Site icon TUNGATARANGA

ಸಂಬಳವಿಲ್ಲದೇ 108 ಆಂಬುಲೆನ್ಸ್ ಸಿಬ್ಬಂದಿಗಳು ಕತ್ತಲೆಯಲ್ಲಿ ದೀಪಾವಳಿ ಆಚರಣೆ

ಹೊಸನಗರ: ಬೆಳಕಿನ ಹಬ್ಬವಾದ ದೀಪಾವಳಿಯ ಸಂಭ್ರಮದಲ್ಲಿರುವ ಇಡೀ ವಿಶ್ವದಲ್ಲಿಯೇ ೨೪ಗಂಟೆಯಲ್ಲಿ ಕರ್ತವ್ಯದಲ್ಲಿರುವ ತೊಡಗಿರುವ ೧೦೮ ಆಂಬುಲೆನ್ಸ್ ಸಿಬ್ಬಂದಿಗಳು ಕತ್ತಲೆಯಲ್ಲಿ ದೀಪಾವಳಿ ಆಚರಿಸುವ ಪರಿಸ್ಥಿತಿ ಸರ್ಕಾರ ಮಾಡಿರುವುದು ದುರಂತದ ಸಂಗತಿಯಾಗಿದೆ
ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿರುವ ಸುಮಾರು ೩೫೦೦ಕ್ಕೂ ಹೆಚ್ಚು ೧೦೮ ಸಿಬ್ಬಂದಿಗಳು ಕಳೆದ ಮೂರು ತಿಂಗಳಿಂದ ಸಂಬಳವಿಲ್ಲದೇ ಕಷ್ಟಕರ ಜೀವನ ಸಾಗಿಸುತ್ತಿದ್ದಾರೆ.


ದೀಪಾವಳಿಯಲ್ಲಿಯೂ ಕತ್ತಲೆಯ ಸಂಕಷ್ಟವನ್ನು ಅನುಭವಿಸುತ್ತಿರುವ ಈ ಆಂಬುಲೆನ್ಸ್ ಸಿಬ್ಬಂದಿಗಳಿಗೆ ಪ್ರತಿದಿನವೂ ಅನೇಕ ಜನರ ಜೀವ ಉಳಿಸಲು ತಮ್ಮ ಕುಟುಂಬದಿಂದ ದೂರವಿರುತ್ತಾ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ ಆದರೆ ಸರ್ಕಾರ ಭರವಸೆ ಯೋಜನೆಗಳ ನಷ್ಟದಿಂದಾಗಿ ಈ ಸಿಬ್ಬಂದಿಗಳಿಗೆ ತಮ್ಮ ಹಕ್ಕಿನ ಸಂಬಳವೂ ತಲುಪದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ


ಗೌರವಯುತ ಸೇವೆಗೆ ಅಮಾನವೀಯ ಅನ್ಯಾಯ:
೧೦೮ ಆಂಬುಲೆನ್ಸ್ ಸೇವೆ ತುರ್ತು ಸಂದರ್ಭದಲ್ಲಿ ಇರುವ ಜೀವ ಕಾಪಾಡುವ ಕೆಲಸವಾಗಿದೆ ರೋಗಿಗಳು ತೊಂದರೆಯಲ್ಲಿರುವಾಗ ಜನತೆಗೆ ತಕ್ಷಣವೇ ವೈದ್ಯಕೀಯ ನೆರವನ್ನು ಒದಗಿಸುವ ಸಿಬ್ಬಂದಿಗಳ ಕೆಲಸಕ್ಕೆ ಗೌರವ ನೀಡಬೇಕು ಆದರೆ ಈ ಸೇವೆಯಲ್ಲಿ ತೊಡಗಿರುವವರು ತಮ್ಮ ಕುಟುಂಬಗಳಿಗೆ ಭರವಸೆಯ ಬೆಳಕನ್ನು ತಲುಪಿಸಲು ಜೀವನಾದಾರವಾಗಿ ಪರಿಣಮಿಸಬೇಕಾದ ಸಂಬಲವಿಲ್ಲದೇ ಸಂಕಷ್ಟದಲ್ಲಿದ್ದಾರೆ ಸೇವೆಯು ಸಮಾಜದ ಹಿತಕ್ಕಾಗಿ ಕೆಲಸ ಮಾಡುತ್ತಿದ್ದರೂ ಸರ್ಕಾರದಿಂದ ಲಾಭದಾಯಕ ಬಲವರ್ಧನೆಗಳ ಮೇಲೆ ಆದಷ್ಟು ಗಮನಹರಿಸದೇ ಇಂತಹ ಜೀವ ರಕ್ಷಕರಿಗೆ ದೀಪಾವಳಿ ಹಬ್ಬದಲ್ಲಿ ಸಂಬಳ ನೀಡದೇ ಕತ್ತಲೆ ದೀಪಾವಳಿ ಮಾಡಿರುವುದು ಒಂದು ದುರಂತ.


ಭರವಸೆ ಯೋಜನೆಗಳ ಹೊರೆ-ಆರೋಗ್ಯ ಕ್ಷೇತ್ರಕ್ಕೆ ಮಾರಕ:
ಕಾಂಗ್ರೇಸ್ ಸರ್ಕಾರದ ಭರವಸೆ ಯೋಜನೆಗಳ ಅತಿಬಾರದಿಂದ ರಾಜ್ಯದ ಆರ್ಥಿಕತೆ ತೊಂದರೆಗೆ ಸಿಲುಕಿದ್ದು ಅದರ ಪರಿಣಾಮದಿಂದಾಗಿ ೧೦೮ ಸಿಬ್ಬಂದಿಗೆ ತಾವು ನಡೆಸಿದ ಸೇವೆಯ ಆದಾಯವೂ ತಲುಪದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ ಭರವಸೆ ಯೋಜನೆಗಳಿಗೆ ಅತಿದೊಡ್ಡ ಆಧ್ಯತೆ ನೀಡಿರುವ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹತ್ವದ ಸೇವೆಗಳನ್ನು ನಿರ್ಲಕ್ಷ್ಯಸುತ್ತಿರುವಂತೆ ತೋರುತ್ತಿದೆ
ಸಂವಿದಾನದಲ್ಲಿ ಆದ್ಯತೆಯ ಪ್ರಕಾರ ಜನತೆ ಹಾಗೂ ಆರೋಗ್ಯ ಸೇವೆಗಳ ಕುರಿತದ ಸ್ವಷ್ಟ ನಿಲುವುಗಳನ್ನು ಸರ್ಕಾರ ಹೊಂದಬೇಕು ೧೦೮ ಆಂಬುಲೆನ್ಸ್ ಸಿಬ್ಬಂದಿಗಳು ಆನಾರೋಗ್ಯವಂತರ ಜೀವ ಉಳಿಸುವ ಕೆಲಸ ಮಾಡುತ್ತಿದೆ ಆದರೆ ಜೀವ ಉಳಿಸುವಂತೆ ಕೆಲಸಕ್ಕೆ ತಕ್ಕ ಪ್ರತಿಫಲ ನೀಡುವುದೂ ಕೂಡ ಸಮಾಜದ ಪ್ರಾಥಮಿಕ ಕರ್ತವ್ಯವಾಗಿದೆ ಈ ಹಿನ್ನೇಲೆಯಲ್ಲಿ ೧೦೮ ಆಂಬುಲೈನ್ಸ್ ಸಿಬ್ಬಂದಿಗಳಿಗೆ ತಕ್ಷಣವೇ ಬಾಕಿ ಇರುವ ಸಂಬಳವನ್ನು ಬಿಡುಗಡೆ ಮಾಡಿ ಹಾಗೂ ಆಂಬುಲೆನ್ಸ್ ಕುಟುಂಬಗಳ ಜೀವ ಉಳಿಸುವ ಕೆಲಸ ಮಾಡಲೀ ಎಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದು ಇನ್ನಾದರೂ ಸರ್ಕಾರ ಸಂಬಳ ಬಿಡುಗಡೆ ಮಾಡುವರೇ ಕಾದು ನೋಡಬೇಕಾಗಿದೆ
ಹೆಚ್.ಎಸ್.ನಾಗರಾಜ್

Exit mobile version