ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ (ಮೂಲ ಅರಹತೊಳಲು, ಭದ್ರಾವತಿ)
ವಾರದ ಅಂಕಣ- 18
ಎಲ್ಲಿಯವರೆಗೆ ಹಳ್ಳಕ್ಕೆ ಬೀಳುವ ಜನರಿರುತ್ತಾರೋ ಅಲ್ಲಿಯವರೆಗೆ ಖದೀಮರು, ಮೋಸಗಾರರು ಇದ್ದೇ ಇರುತ್ತಾರೆ ಎನ್ನುವುದು ಒಂದು ಕಡೆಯ ಮಾತಾದರೆ, ಎಲ್ಲಿಯವರೆಗೆ ಖದೀಮರು ಹಾಗೂ ಮೋಸದ ಮನಸ್ಸಿನವರು ಇರುತ್ತಾರೋ ಅಲ್ಲಿಯವರೆಗೆ ಬಹಳಷ್ಟು ಜನ ಬಕರಗಳಾಗುತ್ತಾರೆ, ಕಳೆದುಕೊಳ್ಳುತ್ತಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಈ ವಿಷಯದಲ್ಲಿ ನಮ್ಮ ಜನ ಸೂಕ್ಷ್ಮ ಅದಾಗಲೇ ಈ ಮೋಸಗಾರತನ ಹೆಚ್ಚಿತು ಎನ್ನುವುದು ಇಂದಿನ ನೆಗೆಟಿವ್ ಥಿಂಕಿಂಗ್ ಅಂಕಣದ ವಾಸ್ತವ ಕಥೆ.
ಇಲ್ಲಿ ಅತಿ ಮುಖ್ಯವಾಗಿ ಖದೀಮ ಅಥವಾ ಮೋಸದ ವ್ಯಕ್ತಿ ಮೊದಲಾ? ಅಥವಾ ಬಕರಗಳಾಗುವ ವ್ಯಕ್ತಿ ಮೊದಲಾ ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿ ಬರುವ ಕೋಳಿ ಮೊಟ್ಟೆ ಪ್ರಶ್ನೆಯಂತೆ ನಮ್ಮ ನಡುವೆ ಕೇಳಿಬರುತ್ತದೆ. ಅದಕ್ಕೆ ಒಂದು ಕಡೆ ಯಾವುದಕ್ಕೂ ಉತ್ತರ ಕೊಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬದಲಾವಣೆಯ ಹಾದಿಯಲ್ಲಿ ವಿದ್ಯಾವಂತಿಕೆ ಕೇವಲ ಕಲಿಕೆಗೆ ಹಾಗೂ ಬದುಕಿಗೆ ಮಾರ್ಗವಲ್ಲ. ವಾಸ್ತವದ ಅಂಶಗಳನ್ನು ಅರಿತು ಬಾಳುವ ಪರಿಸ್ಥಿತಿಯನ್ನು ಕಲಿಸುವ ಅಂಶವಾಗಬೇಕಿದೆ. ಏಕೆಂದರೆ ವಿದ್ಯಾವಂತಿಕೆ ಬುದ್ಧಿವಂತಿಕೆಯ ಸಹೋದರಿಯೂ ಹೌದು. ಅವೆರಡೂ ಒಂದೇ ಎಂದು ಸಹ ಹೇಳುವುದು ಹೌದಲ್ಲವೇ?
ನಮ್ಮ ನಡುವೆ ಒಂದಿಷ್ಟು ತಿಳುವಳಿಕೆ ಪ್ರಜ್ಞೆ ಬೆಳೆದಂತಲ್ಲ ಮನಸ್ಸು ಅತ್ಯಂತ ಸೂಕ್ಷ್ಮ ಸ್ಥಿತಿಗಳನ್ನು ಗಂಭೀರವಾಗಿ ಅರಿತುಕೊಳ್ಳುವ ಮನೋಧರ್ಮ ಬೆಳೆಯಿತು ಎಂದುಕೊಳ್ಳುವುದು ತಪ್ಪಾದೀತು, ಇಲಿಯನ್ನು ಹಿಡಿಯುವ ಬೆಕ್ಕು ಹೇಗೆ ತನ್ನ ಕಾರ್ಯವೈಖರಿಯನ್ನು ಮಾಡುತ್ತದೆಯೋ ಅಷ್ಟು ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಲು ಮನುಜ ಮನಸ್ಸು ಮುಂದೆ ಹೋಗಿದ್ದರೂ ಸಹ ಅದೇ ಈ ಮೋಸಗಾರಿಕೆಗೆ, ಅದರ ಹೆಚ್ಚಳಕ್ಕೆ ಕಾರಣವಾಗಿದ್ದು ಎಂಬುದು ನೈಜ ಮಾತು.
ನಾವು ಇತ್ತೀಚಿನಗಳಲ್ಲಿ ಎಲ್ಲಾ ರಂಗಗಳನ್ನು ನೋಡುತ್ತಿದ್ದೇವೆ. ವಿಶೇಷವಾಗಿ ನಮ್ಮ ಆಧುನಿಕ ಜಗತ್ತಿನ ಮೊಬೈಲ್ ಇಂಟರ್ನೆಟ್ ಅದರಲ್ಲಿರುವ ಸಾಮಾಜಿಕ ಜಾಲತಾಣಗಳು ಬಹಳಷ್ಟು ಪಾಠಗಳನ್ನು ಕಲಿಸಿದೆ. ಅದರಲ್ಲಿ ಸಾಕಷ್ಟು ಒಳ್ಳೆಯ ಪಾಠಗಳಿದ್ದರೂ ಅದರೊಳಗೆ ಇರುವಂತಹ ಕೆಲ ಕೆಟ್ಟ ಪಾಠಗಳು ಮೋಸಗಾರಿಕೆಯನ್ನ ಹೆಚ್ಚಿಸಿರುವುದು ಮತ್ತೊಂದು ಕಡೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ನಡುವಿನ ರಕ್ಷಣಾ ಇಲಾಖೆಯೇ ಹೊಸದೊಂದು ವಿಭಾಗವನ್ನೇ ಆರಂಭಿಸುವಂತಹ ಮಟ್ಟಕ್ಕೆ ಮೋಸ ಮಾಡುವ ಮನಸ್ಸುಗಳು, ಮೋಸಗಾರಿಕೆ ಹೇಗೆ ಹೆಚ್ಚಿದವು. ಏನಾಗುತ್ತಿದೆ ಎಂಬುದನ್ನು ಉದಾಹರಿಸಲು ಸಾಕಲ್ಲವೆ?
ಈಗಲೂ ಇರುವ ಸೈಬರ್ ಪೊಲೀಸ್ ಠಾಣೆಗೆ ನಿತ್ಯ ಕನಿಷ್ಠ 10 ರಿಂದ 20 ಜನ ಒಂದೊಂದು ಪಟ್ಟಣಗಳಲ್ಲಿ ಬರುತ್ತಾರೆ ಎಂದರೆ ಎಷ್ಟು ಎಷ್ಟರಮಟ್ಟಿಗೆ ನಾವು ಅತ್ಯಂತ ಆತ್ಮವಿಶ್ವಾಸವನ್ನ ವ್ಯವಹಾರವನ್ನ ಗಳಿಸಿಕೊಂಡಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕಲ್ಲವೇ? ಒಂದು ಎತ್ತಿಗೆ ಹೊಡೆದರೆ ಮತ್ತೊಂದು ಎತ್ತು ಎಚ್ಚರಗೊಳ್ಳುತ್ತದೆ ಎಂಬುದು ನಿಜವಾದ ರೈತ ಧ್ವನಿ. ಆದರೆ ಈ ವಿಚಾರದಲ್ಲಿ ನಿತ್ಯ ದಿನ ಪತ್ರಿಕೆಗಳು, ಟಿವಿ ಮಾಧ್ಯಮಗಳು ಇಂತಹ ಸಾಕಷ್ಟು ಸುದ್ದಿಗಳನ್ನು ಪ್ರಚುರಪಡಿಸಿದರೂ ಸಹ ಮೋಸ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ನಮ್ಮ ನಡುವಿನ ಜನರ ಸೂಕ್ಷ್ಮ ಗುಣಗಳು ಹೆಚ್ಚಿದಾಗ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ನಿಮಗೆ ಒಂದೇ ವರ್ಷದಲ್ಲಿ ನೀವು ಕಟ್ಟಿದ ಹಣದ ಎರಡರಷ್ಟು ಹಣವನ್ನು ಕೊಡುತ್ತೇವೆ ಎಂದು ಹೇಳುವ ಸಾಕಷ್ಟು ಘಟನೆಗಳನ್ನ ನಾವು ಕೇಳಿದ್ದೇವೆ. ಇಲ್ಲಿ ಅದೆಷ್ಟು ಜನ ಅದರಲ್ಲೂ ನಗರದ ನಿವೃತ್ತಿ ವಯಸ್ಸಿನ ನಿವೃತ್ತಿಯ ಹಣವನ್ನು ತೊಡಗಿಸಿ ಕಳೆದುಕೊಂಡಿದ್ದವರನ್ನು ನೋಡಿದ್ದೇವೆ. ಆದರೆ ಇದನ್ನು ಈಗಲೂ ತಪ್ಪಿಸಲಾಗುತ್ತಿಲ್ಲ ಏಕೆಂದರೆ ಆ ಜನರ ಮೇಲಿನ ಕುರುಡುನಂಬಿಕೆ ಇಂತಹ ಅನಾಹುತಗಳಿಗೆ ನಿತ್ಯ ಕಾರಣ ಮಾಡುತ್ತದೆ.
ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೆಂಗಸೊಬ್ಬಳು ಐದಾರು ಕಡೆ ಹಣ ವಸೂಲಿ ಮಾಡುತ್ತಾಳೆ. ನಿನಗೆ ಸಾಕಷ್ಟು ಲಾಭ ಬರುತ್ತದೆ ಎಂದು ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ವ್ಯವಹಾರ ಮಾಡುವ ಮೋಸಗಾರ ಮನಸುಗಳು ಕೊನೆಗೆ ಸಾಕಷ್ಟು ಜನರ ಬದುಕನ್ನು ಅತಂತ್ರಗೊಳಿಸಿ ಕಣ್ಣಿಗೆ ಕಾಣುವಂತೆ ಮಾಡಿರುವ ಘಟನೆಗಳನ್ನು ಕಂಡರೂ ಸಹ ಮತ್ತೆ ಮತ್ತೆ ತಪ್ಪುಗಳಿಗೆ ನಮ್ಮ ನಡುವಿನ ಮನಸುಗಳು ಒಳಗಾಗುತ್ತಿರುವುದು ದುರಂತವಲ್ಲವೇ?
(ಮುಂದುವರೆಯುತ್ತದೆ)