ಶಿವಮೊಗ್ಗ ನವೆಂಬರ್ 22: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ೨೦೨೪-೨೫ನೇ ಸಾಲಿನಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿರುವ ೧೦೦ ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಯಾವುದೇ ಫೆಲೋಶಿಪ್ ಪಡೆಯದಿದ್ದಲ್ಲಿ ಮಾಸಿಕ ರೂ. ೨೫,೦೦೦/- ಗಳಂತೆ ಶಿಷ್ಯ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಅರ್ಹ ವಿದ್ಯಾರ್ಥಿಗಳು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಡಿ. ೧೪ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.:೦೮೧೮೨-೨೦೦೨೬೬ /೯೪೮೨೭೬೨೩೫೦ ಗಳನ್ನು ಸಂಪರ್ಕಿಸುವುದು.
ರಂದು ಪಾಲಿಕೆ ಆಯ-ವ್ಯಯ ಪೂರ್ವಭಾವಿ ಸಭೆ
ಶಿವಮೊಗ್ಗ ನವೆಂಬರ್ ೨೨; : ಶಿವಮೊಗ್ಗ ಮಹಾನಗರ ಪಾಲಿಕೆಯ ೨೦೨೫-೨೬ನೇ ಸಾಲಿನ ಆಯ-ವ್ಯಯವನ್ನು ತಯಾರಿಸುವ ಬಗ್ಗೆ ಸಾರ್ವಜನಿಕರ ಹಾಗೂ ಸಂಘ-ಸಂಸ್ಥೆಗಳ ಮೊದಲನೇ ಹಂತದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ನ.೩೦ ರಂದು ಬೆಳಗ್ಗೆ ೧೧.೩೦ಕ್ಕೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ನಗರದ ನಾಗರಿಕರು ಹಾಗೂ ಸಂಘ-ಸಂಸ್ಥೆಯವರು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿಕಾರಿಪುರ ತಾಲೂಕು ಕೆ.ಪಿ.ಟಿ.ಸಿ.ಎಲ್. ಭೂನಷ್ಟ ಭಾದಿತರ ಸಭೆ
ಶಿವಮೊಗ್ಗ ನವೆಂಬರ್ ೨೨; : ಬನ್ನೂರು ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ಸಂಬಂಧಿಸಿದಂತೆ, ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕು, ಸಂಡ, ಆಮಟೇಕೊಪ್ಪ, ಕೋಟಿಪುರ, ಚುಂಚನಕೊಪ್ಪ, ಕಪ್ಪನಹಳ್ಳಿ, ಹೋತನಕಟ್ಟೆ, ರಾಂಪುರ, ಬನ್ನೂರು, ಗ್ರಾಮಗಳ ವಿವಿಧ ಜಮೀನುಗಳಲ್ಲಿ ೧೧೦ಕೆವಿ ವಿದ್ಯುತ್ ಮಾರ್ಗವು ಈ ಕೆಳಗೆ ತಿಳಿಸಿರುವ ಸರ್ವೆ ನಂ. ಜಮೀನುಗಳಲ್ಲಿ ಹಾದು ಹೋಗುವುದರಿಂದ, ಸಂಬಂಧಪಟ್ಟ ಭೂನಷ್ಟ ಭಾದಿತರಿಗೆ ಗೋಪುರದ ತಳಪಾಯ ಹಾಗೂ ೧೧೦ಕೆವಿ ಮಾರ್ಗದ ಕಾರಿಡಾರ್ ಪರಿಹಾರ ನಿಗದಿಪಡಿಸಲು ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಅವರ ಅಧ್ಯಕ್ಷತೆಯಲ್ಲ್ಲಿ ದಿನಾಂಕ: ೨೮.೧೧.೨೦೨೪ ಮಧ್ಯಾಹ್ನ ೧೨:೦೦ ಗಂಟೆಗೆ ಜಿಲ್ಲಾಧಿಕಾರಿಗಳು ಕಛೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ.
ಸಂಡ ಗ್ರಾಮದ ಸರ್ವೆ ನಂ.೨೩೩, ೨೩೨, ೨೩೧, ೫/೧, ೫/೨, ೬, ೭, ೮, ೧೦, ೧೧, ೧೨, ೧೪, ೧೮, ೧೯, ೨೦/೧, ೨೦/೨, ೨೨, ೨೭/೧, ೩೦, ೩೧, ೪೩, ೪೪, ೪೫, ೬೦, ೫೯, ೫೮, ೯೬, ೮೭.
ಹರಗವಳ್ಳಿ ಗ್ರಾಮದ ಸರ್ವೆ ನಂ. ೫೭.
ಆಮಟೇಕೊಪ್ಪ ಗ್ರಾಮದ ಸರ್ವೆ ನಂ.೯೧, ೧೦೪, ೧೦೬, ೧೧೦/೧, ೧೧೦/೨, ೧೦೯/೧, ೧೦೯/೨, ೧೦೯/೩, ೧೦೮/೨, ೧೨೭, ೧೨೮, ೧೨೯/೧, ೧೨೯/೩, ೧೨೯/೪, ೧೩೭, ೧೩೯/೧, ೧೩೯/೨, ೧೩೮, ೧೪೨/೧, ೧೪೨/೨, ೧೪೩/೧, ೧೪೩/೨, ೧೪೪, ೧೪೫/೧, ೧೪೫/೨, ೧೪೬/೧, ೧೪೬/೨, ೧೪೯, ೧೪೮.
ಕೋಟಿಪುರ ಗ್ರಾಮದ ಸರ್ವೆ ನಂ. ೧೨೫, ೧೨೪, ೭೨, ೧೧೩/೧, ೧೧೩/೩, ೧೧೩/೪, ೧೧೨, ೧೧೧,೭/೧, ೭/೩, ೭/೪,೪/೧, ೪/೩, ೪/೪, ೪/೬, ೪/೭, ೪/೯, ೪/೧೦, ೧೦೬/೧, ೧೦೩, ೯೮/೧, ೯೮/೩, ೯೮/೪, ೯೮/೬, ೯೯, ೧೦೨, ೧೦೦, ೧೦೧/೧, ೧೦೧/೩, ೧೦೧/೪, ೯೬, ೧೯/೧, ೧೯/೨, ೨೧, ೨೦/೧, ೨೦/೩, ೨೦/೪, ೨೦/೫, ೨೪/೧, ೨೪/೨, ೨೫/೧, ೨೫/೨, ೫೩, ೫೪/೧, ೫೪/೨, ೫೬, ೫೭/೧, ೫೭/೨, ೫೮/೧, ೫೮/೩, ೫೯/೨, ೪೯, ೫೦, ೫೧, ೫೨, ೩೭, ೩೮, ೬೭/೧, ೪೫/೧, ೪೫/೨, ೩೯/೧, ೩೯/೨, ೩೯/೩, ೪೪, ೪೩/೧, ೪೩/೩, ೪೩/೪, ೪೨/೧.
ಚುಂಚನಕೊಪ್ಪ ಗ್ರಾಮದ ಸರ್ವೆ ನಂ.೮/೮, ೮/೧೦, ೮/೧೧, ೮/೧೩, ೮/೧೬, ೮/೭, ೮/೩, ೮/೪, ೮/೬, ೮/೯, ೮/೫, ೯, ೪/೧, ೨೩, ೨೪, ೨೬, ೨೭, ೨೮/೧, ೨೮/೨, ೨೯, ೩೦, ೩೧/೧, ೩೧/೨, ೩೩/೨, ೩೪/೨, ೩೫/೧, ೩೫/೩, ೩೯, ೩೬/೧, ೩೬/೨, ೩೯, ೩೮, ೩೭.
ಹೋತನಕಟ್ಟೆ ಗ್ರಾಮದ ಸರ್ವೆ ನಂ. ೧೪, ೧೫/೧, ೧೫/೨, ೯/, ೧೮/೨, ೬/೧, ೨೦/೪, ೨೦/೫, ೨೧/೧, ೨೧/೨, ೨೬, ೨೩/೧, ೨೩, ೨೫/೧, ೨೫/೨, ೩೩, ೩೨/೧, ೩೨/೨, ೩೪/೨, ೩/೧, ೩೮/೨, ೩೯/೨, ೪೦/೧, ೪೦/೨, ೪೧/೧, ೪೧/೨. ೧೨/೨, ೧೩/೧, ೧೨/೩, ೩೩/೧, ೩೩/೨, ೩೪, ೧೦/೧, ೪/೧, ೪/೨, ೬/೧, ೬/೩, ೬/೪, ೬/೬, ೬/೭, ೬/೮, ೭, ೮/೩, ೯/೧, ೯/೨, ೧೦, ೧೧/೧, ೧೧/೨, ೧೨/೧.
ರಾಂಪುರ ಗ್ರಾಮದ ಸರ್ವೆ ನಂ.೨, ೩/೪, ೩/೫, ೩/೩, ೩/೨, ೩/೬, ೪, ೫, ೬/೧, ೬/೨, ೧೭/೧, ೧೭/೨, ೮/೧, ೮/೩, ೧೧.
ಬನ್ನೂರು ಗ್ರಾಮದ ಸರ್ವೆ ನಂ.೩೫, ೧, ೧೨೬, ೧೨೫.
ಈ ಎಲ್ಲಾ ಗ್ರಾಮಗಳ ಸರ್ವೆ ನಂ. ಜಮೀನಿನ ಭೂನಷ್ಟ ಭಾದಿತರು ತಪ್ಪದೆ ಹಾಜರಾಗುವಂತೆ ಕವಿಪ್ರನಿನಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಜಿಲ್ಲಾ ಪ್ರವಾಸ
ಶಿವಮೊಗ್ಗ ನವೆಂಬರ್ ೨೨; ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡುರಾವ್‌ರವರು ನ.೨೬ ಮತ್ತು ೨೭ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ನ.೨೬ ರಂದು ಮಧ್ಯಾಹ್ನ ೧.೫೫ಕ್ಕೆ ವಿಮಾನದ ಮೂಲಕ ಶಿವಮೊಗ್ಗಕ್ಕೆ ಆಗಮಿಸಿ, ಸಾಗರಕ್ಕೆ ರಸ್ತೆ ಮೂಲಕ ಪ್ರಯಾಣಿಸಲಿದ್ದಾರೆ. ಮ. ೩.೦೦ಕ್ಕೆ ಸಾಗರ ತಾಲೂಕಿನ ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹಿರೆಮನೆ ಹಾಗೂ ತಲವಾಟ ಗ್ರಾಮಗಳಲ್ಲಿ ಮಂಗನಕಾಯಿಲೆ (ಕೆ.ಎಫ್.ಡಿ) ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮ. ೪.೦೦ಕ್ಕೆ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಸಂಜೆ ೫.೦೦ಕ್ಕೆ ಸಾಗರದ ಪ್ರವಾಸಿ ಮಂದಿರದಲ್ಲಿ ಮಂಗನಕಾಯಿಲೆ ಕಂಡುಬಂದಿರುವ ಜಿಲ್ಲೆಗಳಲ್ಲಿ ಕೈಗೊಂಡಿರುವ/ಕೈಗೊಳ್ಳಬೇಕಾಗಿರುವ ಸುರಕ್ಷಾ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ೭.೦೦ ಸಾಗರದಿಂದ ಶಿವಮೊಗ್ಗಕ್ಕೆ ಆಗಮಿಸಿ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಲಿದ್ದಾರೆ.
ನ. ೨೭ರಂದು ಬೆಳಗ್ಗೆ ೮.೨೦ಕ್ಕೆ ಭದ್ರಾವತಿ ತೆರಳಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಬೆ. ೯.೨೫ ಭದ್ರಾವತಿಯಿಂದ ಶಿವಮೊಗ್ಗ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ: ೨.೧೫ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಕೆ. ಎ. ಹಿದಾಯತ್ತುಲ್ಲರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ; ಅವಧಿ ವಿಸ್ತರಣೆ
ಶಿವಮೊಗ್ಗ ನವೆಂಬರ್ ೨೨; : ಕುವೆಂಪು ವಿಶ್ವವಿದ್ಯಾಲಯವು ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ/ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿಗಾಗಿ ಯು.ಯು.ಸಿ.ಎಂ.ಎಸ್. ಪೊರ್ಟಲ್ ಮೂಲಕ ಆರ್ಜಿ ಆಹ್ವಾನಿಸಿದ್ದು, ಖಾಲಿಯಿರುವ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಆಯಾ ವಿಭಾಗಗಳಲ್ಲಿ ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನ. ೩೦ ರವರೆಗೆ ವಿಸ್ತರಿಸಲಾಗಿದೆ ಎಂದು ಉಪ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ವಿವಿಯ ಅಂತರ್ಜಾಲ ತಾಣwww.kuvempu.ac.in ನ್ನು ವೀಕ್ಷಿಸುವುದು.