ಶಿವಮೊಗ್ಗ: ಅಧಿಕಾರ, ಪ್ರತಿಷ್ಠೆ, ಪ್ರಚಾರ, ಪ್ರಸಿದ್ಧಿ, ಸ್ವಾರ್ಥ ಉದ್ದೇಶ ಇಟ್ಟುಕೊಂಡು ಸಮಾಜ ಸೇವೆ ಮಾಡಬಾ ರದು. ಸಮಾಜ ಸೇವೆ ನಿಸ್ವಾರ್ಥವಾಗಿದ್ದಾಗ ಮಾಡಿದ ಸೇವೆಗೆ ಸಾರ್ಥಕತೆ ಬರುತ್ತದೆ ಎಂದು ಲಯನ್ಸ್ ಕ್ಲಬ್ ವಲಯ-೯ರ ಪ್ರಾದೇಶಿಕ ಮುಖ್ಯಸ್ಥ ಲಯನ್ ಅನಂತ ಕೃಷ್ಣ ನಾಯಕ್ ಹೇಳಿದರು.
ದಿ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಲಯನ್ಸ್ ಕ್ಲಬ್ ಹಾಗೂ ಶಿವಮೊಗ್ಗ ಕಾಸ್ಮೋಪಾಲಿಟನ್ ಲಯನ್ಸ್ ಕ್ಲಬ್ ಜಿಲ್ಲೆ-೩೧೭ ಸಿ ವತಿಯಿಂದ ಇಲ್ಲಿನ ಸಾಗರ ರಸ್ತೆಯಲ್ಲಿರುವ ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದಶಕಗಳ ಕಾಲದಿಂದಲೂ ಲಯನ್ಸ್ ಕ್ಲಬ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಕೋವಿಡ್-೧೯ನಿಂದ ಲಾಕ್‌ಡೌನ್ ಆದಾಗ ಕ್ಲಬ್ ವತಿಯಿಂದ ಸಂಕಷ್ಟದಲ್ಲಿರುವವರ ಸಮಸ್ಯೆಗೆ ಸ್ಪಂದಿಸಲಾಯಿತು. ಈ ಸಂದರ್ಭದಲ್ಲಿ ಪ್ರಚಾರ ಪಡೆಯದೆ ಕ್ಲಬ್ ಸದಸ್ಯರು ಎಲೆ ಮರೆ ಕಾಯಿಯಂತೆ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಝೋನ್ ಛೇರ್‌ಪರ್ಸನ್ ಜಿ.ಎಸ್.ಕುಮಾರ್, ಶಿವಮೊಗ್ಗ ಕಾಸ್ಮೋಪಾಲಿಟನ್ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ರಾಜೇಶ್, ಕಾರ್ಯದರ್ಶಿ ಸಿ.ಹೊನ್ನಪ್ಪ, ಖಜಾಂಚಿ ಎಂ.ಎಂ.ಡೇನಿಯಲ್, ವಿ.ರಾಜು ಮತ್ತಿತರರು ಉಪಸ್ಥಿತರಿದ್ದರು.