Site icon TUNGATARANGA

ಸಾಗರ: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ. ವ್ಯಕ್ತಿ ವಶ

ಸಾಗರ : ಇಲ್ಲಿನ ಪೊಲೀಸ್ ಅರಣ್ಯ ಸಂಚಾರಿ ದಳ ತಂಡವು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಚಿರತೆ ಹಲ್ಲು ಮತ್ತು ಉಗುರನ್ನು ಮಂಗಳವಾರ ವಶಪಡಿಸಿಕೊಂಡು, ಓರ್ವನನ್ನು ದಸ್ತಗಿರಿ ಮಾಡಲಾಗಿದೆ.


ಖಚಿತ ಮಾಹಿತಿ ಮೇರೆಗೆ ತಾಲ್ಲೂಕಿನ ಆನಂದಪುರಂ ಸಮೀಪದ ದಾಸಕೊಪ್ಪದ ಪೆಟ್ರೋಲ್ ಬಂಕ್ ಸರ್ಕಲ್‌ನಲ್ಲಿ ಶಿಕಾರಿಪುರದ ಹಾರೊಗೊಪ್ಪ ವಾಸಿ ಲೋಕೇಶ್ ಎಂಬಾತನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಚಿರತೆಯ ಹದಿನಾರು ಉಗುರು ಮತ್ತು ಮೂರು ಹಲ್ಲುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.


ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್.ಪಿ. ಎಸ್.ಎಸ್.ಕಾಶಿ ಅವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿದಳದ ಗಣೇಶ್, ವಿಶ್ವನಾಥ್, ಆಂಜನೇಯ, ದಿನೇಶ್, ಪ್ರಮೋದಕುಮಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

Exit mobile version