Site icon TUNGATARANGA

ಇಪಿ ಅನುಪಾತ ಪರಿಷ್ಕರಣೆಗೊಳಿಸಲು ಚುನಾವಣಾ ವೀಕ್ಷಕರ ಸೂಚನೆ 

ಶಿವಮೊಗ್ಗ ನ.23

 ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ) ರಾಜ್ಯ ಸರಾಸರಿಗಿಂತ ಹೆಚ್ಚಿದ್ದು ಇದನ್ನು ತಗ್ಗಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರಾದ ಡಾ.ಕೆ.ವಿ.ತ್ರಿಲೋಕ್ ಚಂದ್ರ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ಕ್ಕೆ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


 ಇಪಿ ರೇಷಿಯೋ ಜಿಲ್ಲೆಯಲ್ಲಿ 78 ಇದೆ. ಸರಾಸರಿ 68 ರಿಂದ 69 ಇರಬೇಕು. ಆದ್ದರಿಂದ ಎಲ್ಲ ಕ್ಷೇತ್ರವಾರು ಮತ್ತು ಪಾರ್ಟ್ವಾರು ಅಗತ್ಯವಾದ ವಿಶ್ಲೇಷಣೆ ನಡೆಸಿ ಹಾಗೂ ಇ-ಜನ್ಮ ಪೋರ್ಟಲ್‌ನಿಂದ ಮಾಹಿತಿ ಪಡೆದು ಕಡಿಮೆ ಮಾಡಬೇಕು.


 ಗೈರು ಮತದಾರರು, ಮರಣ ಹೊಂದಿದ ಮತ್ತು ಇತರೆಡೆ ವರ್ಗಾವಣೆಯಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಫಾರಂ ಸಂಖ್ಯೆ 7 ಅಪ್‌ಡೇಟ್ ಆಗಬೇಕು. ಮುಂದಿನ ಸಭೆಯೊಳಗೆ ಇಪಿ ರೇಷಿಯೋ ಸುಧಾರಣೆಯಾಗಬೇಕು. ಪಾಲಿಕೆ ವ್ಯಾಪ್ತಿಯಲೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಹಾಗೂ ಯುವ ಮತದಾರರು ಸೇರಿದಂತೆ ಮತದಾರರ ನೋಂದಣಿಯನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಸೂಚನೆ ನೀಡಿದರು.


 ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಕ್ಷೇತ್ರವಾರು ಇಆರ್‌ಓ ಮತ್ತು ಎಇಆರ್‌ಓ ಗಳನ್ನು ನೇಮಿಸಿ, ತರಬೇತಿಯನ್ನು ನೀಡಲಾಗಿದೆ. ಒಟ್ಟು 1793 ಮತಗಟ್ಟೆಗಳಿದ್ದು ಎಲ್ಲ ಮತಗಟ್ಟೆಗಳಿಗೆ ಬಿಎಲ್‌ಓ ಗಳ ನೇಮಕ ಆಗಿದೆ.
ದಿ: 29-10-2024 ಕ್ಕೆ ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು,
ದಿ: 29-10-2024 ರಿಂದ 28-11-2024 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಕರೆಯಲಾಗಿದೆ. ದಿ: 09-11-204, 10-11-2024, 23-11-2024 ಮತ್ತು
24-11-2024 ರಂದು ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಅಭಿಯಾನ ಮಾಡಲಾಗುತ್ತಿದೆ. ದಿ: 24-12-2024ಕ್ಕೆ ಹಕ್ಕು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ದಿ: 01-01-2025ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟಕ್ಕೆ ಕ್ರಮ ವಹಿಸಲಾಗುವುದು ಮತ್ತು ದಿ: 06-01-2025 ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
 ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಾರ ಪ್ರಸ್ತುತ 1520326 ಮತದಾರರು ಇದ್ದಾರೆ. 2024 ರ ಅಂತಿಮ ಪಟ್ಟಿ ಪ್ರಕಾರ 1482938 ಮತದಾರರು ಇದ್ದರು.


ದಿ: 29-10-2024 ಕ್ಕೆ ಲಿಂಗಾನುಪಾತ 1031 ಇದೆ. ಕಳೆದ ಬಾರಿ 1022 ಇತ್ತು. ಜನವರಿಯಿಂದ ಜೂನ್‌ವರೆಗೆ 18 ರಿಂದ 19 ವಯಸ್ಸಿನ 18222 ಮತದಾರರು ನೋಂದಣಿಯಾಗಿದ್ದಾರೆ. 80+ ವರೆಗೆ ಒಟ್ಟಾರೆ 1520326 ಜನ ಮತದಾರರ ಪಟ್ಟಿಯಲ್ಲಿದ್ದಾರೆ.
 ಇಪಿ ರೇಷಿಯೋ ಪುರುಷ 78.87 ಮತ್ತು 79.07 ಒಟ್ಟು 78.99 ಇದ್ದು ಇದನ್ನು ಕಡಿತಗೊಳಿಸಲು ಫಾರಂ ನಂ 7, ವರ್ಗಾವಣೆ, ಮರಣ ಗೈರು ಮತದಾರರ ಡಿಲೀಷನ್ ಕೆಲಸ ಮಾಡಲಾಗುತ್ತಿದೆ. ಇದನ್ನು ಎಲ್ಲ ಕ್ಷೇತ್ರ ಮತ್ತು ಪಾರ್ಟ್ವರು ಇನ್ನೂ ಪರಿಣಾಮಗೊಳಿಸಲಾಗುವುದು ಎಂದು ತಿಳಿಸಿದರು.
 ಜಿ.ಪಂ ಸಿಇಓ ಎನ್.ಹೇಮಂತ್, ಐಎಎಸ್ ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಸಿ ಸತ್ಯನಾರಾಯಣ್, ಚುನಾವಣಾ ತಹಶೀಲ್ದಾರ್ ಪ್ರದೀಪ್, ತಾಲ್ಲೂಕುಗಳ ತಹಶೀಲ್ದಾರರು, ತಾ.ಪಂ ಗಳ ಇಓ ಗಳು ಮತ್ತು ಚುನಾವಣೆಗೆ ಸಂಬAಧಿಸಿದ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Exit mobile version