Site icon TUNGATARANGA

ನ.27 ರಿಂದ ಅಂತರ್‌ ಕಾಲೇಜು ಚೆಸ್‌ ಪಂದ್ಯ

ಶಿವಮೊಗ್ಗ n25 : ರಾಷ್ಟ್ರೀಯ ಶಿಕ್ಷಣ ಸಮಿತಿ, ಕುವೆಂಪು ವಿಶ್ವವಿದ್ಯಾಲಯ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಐಕ್ಯೂಎಸಿ ವಿಭಾಗ, ದೈಹಿಕ ಶಿಕ್ಷಣ ವಿಭಾಗದಿಂದ ಇಲ್ಲಿನ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಚಂದನ ಸಭಾಂಗಣದಲ್ಲಿ ನ.27, 28 ರಂದು ಕುವೆಂಪು ವಿಶ್ವವಿದ್ಯಾಲಯದ ಅಂತರ್‌ ಕಾಲೇಜು ಪುರುಷ ಮತ್ತು ಮಹಿಳೆಯರ ಚೆಸ್‌ ಪಂದ್ಯಾವಳಿ ಹಾಗೂ ವಿವಿ ತಂಡಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕಾಲೇಜು ಪ್ರಚಾರ್ಯೆ ಪ್ರೊ.ಪಿ.ಆರ್.‌ ಮಮತ ತಿಳಿಸಿದ್ದಾರೆ.

ನ.27 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್‌, ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಎನ್.ಡಿ.ವಿರೂಪಾಕ್ಷ, ನಳಂದ ಚೆಸ್‌ ಅಕಾಡೆಮಿ ಅಧ್ಯಕ್ಷ ಕೃಷ್ಣ ಉಡುಪ, ಶಿರಸಿಯ ಚೆಸ್‌ ತೀರ್ಪುಗಾರ ಎಂ.ಮಂಜುನಾಥ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾಲೇಜಿನ

ಪ್ರಾಚಾರ್ಯೆ ಪ್ರೊ.ಪಿ.ಆರ್.‌ ಮಮತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಕೆ.ಎಂ.ನಾಗರಾಜು, ಐಕ್ಯೂಎಸಿ ವಿಭಾಗ ಸಂಚಾಲಕ ಪ್ರೊ.ಎನ್‌.ಮಂಜುನಾಥ ಉಪಸ್ಥಿತಿ ಇರುವರು. ನ.28 ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಸಮಾರೋಪ ಭಾಷಣ ಮಾಡುವರು ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version