Site icon TUNGATARANGA

ಅಸಲಿ ಲೋಕದಲ್ಲಿ ನಕಲಿ ಮುಖಗಳು!, ನೆಗಿಟೀವ್ ಥಿಂಕಿಂಗ್ ಅಂಕಣದೊಳಗಿನ ಒಂದ್ ಸುತ್ತು ಹೇಗಿದೆ ನೋಡ್ರಿ

ಇಡೀ ಜಗತ್ತು, ನಮ್ಮೂರು, ನಮ್ಮ ದೇಶ ಯಾವುದು ಬದಲಾವಣೆ ಆಗಿಲ್ಲ, ಆಗುವುದೂ ಇಲ್ಲ.ಅದರೊಳಗಿನ ನಮ್ಮ ಮುಖಗಳು ಅದರಲ್ಲಿನ ನಮ್ಮ ಮನಸ್ಸು ಬದಲಾವಣೆ ಆಗಿದೆ ಅಷ್ಟೇ.
ನಾವು ಇದ್ದರಷ್ಟೇ, ಇಲ್ಲದಿದ್ದರಷ್ಟೇ ಈ ಲೋಕ ಅಸಲಿ ಆಗಿರುತ್ತದೆ. ಅಲ್ಲಿ ನಕಲಿ ಮುಖಗಳು ತಿರುಗಾಡುತ್ತವೆ ಎಂಬುದಷ್ಟೇ ವಾಸ್ತವದ ಚಿತ್ರಣ. ಜಗದಲ್ಲಿ ಯಾರು ಅನಿವಾರ್ಯ ಅಲ್ಲ ಯಾರೋ ಒಬ್ಬರು ಸೀಮಿತವಲ್ಲ.


ಜನಿಸಿದ ಕ್ಷಣದ ಪೂರ್ವದಲ್ಲೂ ಇದೇ ಜಗತ್ತು, ಇದೇ ಲೋಕ ಹಾಗೆಯೇ ಇತ್ತು. ಮಗುವಾಗಿ, ಯುವಕನಾಗಿ, ವಯಸ್ಕನಾಗಿ, ಕೊನೆಗೆ ಮಗುವಿನಂತೆ ವೃದ್ಧನಾಗಿ ಕೊನೆಯ ದಿನ ಕಾಣುವಾಗಲೂ ಜಗತ್ತು ಹಾಗೇ ಇರುತ್ತದೆ.
ನಾವು ಬದಲಾಗಿರುತ್ತೇವೆ, ಬದಲಾವಣೆಗಳನ್ನು ಬಯಸುತ್ತೇವೆ, ಬದಲಾವಣೆಗಳನ್ನು ನಮ್ಮಷ್ಟಕ್ಕೆ ನಾವೇ ಮಾಡಿಕೊಳ್ಳುತ್ತೇವೆ. ಲೋಕ ಯಾವಾಗಲೂ ಅಸಲಿಯೇ ಹೌದು. ಬದಲಾಗದು.

ಅಂಕಣ ಹೇಗಿದ್ದಾವೆ ನೋಡಿ

ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.
ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಅಂಕಣದ ಇಪ್ಪತ್ತೊಂದನೇ ಅಂಕಣದ ಮತ್ತೊಂದು ವಿಶೇಷ. ಎಕ್ಕುಟ್ಟೋಯ್ತು ಹೊಟ್ಟೆ…, ಯಾಕೆ ಗೊತ್ತಾ? ಎಂಬುದು ಇಂದಿನ  ಡಿಫರೆಂಟ್ ವಿಷಯದ ಅಂಕಣ ಓದಿ.
ನೆಗೆಟಿವ್ ಥಿಂಕಿಂಗ್ ಕಾಲಂಗೆ ಮೊದಲಿನಿಂದಲೂ ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.


ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.


ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ”, “ಒಳ್ಳೆಯವರಾದ್ರೆ ನಾಕಾಣೆ ಸಾಲ ಸಿಗೊಲ್ಲ” ಹಾಗೂ “ನಂಬಿಕೆ ದ್ರೋಹದ ಮನಸುಗಳೇ ಹೊಲಸು” ಕೆಟ್ಟ ಕಣ್ಣುಗಳಿಂದ ದೂರ ಇರ್ರಿ”” ಹಣದ ಲಾಲಸೆಗೆ ರಾಜಕಾರಣ”  ಸಂಪನ್ನರನ್ನ ಕೆಣಕಬ್ಯಾಡ್ರಿ..!” , “ಅತಿಯಾದ ತಾಳ್ಮೆ ಆತಂಕ ತಂದೀತು ಜೋಕೆ” “ಬದುಕಿಗಾಗಿ ಮನಸಿಗೆ ತೇಪೆ ಬೇಕೆ?” “ತೀರಾ ಜಾಸ್ತಿ ಸಲಿಗೆ, ಸದರ ಬ್ಯಾಡ್ರಿ”, “ರಾಜೀ ಪಂಚಾಯ್ತೀ ಎಂಬುದೇ ನಾಟ್ಕ”, “ಇವನು ಆತ್ಮೀಯ, ನಂಬಿಕಸ್ತ ಎಂದು ತಿಳಿಕೊಳ್ಳಲು ನಾಕಾಣೆ ಸಾಲಕೊಡ್ತೀ”
“ಬಡ್ಡಿ, ದಾಖಲೆ ಇಲ್ದೆ ಸಾಲಕೊಟ್ರೇ ನೀವೇ ಬಡ್ಡಿ ಕೊಡ್ಬೇಕಾಗುತ್ತೆ., “ಈ ನಮ್ ಜನಸೂಕ್ಷ್ಮ ಆದಾಗಲೇ ಹೆಚ್ಚಿದ್ದು ಮೋಸಗಾರತನ!” ಯಾವಾಗ್ಲೂ ಕಾಸಿಲ್ಲ ಅನ್ಬೇಡ್ರೀ, ಭಗವಂತ ಅಸ್ತು ಅಂತಾನಂತೆ..!, “ನಾನು, ನನ್ನಿಂದ್ಲೇ, ನನ್ ಬಿಟ್ರೆ ಎಂತಿಲ್ಲ ಅನ್ಬೇಡ್ರಿ..!”  ಅಂಕಣಗಳನ್ನು ಓದಿದ್ದೀರಿ.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು,

ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳ ಕುರಿತಂತೆ ಓದಿದ್ದೀರಿ. ಇಂದು ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
   – ಸಂ

Exit mobile version