Site icon TUNGATARANGA

ಸರ್ಕಾರಿ ಜಾಗ ಅತಿಕ್ರಮಣಕ್ಕೆ ಸರ್ಕಾರಿ ಅಧಿಕಾರಿಗಳು ಖಾಸಗಿ ವ್ಯಕ್ತಿಗೆ ಬೆಂಬಲ ನೀಡಿದ್ರಾ ಅರೋಪ

ಹೊಸನಗರ; ಖಾಸಗಿ ವ್ಯಕ್ತಿಯೊಬ್ಬರು ಸರಕಾರಿ ಜಾಗಕ್ಕೆ ಕಾಂಪೌಂಡ್ ನಿರ್ಮಿಸುವ ಮೂಲಕ ನಡೆಸಿದ್ದ ಅತಿಕ್ರಮಣವನ್ನು ತಾಲೂಕಿನ ಮೇಲಿನ ಬೆಸಿಗೆ ಗ್ರಾಮ ಪಂಚಾಯಿತಿ ಆಡಳಿತ ತೆರವುಗೊಳಿಸಿದೆ.
ಹೊಸನಗರ ತಾಲ್ಲೂಕು ಜಯನಗರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸರ್ವೆ ನಂ.೨೦ರ ಕಂದಾಯ ಭೂಮಿಯಲ್ಲಿ ಕಳೆದ ಹಲವು ದಶಕಗಳಿಂದ ಗ್ರಾಮ ಪಂಚಾಯಿತಿ ಬಳಕೆಯಲ್ಲಿದ್ದ ಜಾಗವನ್ನು ಕೆಲ ದಿನಗಳ ಹಿಂದೆ ಸ್ಥಳೀಯ ನಿವಾಸಿಯೊಬ್ಬರು ಅತಿಕ್ರಮಣ ನಡೆಸಿ

ಕಾಂಪೌಂಡ್ ನಿರ್ಮಿಸಿದ್ದರು. ಏಕಾಏಕಿ ಜಾಗ ಅತಿಕ್ರಮಣದಿಂದ ಗ್ರಾಮದ ಜನತೆ ಅಸಮಧಾನಗೊಂಡು ಸೋಮವಾರ ಪ್ರತಿಭಟನೆಯನ್ನು ಸಹಾ ನಡೆಸಿದ್ದರು. ಸರಕಾರಿ ಆಸ್ತಿಯನ್ನು ಉಳಿಸಿಕೊಳ್ಳಲು ವಿಫಲವಾಗಿರುವ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಘಟನೆಯಲ್ಲಿ ಕೆಲ ಸರಕಾರಿ ಇಲಾಖಾ ಅಧಿಕಾರಿಗಳು ಸಹಾ ಪರೋಕ್ಷವಾಗಿ ಅತಿಕ್ರಮಣಕ್ಕೆ ಬೆಂಬಲ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.


ಸರಕಾರಿ ಜಾಗವನ್ನು ಉಳಿಸುವಂತೆ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಗೋಪಾಲಕೃಷ್ಣ ಅವರಿಗೆ ಸಾರ್ವಜನಿಕರು ಮನವಿ ಮಾಡಿದ್ದರು. ಇದಾದ ಬೆನ್ನಲ್ಲೇ ಗ್ರಾಮಾಡಳಿತ ಅತಿಕ್ರಮಣವನ್ನು ತೆರವುಗೊಳಿಸಿದೆ. ನಿರ್ಮಿಸಿದ್ದ ಕಾಂಪೌಂಡನ್ನು ಒಡೆದು ಜಾಗ ಖುಲ್ಲಾ ಮಾಡಲಾಗಿತು. ಗ್ರಾಪಂ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಪಿಡಿಓ ಪವನ್‌ಕುಮಾರ್, ಹಾಗೂ ಸದಸ್ಯರು ಸ್ಥಳದಲ್ಲಿದ್ದರು. ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ ಸ್ಥಳಕ್ಕೆ ಭೇಟಿ ನೀಡಿದ್ದರು.

Exit mobile version