Site icon TUNGATARANGA

ರಾಷ್ಟ್ರಮಟ್ಟದ ಅಥ್ಲೇಟಿಕ್ಸ್ ಸ್ಪರ್ಧೆಗೆ ಜಿಲ್ಲೆಯ ಕ್ರೀಡಾಪಟುಗಳು ಆಯ್ಕೆ |ನ.23 ರಂದು ಗ್ರಾಮ ಪಂಚಾಯತಿ ಉಪಚುನಾವಣೆ ನಡೆಯುವ ಶಾಲೆಗಳಿಗೆ ರಜೆ

ಶಿವಮೊಗ್ಗ ನವೆಂಬರ್ ೨೦; (=: ನ.೧೫ ಮತ್ತು ೧೬ ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ೧೪ ವರ್ಷದೊಳಗಿನ ಬಾಲಕ/ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಪ್ರಥಮ ಮತ್ತು ೮೦ ಮೀ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಆರೋನ್ ಹಾಗೂ ೬೦೦ ಮೀ ಓಟದಲ್ಲಿ ಪ್ರಥಮ ಸ್ಥಾನಗಳಿಸಿದ ಅಪೂರ್ವ ಇವರುಗಳು ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಅಥ್ಲೆಟಿಕ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಈ ಕ್ರೀಡಾಪಟುಗಳು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದಲ್ಲಿ ಅಥ್ಲೆಟಿಕ್ಸ್ ತರಬೇತುದಾರ ಬಾಳಪ್ಪ ಮಾನೆಯವರಿಂದ ದೈನಂದಿನ ತರಬೇತಿ ಪಡೆಯುತ್ತಿದ್ದಾರೆ. ವಿಜೇತರಾದ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

ನ.೨೩ ರಂದು ಗ್ರಾಮ ಪಂಚಾಯತಿ ಉಪಚುನಾವಣೆ ನಡೆಯುವ ಶಾಲೆಗಳಿಗೆ ರಜೆ
ಶಿವಮೊಗ್ಗ ನವೆಂಬರ್ ೨೦; : ನ.೨೩ ರಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲಾಗುತ್ತಿದ್ದು, ಚುನಾವಣಾ ಕ್ಷೇತ್ರಗಳಲ್ಲಿನ ಮತದಾನ ಕೇಂದ್ರಗಳು ಬಹುತೇಕ ಶಾಲೆಗಳಾಗಿವೆ. ಮತದಾನದ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುವುದರಿಂದ ಜನದಟ್ಟಣೆಯಾಗಿ ಮತದಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮತದಾನ ಕೇಂದ್ರವಿರುವ ಶಾಲೆಗಳಿಗೆ ನ. ೨೩ ರ ಶನಿವಾರದಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.


ಶಿವಮೊಗ್ಗ ತಾಲೂಕಿನ ದೇವಕಾತಿಕೊಪ್ಪದ ಸ.ಕಿ.ಪ್ರಾ.ಶಾಲೆ ಮತ್ತು ಹೊಳಲೂರು ಅಂಗನವಾಡಿ ಕೇಂದ್ರ ಜನತಾ ಕಾಲೋನಿ. ಭದ್ರಾವತಿ ತಾಲೂಕಿನ ಬಾರಂದೂರು ಸ. ಹಿ.ಪ್ರಾ.ಶಾಲೆ (ಉತ್ತರಭಾಗ). ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿ ಸ.ಹಿ.ಪ್ರಾ.ಶಾಲೆ. ಶಿಕಾರಿಪುರ ತಾಲೂಕಿನ ತರಲಘಟ್ಟ ಸ.ಹಿ.ಪ್ರಾ.ಶಾಲೆ, ಶಿಕಾರಿಪುರದ ಸ.ಉರ್ದು ಹಿ.ಪ್ರಾ.ಶಾಲೆ ಖಾಜಿ ಮೊಹಲ್ಲ ಹಾಗೂ ಶಿರಾಳಕೊಪ್ಪದ ಸ.ಉರ್ದು ಹಿ.ಪ್ರಾ.ಶಾಲೆ ಆಜಾದ್ ವೃತ್ತ. ಸಾಗರ ತಾಲೂಕಿನ ಕುದರೂರು ಸ.ಹಿ.ಪ್ರಾ.ಶಾಲೆ ಕೊ.ಸಂ.೧ ಈ ಶಾಲೆಗಳಲ್ಲಿ ನ.೨೩ ರಂದು ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದೆ.

Exit mobile version