Site icon TUNGATARANGA

ಡಾ. ವೀರೇಂದ್ರ ಹೆಗ್ಗಡೆಯವರೊಂದಿಗೆ ಚರ್ಚಿಸಿದ ಪವಿತ್ರಾ ರಾಮಯ್ಯ

ಕಾಡಾ ವ್ಯಾಪ್ತಿಗೆ ನೇತ್ರಾವತಿ ನದಿ ಪ್ರದೇಶ, ಅಭಿವೃದ್ದಿ ಚಿಂತನೆ


ಶಿವಮೊಗ್ಗ, ಜ.31:
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮದರ್ಶಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ರಾಜ್ಯ ಸರ್ಕಾರವು ಅಚ್ಚುಕಟ್ಟು ಪ್ರದೇಶದ ಸರ್ವತೋಮುಖ ಅಭಿವೃದ್ದಿಗಾಗಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧಿನಿಯಮ 1980ರ ಕಾಯ್ದೆಯಡಿ  ಕಾಡಾ ಪ್ರಾಧಿಕಾರವು 1979ನೇ ಇಸವಿಯಲ್ಲಿ ಸ್ಥಾಪನೆ ಮಾಡಿತು.
ಈ ಒಂದು ಪ್ರಾಧಿಕಾರಕ್ಕೆ ಮಲೆನಾಡು, ಅರೆ ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆ ಪ್ರದೇಶದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳು ಒಳಪಡುತ್ತದೆ. ಒಟ್ಟು 12ಜಿಲ್ಲೆಗಳು ಹಾಗೂ 30 ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಗಳು ಸೇರಿವೆ. ಇದರಡಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಾಧಿಕಾರ ವ್ಯಾಪ್ತಿಗೆ ಬರುತ್ತದೆ. ವಿಪರ್ಯಾಸ ಎಂದರೆ ಕಾಡ ಇಲ್ಲಿಯವರೆಗೂ ಮುಟ್ಟಿರುವುದಿಲ್ಲ ಜೊತೆಗೆ ಹಿಂದೆ ಅಧಿಕಾರ ವಹಿಸಿಕೊಂಡ ಯಾರು ಕೂಡ ಇದರ ಆಲೋಚನೆ ಮಾಡದೆ ಇರುವುದು ಸೋಜಿಗದ ಸಂಗತಿ.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿಯು 1100ಹೆಕ್ಟೇರ್, ಸ್ವರ್ಣ ನದಿಯು 19,000ಹೆಕ್ಟೇರ್, ಗುರುಪುರ 3400ಹೆಕ್ಟೇರ್, ಮುಲ್ಕಿ 5500ಹೆಕ್ಟೇರ್, ನಾರಿ ಹೊಳೆ 9500ಹೆಕ್ಟೇರ್ ಮತ್ತು ಪಯಾಸವಾಸಿನಿ 2000ಹೆಕ್ಟೇರ್ ವಿಸ್ತೀರ್ಣ ಹೊಂದಿರುವುದು ಗಮನಕ್ಕೆ ಬಂದಿದೆ.
ಅಚ್ಚುಕಟ್ಟು ಭಾಗವನ್ನು ದಕ್ಷಿಣ ಕನ್ನಡದಲ್ಲಿ ವಿಸ್ತರಿಸಲು ಕಾರ್ಯ ಯೋಜನೆ ರೂಪಿಸುವ ಸಲುವಾಗಿ ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಸುದೀರ್ಘವಾಗಿ ಚರ್ಚಿಸಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪೂಜ್ಯರು ನಮ್ಮ ಭಾಗದಲ್ಲಿ ನೀರಿನ ಅಲಭ್ಯತೆ ಬಹು ವರ್ಷಗಳಿಂದ ಇದ್ದು, ರೈತರಿಗೆ ಉತ್ತಮ ಇಳುವರಿ ಪಡೆಯಲು ಸರಿಯಾದ ಯೋಜನೆಗಳು ಇಲ್ಲದೆ ಇರುವುದು ನಮ್ಮ ಭಾಗದ ರೈತರಿಗೆ ಅನಾನುಕೂಲವಾಗಿದೆ ನೀವು ನಮ್ಮನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದು ಒಳ್ಳೆಯ ಬೆಳವಣಿಗೆ ಶೀಘ್ರವೇ ಇದಕ್ಕೆ ಸಂಬಂಧಿಸಿದಂತೆ ನಾನು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದು ಅಭಯ ನೀಡಿದರು.

Exit mobile version