗಿದ್ದಾರೆ. ಚನ್ನಗಿರಿ ಮೂಲದ ಮಹಿಳೆ ಹಾಗೂ ಶಿಕಾರಿಪುರ ಮೂಲದ ಮಹಳೆ ಸೇರಿ ಇಬ್ಬರು ಸಾವು ಕಂಡಿದ್ದಾರೆ.
ಭಯದ ನಡುವೆ ಬದುಕುತಿರುವ ಮಲೆನಾಡಿನಲ್ಲಿ ಮಳೆಯಾಗುವ ಲಕ್ಷಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಅಗತ್ಯ ಎನ್ನಲಾಗುತ್ತಿದೆ.
ರಾತ್ರಿ ಲಾಕ್ ಡೌನೇನಿಲ್ಲ
ಸರ್ಕಾರದ ನಿಯಮಾನುಸಾರ ರಾತ್ರಿ ಎಂಟರಿಂದ ಬೆಳಗಿನ ಜಾವತನಕದ ಲಾಕ್ ಡೌನ್ ಪೊಲೀಸರ ಬೆದರಿಕೆಯಿಂದ ಅಂಗಡಿ ಬಾಗಿಲು ಮುಚ್ಚಿಸಿದೆಯಷ್ಟೆ. ಉಳಿದಂತೆ ನಾರ್ಮಲ್ ಆಗಿತ್ತು.

Exit mobile version