ಸಾಗರ(ಶಿವಮೊಗ್ಗ),ನ.೧೧: ಸಾಗರ ಪಟ್ಟಣದ ವ್ಯಾಪ್ತಿಯಲ್ಲಿ ವಿಪರೀತ ವಾಹನ ದಟ್ಟಣೆ ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ವಾಹನಗಳ ನಿಲುಗಡೆ ಮಾಡುತ್ತಿರುವ ಕಾರಣ ಸಂಚಾರಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದನ್ನು ಗುರುತಿಸಿ ಸೂಕ್ತ ಚಿಕಿತ್ಸೆಗೆ ಸ್ವತಃ ಪೀಲ್ಡಿಗಿಳಿದಿರುವ ಡಿವೈಎಸ್ಪಿ ಗೋಪಾಲಕೃಷ್ಣ ಟಿ.ನಾಯ್ಕ ಅವರು ಮೊದಲ ದಿನವೇ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಸಾರ್ವಜನಿಕರು ವಾಹನ ಮಾಲೀಕರು ಗಮನಿ ಬೇಕು.ನಿಮ್ಮ ವಾಹನವನ್ನು ಸಂಚಾರಿ ನಿಯಮ ಉಲ್ಲಂ ಘಿಸಿ ಇಲ್ಲಿ ಯಾರು ಪೊಲೀಸರು ಇಲ್ಲ ಎಂದು ಭಾವಿಸಿ ವಾಹನ ನಿಲ್ಲಿಸಿದರೇ ನಮ್ಮ ಸಿ.ಸಿ ಕ್ಯಾಮೆರಾ ನಿಮ್ಮ ವಾಹನದ ಛಾಯಾಚಿತ್ರವನ್ನು ತೋರಿಸುತ್ತದೆ.ಇದರ ಆಧಾರ ದಲ್ಲಿ ನಿಮ್ಮ ವಿಳಾಸಕ್ಕೆ ಪೊಲೀಸ್ ಇಲಾಖೆಯಿಂದ ಸಂಚಾರಿ ನಿಯಮ ಉಲ್ಲಂ ಘನೆ ಕುರಿತು ನೋಟೀಸ್ ಜಾರಿಯಾಗುತ್ತಿದೆ.
ಈಗಾಗಲೇ ಪ್ರತಿ ದಿನ ೧೫-೨೦ ನೋಟೀಸ್‌ಗಳನ್ನು ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರ ವಿಳಾಸಕ್ಕೆ ನೋಟಿಸ್ ಸಲ್ಲಿಕೆ ಯಾಗು ತ್ತಿದೆ ಎಂದರು.
ತ್ರಿಬ್ಬಲ್ ರೈಡಿಂಗ್ ಮಾಡುವ ವಾಹನಗಳ ಚಾಯಾಚಿತ್ರವನ್ನು ತೆಗೆದು ಪೊಲೀಸ್ ಠಾಣೆಗೆ ಪೊಲೀ ಸರು ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜ ನಿಕರು ತ್ರಿಬ್ಬಲ್ ರೈಡಿಂಗ್ ಮಾಡುತ್ತಿರುವ ಚಾಯಾಚಿತ್ರ ಕಳುಹಿಸಿದರೇ ಅಂತಹ ವಾಹನದ ವಿರುದ್ಧ ಕ್ರಮ ಜರುಗಿಸುತ್ತೇವೆ.
ಕರ್ಕಸ ಶಬ್ದವನ್ನು ಹೊರ ಸೂಸುವ ದ್ವಿಚಕ್ರ ವಾಹನU ಳನ್ನು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಡಿ ಸೀಜ್ ಮಾಡಲಾಗುತ್ತಿದೆ.ಈ ಮೊದಲು ಸೈಲೆನ್ಸಾರ್ ಕಿತ್ತು ಪುಡಿ ಮಾಡುವ ಯೋಜನೆ ಯಿಂದ ಪ್ರಯೋಜ ನಾವಿಲ್ಲ ಎಂದು ವಾಹನ ವಶಕ್ಕೆ ಪಡೆದು ಕ್ರಮ ಜರುಗಿಸಲಾಗುತ್ತಿದೆ ಎಂದರು.
ಕೆಲವು ಅಂಗಡಿ ಮಾಲೀಕರು ಅಂಗಡಿಯಷ್ಟು ಅಗಲದ ಕಬ್ಬಿಣದ ಜಾಲರಿ ರಸ್ತೆ ಮೇಲೆ ಇರಿಸಿ ವಾಹನ ಗಳು ನಿಲ್ಲಿಸದಂತೆ ಮಾಡಿರು ವುದನ್ನು ಗಮನಿಸಿ ತಕ್ಷಣ ತೆರವುಗೊಳಿಸಿದರು.
ನಿಯಮ ಉಲ್ಲಂಘಿಸಿ ನಿಲುಗಡೆ ಮಾಡಿರುವ ವಾಹನ ಗಳಿಗೆ ಪೊಲೀಸರು ಸ್ಥಳದಲ್ಲಿಯೇ ಲಾಕ್ ಮಾಡಿದರು.
ಕಳೆದ ೪-೫ ದಿನಗಳ ಹಿಂದೆ ಸಾಗರದ ತ್ರೈಮಾಸಿಕ ಸಭೆಯಲ್ಲಿ ಸಾಗರದ ಸಂಚಾರಿ ಅವ್ಯವಸ್ಥೆಯ ಕುರಿತು ಗಮನಸೆಳೆದಾಗ ಪ್ರತಿಕ್ರಿಯಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ ನೀಡಿ ಪ್ರವಾಸಿ ಸ್ಥಳಗಳನ್ನು ಹೊಂದಿರುವ ಉಪವಿಭಾ ಗೀಯ ಕ್ಷೇತ್ರದ ಪಟ್ಟಣ ಸಾಗರದ
ಸಂಚಾರಿ ವ್ಯವಸ್ಥೆ ಸರಿ ಪಡಿಸಲು ಡಿವೈಎಸ್ಪಿ ಗೋಪಾಲಕೃಷ್ಣ ಟಿ.ನಾಯಕ್ ಕ್ರಮವಹಿಸಬೇಕು. ಉಪ ವಿಭಾಗಾಧಿಕಾರಿಗಳ ಸಮ್ಮುಖ ದಲ್ಲಿ ಸಮಾಲೋಚಿಸಿ ಕ್ರಮವಹಿಸುವಂತೆ ಸೂಚಿಸಿದ್ದರ ಫಲ ಇಂದು ಕಾರ್ಯರೂಪಕ್ಕೆ ಬರುವಂತಾಯಿತು.
ಸಂಚಾರಿ ವ್ಯವಸ್ಥೆಯ ಸುಧಾರಣೆ ಆರಂಭಸೂರತ್ವ ಆಗದಿರಲಿ.ನಿರಂತರ ನಿಗಾವ ಹಿಸುವ ಮೂಲಕ ಸುಗಮ ಸಂಚಾರಕ್ಕೆ ಮಾದರಿ ನಗರ ವನ್ನಾಗಿ ನಿರ್ವಹಿಸಲಿ ಎನ್ನುವುದು ವರ್ತಕರ ಮತ್ತು ಸಾರ್ವಜನಿಕರ ಆಶಯವಾಗಿದೆ.