Site icon TUNGATARANGA

ಆರೆಂಜ್ ಅಲರ್ಟ್, ನದಿಪಾತ್ರದ ಜನ ಎಚ್ಚರಿಕೆಯಿಂದ ಇರಲು ಶಿವಮೊಗ್ಗ ಪಾಲಿಕೆ ಸೂಚನೆ, ಅಗತ್ಯವಿದ್ರೆ ಸಹಾಯವಾಣಿಗೆ ಕರೆ ಮಾಡಿ

ಶಿವಮೊಗ್ಗ, ಡಿ.03:
ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಇಡೀ ವ್ಯವಸ್ಥೆ ರಕ್ಷಣಾ ಕಾರ್ಯಕ್ಕೆ ಸಕ್ರಿಯವಾಗಿದ್ದು ಶಿವಮೊಗ್ಗ ಮಹಾನಗರ ಪಾಲಿಕೆ ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸೂಚನೆ ನೀಡಿದೆ.


ಆರೆಂಜ್ ಅಲಾರ್ಟ್ ಘೋಷಣೆಯಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿ ನದಿ ಅಕ್ಕಪಕ್ಕದಲ್ಲಿ ಸುಳಿದಾಡದಂತೆ ಹಾಗೂ ಸಕಾಲದಲ್ಲಿ ತುರ್ತು ಸಂದರ್ಭದಲ್ಲಿ ಸಹಾಯ ಬೇಕಿದ್ದರೆ ತಾವುಗಳು ಮಹಾನಗರ ಪಾಲಿಕೆಯ ಸಹಾಯವಾಣಿಯನ್ನು ಈ ಕೆಳಕಂಡ ದೂರವಾಣಿ ಮೂಲಕ ಸಂಪರ್ಕಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.
ದೂರವಾಣಿ ಸಂಖ್ಯೆ18004257677

Exit mobile version