ಶಿವಮೊಗ್ಗ: ಕಳೆದ ಏಳೆಂಟು ವ?ಗಳಿಂದ ನೈಸರ್ಗಿಕ ಕಾಡು ಬೆಳೆಸಿ ನೂರಾರು ಜಾತಿಯ ಅಳಿವಿನಂಚಿನ ಮರಗಳನ್ನು ಹೊಂದಿರುವ ಸವಳಂಗ ರಸ್ತೆಯ ಅಬ್ಬಲಗೆರೆಯ ಈಶ್ವರವನದಲ್ಲಿ ಮೆಸ್ಕಾಂ ಸಿಬ್ಬಂದಿ ಅನಧಿಕೃತವಾಗಿ ಮರಗಳ ಮಾರಣಹೋಮ ಮಾಡಿದ್ದಾರೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ನಾಗೇಶ್ ಎಂ.ವಿ. ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು..
ಇಂದು ಬುಧವಾರ ಈಶ್ವರವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಪ್ರಕೃತಿ ಆರಾಧನೆಯ ಪ್ರತೀಕವಾಗಿ ಪ್ರತಿವ? ಶಿವರಾತ್ರಿಯಂದು ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವೂ ಸೇರಿದಂತೆ ಸಾರ್ವಜನಿಕರಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಾಪಾಡಿಕೊಳ್ಳುವುದರ ಮಹತ್ವ ಕುರಿತು ಜನಜಾಗೃತಿ ಮೂಡಿಸುವ ಸತ್ಕಾರ್ಯಗಳನ್ನು ಮಾಡುತ್ತ ಬರಲಾಗುತ್ತಿದೆ ಎಂದರು.
ಪ್ರಕೃತಿಯ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಜೀವನ, ಶಾಲಾ ಮಕ್ಕಳಿಗೆ ಪರಿಸರ ಶಿಕ್ಷಣ ಬೋಧನೆ, ಪ್ರಕೃತಿ ಪೂರಕ ಹಬ್ಬಗಳ ಆಚರಣೆಯ ಮಹತ್ವ ಸಾರುವ ಕೆಲಸಗಳನ್ನು ಮಾಡುತ್ತಿರುವುದು ಈಶ್ವರವನದ ಹೆಗ್ಗಳಿಕೆಯಾಗಿದೆ. ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದ್ದು, ಸಾರ್ವಜನಿಕರಿಗಿಂತ ಸರ್ಕಾರಗಳ ಹಾಗೂ ಅಂಗಸಂಸ್ಥೆಗಳ ಪಾತ್ರ ಮಹತ್ವ ಪಡೆಯುತ್ತದೆ ಎಂದು ಹೇಳಿದರು.
ಮೆಸ್ಕಾಂ ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ತನ್ನ ಬೇಜವಾಬ್ದಾರಿತನ ತೋರಿದ್ದರ ಪರಿಣಾಮ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಅಳಿವಿನಂಚಿನ ಮರಗಳು ನಾಶವಾಗಿವೆ. ವಿದ್ಯುತ್ ತಂತಿಗಳಿಗೆ ಸಮೀಪ ಬೆಳೆದಿರುವ ರೆಂಬೆ ಕೊಂಬೆಗಳನ್ನು ಟ್ರಿಮ್ ಮಾಡುವ ನೆಪದಲ್ಲಿ ಬುಡ ಸಮೇತ ಕಡಿತಲೆ ಮಾಡಿರುವ ಮೆಸ್ಕಾಂ ಸಿಬ್ಬಂದಿಯ ಹೊಣೆಗೇಡಿತನಕ್ಕೆ ಪರೋಪಕಾರಿ ಮರಗಳ ಮಾರಣಹೋಮ ಆಗಿರುವುದನ್ನು ಖಂಡಿಸಿದರು.
ನವೆಂಬರ್ ೧೨ರಂದು ಈಶ್ವರವನದ ಮುಂಭಾಗದ ರಸ್ತೆ ಬದಿಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮರಗಳನ್ನು ನೆಲಸಮ ಮಾಡಿರುವುದಲ್ಲದೇ, ಅಕ್ರಮವಾಗಿ ಈಶ್ವರವನದ ಒಳಗೆ ಪ್ರವೇಶ ಮಾಡಿ ವಿದ್ಯುತ್ ತಂತಿ ಹಾದು ಹೋಗಿರುವ ಕಂಬಗಳಿಂದ ಅತಿ ದೂರದಲ್ಲಿರುವ ಮರಗಳನ್ನೂ ಕಡಿದಿರುವುದು ಮೆಸ್ಕಾಂ ಸಿಬ್ಬಂದಿಯ ಹಾಗೂ ಆದೇಶ ಮಾಡಿದ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಈ ಕಾರ್ಯ ನಿರ್ವಹಿಸಲು ಅಗತ್ಯ ಸಲಕರಣೆಗಳ ಉಪಯೋಗ ಮಾಡಿಕೊಳ್ಳದೇ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಮರಗಳನ್ನು ಕಡಿದಿದ್ದಾರೆ. ಇದನ್ನು ನೋಡಿದರೆ ಈ ಮೆಸ್ಕಾಂ ಸಿಬ್ಬಂದಿಯ ಕಟುಕತನಕ್ಕೆ ಸಾಟಿಯಿಲ್ಲ ಎನಿಸದೇ ಇರದು ಎಂದು ನೋವು ವ್ಯಕ್ತಪಡಿಸಿದರು.
ಈ ಕಡಿತಲೆಗೆ ಒಳಗಾದ ಮರಗಳಲ್ಲಿ ಬಿಲ್ವಾರಾ, ಬೇವು, ಸಪ್ತಪರ್ಣಿ, ನುಗ್ಗೆ, ಸಾಗುವಾನಿ, ಹೊಂಗೆ ಇತ್ಯಾದಿ ಜಾತಿಯ ಮರಗಳಿದ್ದು ಬಿದಿರಿನ ಕಡಿತಲೆಗೆ ಅರಣ್ಯ ಇಲಾಖೆಯ ನಿ?ಧವಿದ್ದರೂ ಬಿದಿರು ಕುಡಿಗಳನ್ನು ಕಡಿದು ಅಕ್ರಮವಾಗಿ ಸಾಗಣೆ ಮಾಡಿರುತ್ತಾರೆ. ಇಲಾಖಾ ನಿಯಮದನ್ವಯ ವಿದ್ಯುತ್ ತಂತಿಗಳ ಬಳಿ ಚಾಚಿಕೊಂಡಿರುವ ಟೊಂಗೆಗಳನ್ನು ಮಾತ್ರ ಕಡಿಯಲು ಅವಕಾಶವಿದ್ದರೂ ಅಳಿವಿನಂಚಿನ ಮರಗಳೆಂದೂ ಲೆಕ್ಕಿಸದೇ ನೆಲ ಮಟ್ಟದವರೆಗೂ ಕಡಿದಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದ್ದು ಮೆಸ್ಕಾಂ ವಿರುದ್ದ ಮೊಕದ್ದಮೆ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಕೃತಿಯ ಋಣ ತೀರಿಸುವ ಭಾಗವಾಗಿ ಹುಟ್ಟಿಕೊಂಡ ಈ ಈಶ್ವರವನದಲ್ಲಿ ಇಲಾಖಾ ನಿಯಮಗಳನ್ನು ಉಲ್ಲಂಘಿಸಿ ಅಳಿವಿನಂಚಿನ ಮರಗಳ ಮಾರಣ ಹೋಮ ಮಾಡಲಾಗಿದೆ. ಮುಂದೆ ಈ ರೀತಿಯ ಅವಘಡಗಳು ನಡೆಯದಂತೆ ಎಚ್ಚರವಹಿಸಬೇಕು. ಈ ಮಾರಣ ಹೋಮದಲ್ಲಿ ಭಾಗಿಯಾದ ಅಧಿಕಾರಿಗಳ ಸಹಿತ ಸಂಬಂಧಪಟ್ಟ ಸಿಬ್ಬಂದಿಯ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರವನ್ನು ಕೋರಿದರು.
ಗೋಷ್ಠಿಯಲ್ಲಿ ನಾಗರಾಜ ಶೆಟ್ಟರ್, ಜನಾರ್ಧನ್ ಪೈ, ಪರಿಸರ ರಮೇಶ್, ಶರಣ್ಯ ನಾಗೇಶ್ ಉಪಸ್ಥಿತರಿದ್ದರು.