ಶಿವಮೊಗ್ಗ: ನಗರದ ಪ್ರತಿಷ್ಠಿತ ರ‍್ಜಿ ಆಸ್ಪತ್ರೆಗಳ ಸಮೂಹವು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಶಿವಮೊಗ್ಗ ಹಾಗೂ ಮಲೆನಾಡು ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸೌಲಭ್ಯಗಳೊಂದಿಗೆ ನರವೈಜ್ಞಾನಿಕ ಇಂರ‍್ವೆನ್ಸನ್ಸ್ ಚಿಕಿತ್ಸಾ ಸೇವೆಗಳನ್ನು ಸರ‍್ವಜನಿಕರಿಗೆ ನೀಡಲು ಮುಂದಾಗಿದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಛರ‍್ಮನ್ ಡಾ.ಧನಂಜಯ ಸರ್ಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೀವದ ಜೊತೆ ಜೀವನ ಉಳಿಯುವುದು ಬಹಳ ಮುಖ್ಯ. ವಿಶ್ವದಲ್ಲಿ ಹೃದಯರೋಗಕ್ಕೆ ಸಂಬಂಧಿಸಿದAತೆ ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನಲ್ಲಿದ್ದರೆ, ಮೆದುಳು ಮತ್ತು ನ್ಯೂಕ್ ಸಂಬಂಧಿಸಿದ ಸಾವಿನ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ ರ‍್ಷ 100 ಜನರ ಪೈಕಿ ಒಬ್ಬರಿಗೆ ಸ್ಟೋಕ್ ಆಗುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ. ಬೆಳಗಾಂ ಸೇರಿದಂತೆ ರ‍್ನಾಟಕದ ಐದಾರು ಜಿಲ್ಲೆಗಳಲ್ಲಿ ಈ ಚಿಕಿತ್ಸಾ ಸೌಲಭ್ಯವಿದ್ದು, ಇದೀಗ ಶಿವಮೊಗ್ಗದ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದರು.
ಮೆದುಳು ಮತ್ತು ಬೆನ್ನುಹುರಿಯಹಲವಾರು ರೋಗಗಳಿಗೆ ಯಾವುದೇ ತೆರೆದ ಶಸ್ತ್ರಚಿಕಿತ್ಸೆ ಇಲ್ಲದೆಯೇ, ರಕ್ತ ನಾಳದ ಮೂಲಕ ಅಂಜಿಯೋಗ್ರಾಮ್ ಮಾದರಿಯಲ್ಲಿ ಆಧುನಿಕ ಚಿಕಿತ್ಸೆ ನೀಡಲಾಗುತ್ತದೆ. ಹೃದಯಾಘಾತ ಅಥವಾ ಹೃದಯದ ರಕ್ತ ನಾಳದ ತೊಂದರೆ ಆದಾಗ ಹೇಗೆ ಓಪನ್ ಹಾರ‍್ಟ್ ಸರ‍್ಜರಿ ಇಲ್ಲದೇ ಅಂಜಿಯೋಪ್ಲಾಸ್ಟಿ/ ಸೈಂಟಿಂಗ್ ಮಾಡಲಾಗುವುದೋ ಅದೇ ರೀತಿಯಲ್ಲಿ ಮೆದುಳಿನಲ್ಲೂ ಮೆದುಳಿನ ರಕ್ತನಾಳಗಳ ಚಿಕಿತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೆದುಳು ಅಥವಾ ಬೆನ್ನುಹುರಿಯಲ್ಲಿನ ಸಣ್ಣ ಸಮಸ್ಯೆಗಳು ಮತ್ತು ಕಷ್ಟಕರ ಸ್ಥಳಗಳನ್ನು ಸಹ ಈ ವಿಧಾನದಿಂದ ಸುಲಭವಾಗಿ ತಲುಪಬಹುದು ಮತ್ತು ಚಿಕಿತ್ಸೆ ನೀಡಬಹುದು. ಅದಲ್ಲದೇ ಮಕ್ಕಳು, ವಯೋವೃದ್ಧರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರು, ಅರಿವಳಿಕೆ ಹಾಗೂ ಸರ‍್ಜರಿಗೆ ಯೋಗ್ಯವಲ್ಲದವರಲ್ಲೂ ಈ ಚಿಕಿತ್ಸೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಮೆದುಳಿನ ರಕ್ತನಾಳಗಳಲ್ಲಿ ರಕ್ತನಾಳ ಹೊಡೆದು ಮೆದುಳಿನ ರಕ್ತಸ್ರಾವವಾಗುವುದು, ರಕ್ತನಾಳಗಳಲ್ಲಿ ತಡೆ ಉಂಟಾಗಿ ಮೆದುಳಿನ ರಕ್ತ ಸಂಚಾರ ಕಡಿತವಾಗುವುದು, ಮೆದುಳಿನ ರಕ್ತಸ್ರಾವ ಮೆದುಳಿನ ಗುಳ್ಳೆಗಳು ಮತ್ತು ರಕ್ತ ಗೊಂಚಲುಗಳು ಗುಣಪಡಿಸಬಹುದಾದ ಮೆದುಳಿನ ರಕ್ತಸ್ರಾವದ ಪ್ರಮುಖ ಕಾರಣಗಳಾಗಿವೆ ಎಂದರು.
ನಮ್ಮ ಆಸ್ಪತ್ರೆಯಲ್ಲಿ ಡಿಎಸ್‌ಎ (ಡಿಜಿಟಲ್ ಸಬ್ಲ್ಯಾಕ್ಷನ್ ಅಂಜಿಯೋಗ್ರಫಿ)-ಸೆರೆಬ್ರಲ್/ಸ್ಟೈನಲ್, ಮೆಕ್ಯಾನಿಕಲ್ ಗ್ರಂಬೋಕ್ಷಮಿ, ಮೆದುಳಿನ ಗುಳ್ಳೆ (ಚಿಟಿeuಡಿಥಿsm) ಚಿಕಿತ್ಸೆ – ಎ. ಸಿಂಪಲ್ ಕಾಯಿಲಿಂಗ್, ಬಿ. ಬಲೂನ್ ಅಥವಾ ಸ್ಟೆಂಟ್ ನೆರವಿನ ಕಾಯಿಲಿಂಗ್, ಸಿ. ಫ್ಲೋ ಡೈರ‍್ಟರ್, ಎಷ್ಟೋಲೈಸೇಶನ್, ಮೆದುಳಿನ ಆಂಜಿಯೋಪ್ಲಾಸ್ಟಿ ಮತ್ತು ಸೈಂಟಿಂಗ್ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದು, ಸರ‍್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ನ್ಯೂರೋ ರ‍್ಜನ್ ಡಾ. ಹರೀಶ್ ಮಾತನಾಡಿ, ಮೆದುಳಿನಲ್ಲಿ ರಕ್ತ ಸ್ರಾವ ಅಥವಾ ರಕ್ತ ಸಂಚಾರ ಕಡಿತವಾಗಿ ಸ್ಟೋಕ್ /ಪರ‍್ಶ್ವವಾಯು ಉಂಟಾದಾಗ ಎಂ.ಆರ್. ಐ / ಸೀ.ಟೀ ಸ್ಕ್ಯಾನಿಂಗ್ ಅಥವಾ ಅಂಜಿಯೋಗ್ರಾಮ್ ಮಾಡಿ ರಕ್ತನಾಳಗಳಲ್ಲಿನ ದೋಷವನ್ನು ಪತ್ತೆ ಮಾಡಲಾಗುತ್ತದೆ. ರಕ್ತನಾಳದಲ್ಲಿ ದೋಷ ಕಂಡು ಬಂದಲ್ಲಿ ಸಾಮಾನ್ಯವಾಗಿ ಮೆದುಳಿನ ರ‍್ಜರಿ ಮಾಡಬೇಕಾಗಬಹುದು, ಇಂತಹ ತೊಂದರೆಗಳನ್ನು ರ‍್ಜರಿ ಇಲ್ಲದೇ ಆಂಜಿಯೋಪ್ಲಾಸ್ಟಿ ಅಥವಾ ಕಾಯ್ಲಿನ್ಸ್ ಮಾಡಿ ಗುಣಪಡಿಸಬಹುದಾಗಿದೆ. ಈ ಚಿಕಿತ್ಸಾ ವಿಧಾನವು ಸರ‍್ಜರಿಗೆ ಹೋಲಿಸಿದರೆ ಬಹಳ ಸುರಕ್ಷಿತವಾದುದು ಹಾಗೂ ಇದರಿಂದ ರೋಗಿಯು ಬೇಗ ಗುಣಮುಖರಾಗುತ್ತಾರೆ ಎಂದರು.
ಮೆದುಳಿಗೆ ಸರಬರಾಜು ಮಾಡುವ ರಕ್ತನಾಳದ ಮುಚ್ಚುವಿಕೆಯಿಂದ ಪರ‍್ಶ್ವವಾಯು ಉಂಟಾಗುತ್ತದೆ. ದೊಡ್ಡ ನಾಳದ ಮುಚ್ಚುವಿಕೆಯ ಸಂರ‍್ಭದಲ್ಲಿ, ರೋಗಿಯು ಚಿಕಿತ್ಸೆಯಿಲ್ಲದೆ ಸಾವು ಅಥವಾ ಕೋಮಾಗೆ ಕಾರಣವಾಗಬಹುದು. ರಕ್ತದ ಹರಿವಿನ ನರ‍್ಬಂಧದ ನಂತರ, ಪ್ರತಿ ನಿಮಿಷಕ್ಕೆ ಸುಮಾರು 1.9 ಮಿಲಿಯನ್ ನರಕೋಶಗಳು ಚಿಕಿತ್ಸೆ ಇಲ್ಲದೆ ಸಾಯುತ್ತವೆ. ಸ್ಟೋಕ್ ಆಗಿ ಶುರುವಿನ ಕೆಲವು ಗಂಟೆಗಳಲ್ಲಿ ರೋಗಿಯು ಆಸ್ಪತ್ರೆ ತಲುಪಿದರೆ, ಥಾಂಬೆಕ್ಟಮಿ ಎಂಬ ಕರ‍್ಯವಿಧಾನದಿಂದ ರಕ್ತನಾಳದ ತಡೆಯನ್ನು ತೆಗೆದು ಸಂಪರ‍್ಣ ಗುಣವಾಗುವ ಸಂಭವ ಇರುತ್ತದೆ. ಈ ವಿಧಾನವು ಪರ‍್ಶ್ವವಾಯುವಿನ ರೋಗಿಗಳಲ್ಲಿ ಭರವಸೆಯ ಕಿರಣವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ. ವಾದಿರಾಜ ಕುಲರ‍್ಣಿ, ಆಸ್ಪತ್ರೆಯ ನ್ಯೂರೋಲಜಿಸ್ಟ್ ಡಾ. ಪ್ರಶಾಂತ್, ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ್ ಉಪಸ್ಥಿತರಿದ್ದರು.