Site icon TUNGATARANGA

ಬ್ರಾಹ್ಮಣ ಸಮುದಾಯದ ಬೇಡಿಕೆಯನ್ನು ಸರ್ಕಾರದವರೆಗೆ ಒಯ್ದು ಈಡೇರಿಸುವ ನಿಟ್ಟಿನಲ್ಲಿ ನನ್ನ ಹಂತದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ:ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಸಾಗರ : ಬ್ರಾಹ್ಮಣ ಸಮಾಜದಲ್ಲಿ ಮುಖಂಡರ ಸಂಖ್ಯೆ ಕಡಿಮೆ. ಬ್ರಾಹ್ಮಣ ಸಮುದಾಯದ ಬೇಡಿಕೆಯನ್ನು ಸರ್ಕಾರದವರೆಗೆ ಒಯ್ದು ಅದನ್ನು ಈಡೇರಿಸುವ ನಿಟ್ಟಿನಲ್ಲಿ ನನ್ನ ಹಂತದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಲ್ಲಿನ ಶೃಂಗೇರಿ ಶಂಕರಮಠದಲ್ಲಿ ಮಂಗಳವಾರ ಶೃಂಗೇರಿ ಶಂಕರಮಠದ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಅವರು

ಮಾತನಾಡುತ್ತಾ, ಜನವರಿ ತಿಂಗಳಿನಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ್ ಹಾರ‍್ನಳ್ಳಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಸಮುದಾಯದ ಸಂಘಟನೆಗೆ ಸಮಾವೇಶದಲ್ಲಿ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.


ತಾಲ್ಲೂಕಿನಲ್ಲಿ ಮಂಗನಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಕಾಯಿಲೆ ಹರಡದಂತೆ ಮುಂಜಾಗೃತೆ ವಹಿಸಲಾಗುತ್ತಿದ್ದು ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತದೆ. ಸಾಗರ ತಾಲ್ಲೂಕಿಗೆ ಮೊಬೈಲ್ ಮೆಡಿಕಲ್ ಯೂನಿಟ್ ಬಿಡಲು ಚಿಂತನೆ ನಡೆದಿದೆ. ಈ ಯೂನಿಟ್‌ನಲ್ಲಿ ತಜ್ಞವೈದ್ಯರು, ನರ್ಸ್ ಇನ್ನಿತರರು ಇದ್ದು, ಸ್ಥಳದಲ್ಲಿಯೆ ಚಿಕಿತ್ಸೆ ನೀಡುತ್ತಾರೆ ಎಂದರು.
ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿ, ಸಚಿವ ದಿನೇಶ್ ಗುಂಡೂರಾವ್ ರಾಜಕೀಯ ಕ್ಷೇತ್ರದಲ್ಲಿ

ಸ್ವಯಂಪ್ರತಿಭೆಯಿಂದ ಮೇಲೆ ಬಂದಿದ್ದಾರೆ. ಶೃಂಗೇರಿ ಶಂಕರಮಠದ ಶ್ರೇಯೋಭಿವೃದ್ದಿಯೂ ಆಗಿರುವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಸಚಿವರಾಗಿ ಒಂದಷ್ಟು ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ. ಶೃಂಗೇರಿ ಶಂಕರಮಠದ ಸುವರ್ಣ ಭಾರತೀ ಮಹೋತ್ಸವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡುವ ಮೂಲಕ ನಮ್ಮಲ್ಲಿ ಉತ್ಸಾಹ ತುಂಬಿದ್ದಾರೆ ಎಂದು ಹೇಳಿದರು.


ಶಾಸಕ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಪ್ರಮುಖರಾದ ಕೆ.ಎಸ್.ಸುಬ್ರಾವ್, ಐ.ಎನ್.ಸುರೇಶಬಾಬು, ಅನಿತಾ ಕುಮಾರಿ, ಮಾ.ಸ.ನಂಜುಂಡಸ್ವಾಮಿ, ಸರಸ್ವತಿ ನಾಗರಾಜ್, ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು

Exit mobile version