Site icon TUNGATARANGA

ಶ್ರೀ ಆದಿಚುಂಚನಗಿರಿ ಶಾಖಾ ಮಠದ 34 ನೇ ವಾರ್ಷಿಕೋತ್ಸವ, ಭಗವತ್ ಚಿಂತನ,ಧರ್ಮ ಸಂಕಥನ| ಮನು ಕುಲದ ಪರಿವರ್ತನೆ, ವಿಶ್ವಶಾಂತಿ ಹಾಗೂ ಸೌಹಾರ್ದತೆಯಲ್ಲಿ ಧರ್ಮಗಳ ಪಾತ್ರ  ಕುರಿತು ಉಪನ್ಯಾಸ | ಸಾಧಕರಿಗೆ ಸನ್ಮಾನ.”

ಶಿವಮೊಗ್ಗ,ಆ.29:
ಇಲ್ಲಿನ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನವೆಂಬರ್ 4 ಮತ್ತು 5 ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಹಿಸಲಾಗಿದೆ.
ನವಂಬರ್ 4 ರಂದು ಬೆಳಿಗ್ಗೆ 9.30 ರಿಂದ ರಾತ್ರಿ 10. 30 ರವರಗೆ  ನಡೆಯಲಿರುವ ಭಗವತ್ ಚಿಂತನ, ಧರ್ಮ ಸಂಕಥನ, ಮನು ಕುಲದ ಪರಿವರ್ತನೆ, ವಿಶ್ವಶಾಂತಿ ಹಾಗೂ ಸೌಹಾರ್ದತೆಯಲ್ಲಿ ಧರ್ಮಗಳ ಪಾತ್ರ  ಕುರಿತು ಉಪನ್ಯಾಸ,  ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ.

ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ  ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ದಿವ್ಯ ಸತ್ಸಂಗ, ಧರ್ಮ ಸಂಕಥನ ಹಾಗೂ ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4.30 ಕ್ಕೆ ಪೂಜ್ಯರಿಂದ ಆಶೀರ್ವಚನ.  ಸಂಜೆ 6.30 ಗಂಟೆಗೆ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ  ಶ್ರೀ ಮಠದ 34 ನೇ ವಾರ್ಷಿಕೋತ್ಸವದ ಸಮಾರಂಭ ಹಾಗೂ ಸತ್ಸಂಗ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಸಂಸ್ಥೆಯ ಶಿಕ್ಷಕ ಹಿರಿಯ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಸನ್ಮಾನಿಸುವ ಕಾರ್ಯಕ್ರಮ ನಡೆಯುವುದು.

 ನವೆಂಬರ್  5 ರಂದು ಬೆಳಿಗ್ಗೆ 07 ಗಂಟೆಗೆ ಶರಾವತಿ ನಗರದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ  ಪೂಜ್ಯ ಶ್ರೀಗಳ ಸಾನ್ನಿಧ್ಯದಲ್ಲಿ  ಹೋಮ – ಹವನ ಮತ್ತು ವಿಶೇಷ ಪೂಜಾ ಕೈಂಕಾರ್ಯಗಳನ್ನು ನಡೆಸಲಾಗುವುದು.


 ಬೆಳಿಗ್ಗೆ 10 ಗಂಟೆಗೆ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಅಂದು ಪೂಜ್ಯ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ  ಶಿಕ್ಷಕರಿಗೆ ಹಮ್ಮಿಕೊಂಡಿರುವ  ಶಿಕ್ಷಕರ ಕಾರ್ಯಗಾರದ ಉದ್ಘಾಟನೆಯನ್ನು ಶ್ರೀಗಳು ನೆರವೇರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕಾರ್ಯಗಾರದ ಸಮಾರೋಪ ಸಮಾರಂಭ ನಡೆಯುವುದು.
 ಶ್ರೀ ಮಠದ ಶಾಖೆಯ ಶ್ರೀಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದು,
 ಕಾರ್ಯಕ್ರಮಕ್ಕೆ ಸರ್ವರನ್ನು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠ  ಸ್ವಾಗತಿಸಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Exit mobile version