Site icon TUNGATARANGA

ಮಧ್ಯಮ, ಕಠಿಣ ವ್ಯಾಯಾಮಗಳಿಗೆ ಸೈಕ್ಲಿಂಗ್ ಸೂಕ್ತ: ಜಿ.ಪಂ.ಸಿಇಒ ಎಂ.ಎಲ್. ವೈಶಾಲಿ

ಶಿವಮೊಗ್ಗ : ಕಡಿಮೆ ದೂರದ ಪ್ರಯಾಣಕ್ಕೆ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಬಳಸುವುದರ ಬದಲಿಗೆ ಸೈಕಲ್ ಬಳಸಿ ಎಂದು ಜಿ.ಪಂ ಸಿಇಒ ಎಂ.ಎಲ್ ವೈಶಾಲಿ ಹೇಳಿದರು.
ಅವರು ಶಿವಮೊಗ್ಗ ನಗರದಲ್ಲಿ ಆಯೋಜಿದ್ದ ಸೈಕಲ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನಸಂಖ್ಯೆ ಜಾಸ್ತಿಯಾದಂತೆ ಬಳಸುವ ಸವಲತ್ತುಗಳು ಅಧಿಕವೆಂಬಂತೆ ಇಂದು ಪಟ್ಟಣಗಳಲ್ಲಿ ವಾಹನ ಸಂಖ್ಯೆಯೂ ಅಧಿಕವಾಗಿದ್ದು, ತಮ್ಮ ಸುಖ ಪ್ರಯಾಣಕ್ಕೆ ಅನುಕೂಲವನ್ನು ಒದಗಿಸಿದರೂ ಪರಿಸರಕ್ಕೆ ಉಂಟಾಗುವ ಹಾನಿಯಂತೂ ಅಧಿಕ ಪ್ರಮಾಣವಾಗಿದ್ದು, ಕಾರ್ಬನ್ ಡೈಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಡುವ ವಾಹನಗಳು ನಮ್ಮ ಆರೋಗ್ಯಕ್ಕೆ ಸಂಚಾಕರ ತಂದೊಡ್ಡುತ್ತದೆ ಎಂದು ಹೇಳಿದರು.
ಸರಳ ಪರಿಶ್ರಮದಿಂದ ಕಠಿಣ ಪರಿಶ್ರಮಗಳವರೆಗೆ ಇದನ್ನು ಬದಲಿಸಿಕೊಳ್ಳುವ ಅವಕಾಶ ಸೈಕ್ಲಿಂಗ್ ಅನ್ನು ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ ಸೂಕ್ತವಾದ ವ್ಯಾಯಾಮವಾಗಿಸಿದೆ. ಅಂದರೆ ಪ್ರಾರಂಭಿಕ, ಮಧ್ಯಮ ಅಥವಾ ಕಠಿಣ ವ್ಯಾಯಾಮಗಳಿಗೆ ಸೈಕ್ಲಿಂಗ್ ಸೂಕ್ತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version