ಶಿವಮೊಗ್ಗ,ಫೆ.06:
ಸಹ್ಯಾದ್ರಿ ಮಹಿಳಾ ಪಟ್ಟಣ ಸಹ ಕಾರ ಬ್ಯಾಂಕ್ ನ ಚುನಾವಣೆಯಲ್ಲಿ ಬರ್ಜರಿ ಜಯ ಸಾಧಿಸಿದ್ದ ಹಾಲಿ ಅಧ್ಯಕ್ಷೆ ಪಿ. ವೀರಮ್ಮ ಅವರ ತಂಡದಿಂದ ಮತ್ತೆ ವೀರಮ್ಮ ಅವರನ್ನೇ ಅಧ್ಯಕ್ಷರಾಗಿ ಮುಂದುವರೆಸಲು ನಿರ್ಧರಿಸಿದ್ದು, ನಿನ್ನೆ ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ.
ನಿನ್ನೆ ನಡೆದ ನೂತನ ಸಮಿತಿ ಸಭೆಯಲ್ಲಿ ವೀರಮ್ಮ ಮತ್ತೆ ಅಧ್ಯಕ್ಷರಾಗಿದ್ದು , ಸುನೀತಾ ಜಿ.ರಾವ್ ಅವರು ಉಪಾಧ್ಯಕ್ಷರಾಗಿದ್ದಾರೆ.
ಕಳೆದ ಭಾನುವಾರ ನಡೆದ ಚುನಾವಣೆಯಲ್ಲಿ, ಹಾಲಿ ಅಧ್ಯಕ್ಷೆ ಪಿ. ವೀರಮ್ಮ ತಂಡ ಬರ್ಜರಿ ಗೆಲುವು ಸಾಧಿಸಿತ್ತು.
ಹನ್ನೆರಡು ನಿರ್ಧೇಶಕರ ಸ್ಥಾನದ ಚುನಾವಣೆಯಲ್ಲಿ ವೀರಮ್ಮ ಅವರ ತಂಡದಲ್ಲಿ ಸ್ಪರ್ಧಿಸಿದ್ದ ಹತ್ತು ಜನರಲ್ಲಿ ಹತ್ತೂ ಜನ ಗೆಲುವು ಸಾಧಿಸಿದ್ದರು.
ವಿರೋಧವಾಗಿ ಸ್ಪರ್ಧಿಸಿದ್ದ ಯಶೋಧ ಮಂಜುನಾಥ್ ತಂಡದಿಂದ ಸ್ಪರ್ಧಿಸಿದ್ದ ಹನ್ನೆರಡು ಜನರಲ್ಲಿ ಇಬ್ಬರು ಮಾತ್ರ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ಆ ಚುನಾವಣೆಯಲ್ಲಿ
ಹಾಲಿ ಅಧ್ಯಕ್ಷೆ ಪಿ. ವೀರಮ್ಮ , ಸುನಿತಾ ಜಿ.ರಾವ್, ಪ್ರೇಮ ಜಿ. ಹೆಚ್., ಪುಷ್ಪಲತಾ ಪಿ ಎಸ್. , ಉಮಾ ರವಿಶಂಕರ್, ಕವಿತಾ, ತಬಸುಮ್ ಅರಾ, ಸುನೀತಾ ಕುಮಾರಿ, ಮಂಜುಳಾಬಾಯಿ, ಸುಧಾಮಣಿ, ಉಷಾ ಪ್ರಕಾಶ್, ಸುಮನಾ ರಾಣಿ , ಯಶೋಧ ಮಂಜುನಾಥ್, ಉಮಾ ಸುರೇಶ್, ನಿರ್ದೇಶಕರಾಗಿ ಆಯ್ಕೆಯಾಗಿದ್ದರು.