Site icon TUNGATARANGA

ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪ್ರತಿಬಂಧಕಾಜ್ಞೆ| ನ. 13 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ನವೆಂಬರ್ 11,  ನ.20 ರಿಂದ 22ರವರೆಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಜರುಗಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ ಫಾಸಲೆಯವರೆಗಿನ ಪ್ರದೇಶದಲ್ಲಿ ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಭಾ.ನಾ.ಸು.ಸಂ.: -2023ರ ಕಲಂ 163ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಅದೇಶ ನೀಡಿದ್ದಾರೆ.


ಜಿಲ್ಲೆಯ  ಕೆ.ಪಿ.ಎಸ್. ಶಾಲೆ- ಬಿ.ಹೆಚ್.ರಸ್ತೆ,ಶಿವಮೊಗ್ಗ, ಸ.ಪ.ಪೂ.ಕಾಲೇಜು, ಶಾಗರ, ಶ್ರೀ ತುಂಗಾಭದ್ರ ಪ್ರೌಢಶಾಲೆ, ಸೂಗೂರು, ಸ.ಪ.ಪೂ.ಕಾ-ತೀರ್ಥಹಳ್ಳಿ, ಸಂಚಿಹೊನ್ನಮ್ಮ ಸ,ಪ.ಪೂ.ಕಾ. ಹಳೆನಗರ, ಭದ್ರಾವತಿ, ಸ,ಪ.ಪೂ.ಕಾ. ಸೊರಬ ತಾ. ಈ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಯಲಿದ್ದು, ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಳತೆಯಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ.  ಟೈಪಿಂಗ್, ಜೇರಾಕ್ಸ್ ಮತ್ತು ಫ್ಯಾಕ್ಸ್ ಅಂಗಡಿಗಳು ಪರೀಕ್ಷಾ ಅವಧಿಯಲ್ಲಿ ಪ್ರತಿಬಂಧಿಸಿದೆ. ಮೊಬೈಲ್ ಬಳಕೆಯನ್ನು ನಿಷೇಧಿಸಿದೆ. ಪರೀಕ್ಷೆಗೆ ಸಂಬAಧಪಟ್ಟ ಸಿಬ್ಬಂದಿ/ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ಪರೀಕ್ಷಾ ಕೇಂದ್ರಗಳ ಫಾಸಲೆ ಪ್ರವೇಶಿಸುವುದನ್ನು ನಿಷೇಧಿಸಿದೆ.

————

ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ನವೆಂಬರ್ 11,  ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-12ರಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ. 13 ರಂದು ಬೆಳಗ್ಗೆ 10.00 ರಿಂದ ಸಂಜೆ 4.00 ರವರೆಗೆ ಆಲ್ಕೋಳ, ಮಂಗಳ ಮಂದಿರ, ಸುಜ್ಞಾನ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Exit mobile version