Site icon TUNGATARANGA

ಅಯೋಧ್ಯೆ ಹಾಗೂ ಕಾಶಿವಿಶ್ವನಾಥನ ಬೆಳ್ಳಿಕೋಡ್ ನಾಣ್ಯ ಹಾಗೂ ಪ್ರಸಾದ ಶಿವಮೊಗ್ಗದ ಪ್ರತಿ ಮನೆ ಮನೆಗೂ ಹಂಚಿಕೆ:ಮಾಜಿ ಜಿ.ಪಂ. ಸದಸ್ಯ ಕೆ.ಈ.ಕಾಂತೇಶ್ |ನನ್ನ ಮೇಲೆ ಕೇಸ್ ದಾಖಲಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಮಲ್ಲಿಕಾರ್ಜುನ ಖರ್ಗೆಯವರ ಮೇಲೂ ಕೂಡ:ಕೇಸ್ ದಾಖಲಿಸಿ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾಂಗ್ರೇಸ್ ಸರ್ಕಾರದ ವಿರುದ್ದ ಕಿಡಿ

ಶಿವಮೊಗ್ಗ,ನ.30: ಆಯೋಧ್ಯೆ ಮತ್ತು ಕಾಶಿ ಯಾತ್ರೆಯು ನಮ್ಮ ಜನ್ಮವನ್ನು ಸಾರ್ಥಕಗೊಳಿಸಿದೆ ಎಂದು ಮಾಜಿ ಜಿ.ಪಂ. ಸದಸ್ಯ ಕೆ.ಈ.ಕಾಂತೇಶ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ.23ರಂದು ಸುಮಾರು 1,600 ಯಾತ್ರಾರ್ಥಿಗಳನ್ನು ನಾವು ವಿಶೇಷವಾದ ರೈಲಿನಲ್ಲಿ ಆಯೋಧ್ಯೆ ಮತ್ತು ಕಾಶಿಗೆ ಯಾತ್ರೆ ಕರೆದುಕೊಂಡು ಹೋಗಿದ್ದೆವು. ಈ ಯಾತ್ರೆಯೂ ಅತ್ಯಂತ ಯಶಸ್ವಿಯಾಗಿ ಮನಸ್ಸನ್ನು ಹರ್ಷಗೊಳಿಸಿದೆ. ಯಾವ ಚಿಕ್ಕ ಲೋಪದೋಷವು ಇಲ್ಲದಂತೆ ನಡೆದಿದೆ. ಒಂದು ರೀತಿಯ ಸಾರ್ಥಕ ಮನೋಭಾವ ನಮಗೆ ಬಂದಿದೆ. ಯಾತ್ರಾರ್ಥಿಗಳು ಕೂಡ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಹೇಳಿದ್ದು, ನಮಗೆ ಸಂತೋಷ ತಂದಿದೆ ಎಂದರು.

ಆಯೋಧ್ಯೆಯಲ್ಲಿ ಗುರುಗೋಪಾಲಜಿ ಅವರ ಪೂರ್ಣ ಸಹಕಾರ ಇತ್ತು. ಮತ್ತು ಕಾಶಿಯ ಜಗದ್ಗುರುಗಳು ದೆಹಲಿಯಲ್ಲಿದ್ದರು ಕೂಡ ಬಂದು ನಮ್ಮನ್ನು ಹರಸಿದರು. ಇದು ಕೂಡ ನಮಗೆ ಸಂತೋಷವಾಯಿತು. ಒಟ್ಟಾರೆ ಈ ಯಾತ್ರೆ ಬಹುಜನ್ಮದ ಪುಣ್ಯ ಎಂದು ಮನದಟ್ಟಾಯಿತು ಎಂದರು.

ಯಾತ್ರೆಯ ಸಮಯದಲ್ಲಿ ಶಿವಮೊಗ್ಗದ ಸಾಕಷ್ಟು ಸಾರ್ವಜನಿಕರು ನಾವು ಬರುತ್ತಿದ್ದೆವು ಎಂದು ಪೋನ್ ಮಾಡುತ್ತಿದ್ದರು. ನಮಗೆ ಪ್ರಸಾದ ತನ್ನಿ ಎಂದು ಹೇಳಿದರು. ಇದನ್ನು ಮನದಲ್ಲಿಟ್ಟುಕೊಂಡು ನಾವು ಆಯೋಧ್ಯೆ ಮತ್ತು ಕಾಶಿಯಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪ್ರಸಾದವನ್ನು ತಂದಿದ್ದೇವೆ. ಅಲ್ಲದೆ ವಿಶೇಷವಾಗಿ ಬೆಳ್ಳಿಕೋಟ್ ಇರುವ ಕಾಯಿನ್‍ನ್ನು ಕೂಡ ತಂದಿದ್ದೇವೆ. ಈ ಕಾಯಿನ್‍ನಲ್ಲಿ ಒಂದು ಭಾಗದಲ್ಲಿ ಆಯೋಧ್ಯೆಯ ಶ್ರೀರಾಮ, ಮತ್ತೊಂದು ಭಾಗದಲ್ಲಿ ಕಾಶಿಯ ವಿಶ್ವನಾಥನ ಭಾವಚಿತ್ರವಿದೆ. ಒಂದು ಲಕ್ಷ ಕಾಯಿನ್ ತಂದಿದ್ದು, ಇದನ್ನು ಶಿವಮೊಗ್ಗದ ಪ್ರತಿಯೊಂದು ಮನೆಗೂ ಹಂಚಲಾಗುವುದು ಎಂದರು.

ಮನೆಮನೆಗೆ ಪ್ರಸಾದ ಮತ್ತು ನಾಣ್ಯವನ್ನು ಹಂಚುವ ಕಾರ್ಯಕ್ರಮಕ್ಕೆ ಡಿ.2ರಂದು ಶುಭಮಂಗಳ ಸಮುದಾಯ ಭವನದಲ್ಲಿ ಸಂಜೆ 6ಕ್ಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಈಗಾಗಲೇ ಯಾತ್ರೆಯನ್ನು ಪೂರೈಸಿ ಬಂದಿರುವ 1600 ಜನರಿಗೂ ಪ್ರಸಾದ ಮತ್ತು ನಾಣ್ಯವನ್ನು ಕೊಡಲಾಗುವುದು. ನಂತರ ಮಾರನೆಯ ದಿನ ಶಿವಮೊಗ್ಗದ ಪ್ರತಿ ಮನೆಗೂ ಪ್ರಸಾದ ನಾಣ್ಯ ತಲುಪಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಕುಬೇಂದ್ರಪ್ಪ, ವಾಗೀಶ್, ಚಿದಾನಂದ ಇದ್ದರು.

ಮುಸ್ಲಿಂರ ದಬ್ಬಾಳಿಕೆ 

ಸಾಧು ಸಂತರು ಧರ್ಮವನ್ನು ಉಳಿಸಲು ಆಕ್ರೋಶದಲ್ಲಿ ಕೆಲವು ಮಾತುಗಳನ್ನು ಹೇಳಿದರೆ, ಕಾಂಗ್ರೆಸ್ ಸರ್ಕಾರ ಇಂತವರ ವಿರುದ್ಧ ಕೇಸ್ ದಾಖಲಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಚಂದ್ರಶೇಖರ ಸ್ವಾಮೀಜಿಯವರು ಆಕ್ರೋದಲ್ಲಿ ಮುಸ್ಲಿಂರಿಗೆ ಮತದಾನ ಹಕ್ಕನ್ನು ನೀಡಬಾರದು ಎಂದು ಹೇಳಿದ್ದನ್ನೇ ಇಟ್ಟುಕೊಂಡು ಅವರ ವಿರುದ್ಧ ಕೇಸ್ ದಾಖಲಿಸಿಕೊಂಡಿರುವುದು ಸರಿಯಲ್ಲಿ ಮತ್ತು ಈಗಾಗಲೇ ಅವರು ಕ್ಷಮೆಯನ್ನು ಕೂಡ ಕೇಳಿದ್ದಾರೆ. ಸಾಧು ಸಂತರು ಕೆಲವೊಮ್ಮೆ ಧರ್ಮಕ್ಕಾಗಿ ಈ ರೀತಿ ಮಾತನಾಡುತ್ತಿರುವುದು ಸಹಜ ಎಂದರು.

ನನ್ನ ಮೇಲೆ ಕೇಸ್ ದಾಖಲಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಮಲ್ಲಿಕಾರ್ಜುನ ಖರ್ಗೆಯವರ ಮೇಲೂ ಕೂಡ ದಾಖಲಿಸಬೇಕಿತ್ತು. ಇದೇ ಮಾತು ಸ್ವಾಮೀಜಿಯವರ ಮೇಲೂ ಕೇಸ್ ಹಾಕಿದ್ದಕ್ಕೂ ಅನ್ವಯವಾಗುತ್ತದೆ ಎಂದರು.

Exit mobile version