Site icon TUNGATARANGA

ಹಾಡೋನಹಳ್ಳಿಯಲ್ಲಿ ಹೆಚ್ಚಿದ ಅಡಿಕೆ ಕಳ್ಳತನ: ರೈತರ ಆತಂಕ

ಶಿವಮೊಗ್ಗ, ನ.07:
ತಾಲೂಕಿನ ಹಾಡೋನಹಳ್ಳಿ ಸೇರಿದಂತೆ ಹಲವೆಡೆ ಭಾರಿ ಪ್ರಮಾಣದ ಅಡಿಕೆ ಕಳ್ಳತನ ನಡೆಯುತ್ತಿದ್ದು, ಅಡಿಕೆ ಬೆಳೆಗಾರರು ಆತಂಕಗೊಂಡಿದ್ದಾರೆ.
ಅಲ್ಲಿನ ಗಂಗಾಧರ್ ಕಡೇಮನೆ ಎಂಬುವರ ಸುಮಾರು ಒಂದೂವರೆ ಲಕ್ಷದ ಅಡಿಕೆಯನ್ನು ಮಧ್ಯರಾತ್ರಿ ಅಡಿಕೆ ಮನೆಯಿಂದ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ಬಹಳಷ್ಟು ಕಡೆ ಅಡಿಕೆ ಕಳ್ಳತನ ನಡೆಯುತ್ತಿದ್ದು, ಅಡಿಕೆ ಬೆಳೆಗಾರರು ಆರೋಪಿಗಳ ಪತ್ತೆಗೆ ಹಾಗೂ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಹಾಡೋನಹಳ್ಳಿ ಜಗದೀಶ್ ಆಗ್ರಹ
ಇಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಭಾಗದ ಅಡಿಕೆ ಕಳ್ಳತನಕ್ಕೆ ಸೂಕ್ತ ಬ್ರೇಕ್ ಹಾಕುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ ಹಾಡೋನಳ್ಳಿ ಜಗದೀಶ್ ಒತ್ತಾಯಿಸಿದ್ದಾರೆ.


ಈ ಭಾಗದ ಗ್ರಾಮಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅಡಿಕೆ ಕಳತನವನ್ನು ತಪ್ಪಿಸಲು ಸರ್ಕಾರ ಪ್ರತಿ ಗ್ರಾಮಗಳ ಮುಖ್ಯ ರಸ್ತೆಗಳಿಗೆ ಕನಿಷ್ಠ ಒಂದೆರಡು ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸುವಂತೆ ಅವರು ಒತ್ತಾಯಿಸಿದ್ದಾರೆ

Exit mobile version