Site icon TUNGATARANGA

ಬೆಳಕಿನ ಹಬ್ಬ ದೀಪಾವಳಿ ಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಬಿರುಸಿನ ಸಿದ್ಧತೆ ವಸ್ತುಗಳ ಖರೀದಿ ಭರಾಟೆ ಜೋರು

ಶಿವಮೊಗ್ಗ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಬಿರುಸಿನ ಸಿದ್ಧತೆ ನಡೆದಿವೆ. ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿ ಸಾಗಿದೆ.
ಹಿಂದೂಗಳು ವಿಜೃಂಭಣೆಯಿಂದ ಆಚರಿಸುವ ಈ ಹಬ್ಬದ ನಿಮಿತ್ತ ಆಕಾಶಬುಟ್ಟಿ, ಬಾಳೆ-ಕಬ್ಬು, ಚೆಂಡು ಹೂ, ಸೇವಂತಿಗೆ, ಕಾಕಡ ಮುಂತಾದ ಹೂಗಳ ಖರೀದಿಗೆ ಜೋರಾಗಿ ಸಾಗಿದೆ.


ನಗರದ ಫ್ರೀಡಂ ಪಾರ್ಕ್‌ನಲ್ಲಿ ನೂರಕ್ಕೂ ಹೆಚ್ಚು ಪಟಾಕಿ ಸ್ಟಾಲ್‌ಗಳನ್ನು ಹಾಕಿದ್ದು ಈ ಬಾರಿ ವಿಶೇಷವೆಂದರೆ ಮಕ್ಕಳ ಆಟಿಕೆ ವಸ್ತುಗಳನ್ನು ಆಡಲು ಕಲ್ಪಿಸಲಾಗಿದೆ. ಬೆಲೆ ಏರಿಕೆ ನಡುವೆಯೂ ಪಟಾಕಿ ಖರೀದಿ ಸಂಭ್ರಮ ಜೋರಾಗಿತ್ತು. ವಿವಿಧ ರೀತಿಯ ಹಣತೆಗಳು, ಲೈಟ್‌ಗಳು, ಆಕಾಶಬುಟ್ಟಿ, ಪ್ಲಾಸ್ಟಿಕ್ ಹೂವುಗಳು ಮಾರಾಟ ಜೋರಾಗಿತ್ತು.
ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಜಿಲ್ಲೆಯಲ್ಲಿ ಪಟಾಕಿ ಖರೀದಿಯೂ ಜೋರಾಗಿದೆ. ನಗರ ಸೇರಿದಂತೆ ಜಿಲ್ಲಾದ್ಯಂತ ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿ ಭರಾಟೆ ಈಗಾಗಲೇ ಆರಂಭವಾಗಿದ್ದು, ಇದು ಪಟಾಕಿ ವರ್ತಕರನ್ನು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ವಿವಿಧೆಡೆ ಕೂಡ ಪಟಾಕಿ ಮಳಿಗೆಗಳನ್ನು ಹಾಕಲಾಗಿದ್ದು, ವ್ಯಾಪಾರದಲ್ಲಿ ಕಳೆದ ಬಾರಿಗಿಂತಲೂ ಸುಧಾರಣೆ ಕಂಡಿದೆ ಎನ್ನುತ್ತಾರೆ ವರ್ತಕರು. ಒಂದೊಂದು ಮಳಿಗೆಗಳಲ್ಲಿ ನಾನಾ ತರದ ಪಟಾಕಿಗಳ ಮಾರಾಟ ನಡೆದಿವೆ.


ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕಾಗಿ ಜನರು ಉತ್ಸಾಹದಿಂದ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಹಬ್ಬದ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಬಿರುಸಿನ ಸಿದ್ಧತೆ ನಡೆದಿವೆ. ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.
ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಗಾಂಧಿ ಬಜಾರ್, ನೆಹರು ರಸ್ತೆ, ಬಿಹೆಚ್ ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಲಕ್ಷ್ಮಿ ಟಾಕೀಸ್, ಪೊಲೀಸ್ ಚೌಕಿ, ಗೋಪಾಳ ಸೇರಿದಂತೆ ಹಲವೆಡೆ ಹೂವಿನ ವ್ಯಾಪಾರ, ಹಣ್ಣು, ತರಕಾರಿ ಹಾಗೂ ಬಾಳೆ ಎಲೆ, ಬಾಳೆಕಂದುಗಳ ವ್ಯಾಪಾರ ಜೋರಾಗಿತ್ತು.
ಪಟಾಕಿ ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ನಾನಾ ರೀತಿಯ ಸಿಡಿಮದ್ದು ಹಾಗೂ ಮಣ್ಣಿನ ಹಣತೆ ಕೊಂಡುಕೊಳ್ಳುವ ದೃಶ್ಯ ಕಂಡುಬಂತು.
ಪಟಾಕಿ, ಹಣತೆ ಖರೀದಿ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಜಿಲ್ಲೆಯಲ್ಲಿ ಪಟಾಕಿ ಖರೀದಿಯೂ ಜೋರಾಗಿದೆ. ಒಂದೊಂದು ಮಳಿಗೆಗಳಲ್ಲಿ ನಾನಾ ತರದ ಪಟಾಕಿಗಳ ಮಾರಾಟ ನಡೆದಿದ್ದು, ಸುರಸುರ ಬತ್ತಿ, ಹೂವಿನ ಬತ್ತಿ, ಆಕಾಶ ಬಾಣ ಹಾಗೂ ಇತರೆ ಪಟಾಕಿಗಳಿದ್ದವು. ಜನರು ವ್ಯಾಪಾರದಲ್ಲಿ ಚೌಕಾಸಿ ಮಾಡುತ್ತಿದ್ದರು. ದರ ಕಡಿಮೆ ಮಾಡುವವರ ಬಳಿ ಜನರು ಹೆಚ್ಚಾಗಿ ಹೋಗುತ್ತಿದ್ದರು. ನೂರರಿಂದ ಸಾವಿರಾರು ರೂಪಾಯಿಗಳ ಪಟಾಕಿಗಳನ್ನು ಜನರು ಖರೀದಿಸುತ್ತಿದ್ದರು.


ಹಣತೆ ವ್ಯಾಪಾರ ಜೋರು: ಬೆಳಕಿನ ಹಬ್ಬ ದೀಪಾವಳಿಗೆ ಮೆರುಗು ನೀಡುವ ಹಣತೆ, ಭರ್ಜರಿ ಮಾರಾಟವಾಗುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಹಣತೆಗಳ ಮಾರಾಟಕ್ಕೆ ಇಡಲಾಗಿದೆ. ಕೆಲವಡೆ ಸಣ್ಣ ಹಣತೆಗಳು ೩೦ ರೂ. ಡಜನ್ ಹಾಗೂ ದೊಡ್ಡ ಹಣತೆಗಳು ೫೦ ರೂ.ಗೆ ಡಜನ್ ಮಾರಲಾಯಿತು. ವಿಧ-ವಿಧವಾದ ಹಣತೆಗಳನ್ನು ಮಾರಾಟಕ್ಕಿಡಲಾಗಿದ್ದು, ಗ್ರಾಹಕರು ತಮಗೆ ಇ?ವಾದ ಹಣತೆಗಳನ್ನು ಖರೀದಿಸಿದರು.
ಲಕ್ಷ್ಮಿ ಪೂಜೆಗೆ ಸಿದ್ಧತೆ: ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಎರಡು ದಿನಗಳ ಕಾಲ ಲಕ್ಷ್ಮಿ ಪೂಜೆ ನೆರವೇರಲಿದೆ. ಇದಕ್ಕಾಗಿ ಜನರು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯಲ್ಲಿ ಹೂವು ಹಣ್ಣು ಸೇರಿದಂತೆ ಲಕ್ಷ್ಮಿ ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿ ಸಾಗಿದೆ.
ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು: ಸಾಲು ಸಾಲಾಗಿ ಹಬ್ಬದ ರಜೆ ಬಂದಿರುವುದರಿಂದ ಪ್ರಯಾಣಿಕರ ಸಂಖ್ಯೆಯ ದುಪ್ಪಟ್ಟಾಗಿದೆ. ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದಂತೆ ಹಲವು ನೆನೆಸಿರುವ ಜಿಲ್ಲೆಯ ಜನರು ತಮ್ಮ ತಮ್ಮ ಊರುಗಳಿಗೆ ಹಬ್ಬಕೆಂದು ಹಿಂದಿರುಗುತ್ತಿದ್ದಾರೆ ಹೀಗಾಗಿ ಕೆಎ???ರ್ಟಿಸಿ, ರೈಲು, ಖಾಸಗಿ ಬಸ್ಸುಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಕೆಲವರು ಈ ಹಿಂದೆಯೇ ಮುಂಗಡ ಟಿಕೆಟ್ ಬುಕ್ ಮಾಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಹಬ್ಬದ ಸಂಭ್ರಮ ಜೋರಾಗಿದ್ದು ಎಲ್ಲೆಡೆ ಸಡಗರ ಮನೆ ಮಾಡಿದೆ.

Exit mobile version