ಸಾಗರ, ಫೆ.೩:
ಇಲ್ಲಿನ ಬಿ.ಎಚ್.ರಸ್ತೆಯ ಎಲ್.ಐ.ಸಿ. ಕಚೇರಿ ಎದುರು ಮಂಗಳವಾರ ತಡರಾತ್ರಿ ಬೈಕೊಂದು ಅಂಬ್ಯುಲೆನ್ಸ್ ಡಿಕ್ಕಿ ಹೊಡೆದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬಿ.ಎಚ್.ರಸ್ತೆಯಲ್ಲಿ ೧೦೮ ಅಂಬ್ಯುಲೆನ್ಸ್ ವಾಹನವು ಸೈರನ್ ಹಾಕದೆ ಅತಿವೇಗವಾಗಿ ಬಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂರುಕೈ ವಾಸಿಯಾಗಿರುವ ಗುರುಮೂರ್ತಿ ದಂಪತಿಗಳಿಗೆ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದಲ್ಲಿ ಗುರುಮೂರ್ತಿ ಅವರ ೬ ವರ್ಷದ ಪುತ್ರಿ ಸಹ ಹೋಗುತ್ತಿದ್ದರು. ಅಪಘಾತದಲ್ಲಿ ಗುರುಮೂರ್ತಿ ಅವರ ಕುಟುಂಬಕ್ಕೆ ಗಂಭೀರ ಗಾಯವಾಗಿದೆ.
ತಕ್ಷಣ ಸ್ಥಳದಲ್ಲಿ ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ ಸಹ ಕಾರ್ಯದರ್ಶಿ ಗಿರೀಶ್ ಕೋವಿ ಅವರು ತಮ್ಮ ಕಾರಿನಲ್ಲಿ ಗಾಯಗೊಂಡ ಗುರುಮೂರ್ತಿ ಕುಟುಂಬದವರನ್ನು ಉಪವಿಭಾಗೀಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕಳಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇವರಿಗೆ ನಗರಸಭೆ ಸದಸ್ಯ ಸೈಯದ್ ಜಾಕೀರ್ ಸಹಕಾರ ನೀಡಿದ್ದಾರೆ.
ಅಂಬ್ಯುಲೆನ್ಸ್ ಚಾಲಕ ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿದ್ದರಿಂದಲೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.