Site icon TUNGATARANGA

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ವಿಶ್ವಾಸ ಬಹಳ ಮುಖ್ಯ: ಆರ್‌ಬಿಐನ ಬ್ಯಾಂಕಿಂಗ್ ಲೋಕಪಾಲ್ ಡಾ ಬಾಲು ಕೆಂಚಪ್ಪ ಅವರು ಅಭಿಪ್ರಾಯ

Tungataranga specile

ಶಿವಮೊಗ್ಗ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ವಿಶ್ವಾಸ ಬಹಳ ಮುಖ್ಯ ಎಂದು ಆರ್‌ಬಿಐನ ಬ್ಯಾಂಕಿಂಗ್ ಲೋಕಪಾಲ್ ಡಾ ಬಾಲು ಕೆಂಚಪ್ಪ ಅವರು ಅಭಿಪ್ರಾಯಪಟ್ಟರು
ನಗರದ ಕುವೆಂಪು ರಂಗಮಂದಿರದಲ್ಲಿ ಆರ್‌ಬಿಐ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್ ಏತರ ಗ್ರಾಹಕರ ಅನುಕೂಲಕ್ಕಾಗಿ ಆಯೋಜಿಸಿದ್ದ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ನಂಬಿಕೆ ಹಾಗೂ ಗ್ರಾಹಕರನ್ನು ಸೆಳೆಯುವ ಶಕ್ತಿ ಇದೆ, ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳುವಳಿಕೆ ನೀಡುವುದು ನಮ್ಮ ಲೋಕಪಾಲನ ಜವಾಬ್ದಾರಿ ಹಿಂದೆ ಬ್ಯಾಂಕಿನ ಮೇಲೆ ವಿಶ್ವಾಸದ ವಾತಾವರಣ ಇರಲಿಲ್ಲ ನಂತರ ಹಲವಾರು ಬ್ಯಾಂಕಿಗಳನ್ನು ವಿಲೀನಗೊಳಿಸಿ ಆರ್ಥಿಕವಾಗಿ ಶಕ್ತಗೊಳಿಸಿ ಗ್ರಾಹಕರ ನಂಬಿಕೆ ವಿಶ್ವಾಸ ನಿಯತ್ತು ಉಳಿಸಿಕೊಳ್ಳಲು ಆರ್‌ಬಿಐ ಬಹಳ ಶ್ರಮಿಸುತ್ತಿದೆ ಎಂದರು.
ಆರ್‌ಬಿಐ ವ್ಯಾಪ್ತಿಯೊಳಗೆ ಬರುವ ಸಂಸ್ಥೆಗಳಲ್ಲಿ ಗ್ರಾಹಕರಿಗೆ ಸರ್ವಿಸ್ ಗಳಲ್ಲಿ ತೊಂದರೆ ಕಂಡು ಬಂದಾಗ ಕೋರ್ಟಿಗೆ ಹೋಗುವ ಬದಲು ಆರ್‌ಬಿಐನ ಲೋಕಪಾಲ್ ಗೆ ದೂರ ನೀಡಿದ್ದಲ್ಲಿ ಶುಲ್ಕ ರಹಿತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದರು.
ಆರ್‌ಬಿಐ ನಮ್ಮ ದೇಶದಲ್ಲಿ ಸ್ಥಾಪನೆಗೊಂಡು ೯೦ ವರ್ಷ ಕಳೆದಿದ್ದು ತನ್ನ ಕಾರ್ಯಕ್ಷೇತ್ರವನ್ನು ಬಲಾಢ್ಯ ಗೊಳಿಸುತ್ತಿದೆ. ಹಣದುಬ್ಬರವನ್ನು ನಿಯಂತ್ರಿಸುವುದು ಪ್ರಮುಖ ಕೆಲಸವಾಗಿದ್ದು, ಇಡೀ ಜಗತ್ತಿನಲ್ಲಿ ನಡೆಯುವ ಡಿಜಿಟಲ್ ವ್ಯವಹಾರ ನಮ್ಮ ಭಾರತ ದೇಶದು ೫೦% ಪಾಲಿದೆ ಪ್ರತಿ ತಿಂಗಳಿಗೆ ನಮ್ಮ ದೇಶದಲ್ಲಿ ಸಾವಿರದ ಮುನ್ನೂರು ಕೋಟಿ ಡಿಜಿಟಲ್ ವಹಿವಾಟು ನಡೆಯುತ್ತಿದೆ. ಅದು ವಿಶ್ವಾಸದ ಮೇರೆಗೆ ಎಂದರು.


ಗ್ರಾಹಕರುಗಳು ತಮ್ಮ ದೂರುಗಳ ಪರಿಹಾರ ಸಂಬಂಧ ಬ್ಯಾಂಕುಗಳಿಗೆ ಆರ್‌ಬಿಐ ನೀಡಿರುವ ಸೂಚನೆ ಮತ್ತು ತಮ್ಮ ದೂರುಗಳನ್ನು ಕಾಲಮಿತಿ ಒಳಗೆ ಪರಿಹರಿಸಿಕೊಳುವ ವಿಧಾನವನ್ನು ತಿಳಿಸಿದರು. ಆರ್‌ಬಿಐ ಲೋಕಪಾಲ ಯೋಜನೆ ೨೦೨೧ರ ಅಡಿಯಲ್ಲಿ ಇರುವ ಪರಿಹಾರ ವಿಧಾನ ಹಾಗೂ ದೂರುಗಳನ್ನು ಆರ್‌ಬಿಐ ಪೋರ್ಟಲ್ ಹಾಗೂ ಇತರೆ ಮಾಧ್ಯಮದ ಮೂಲಕ ಹೇಗೆ ಸಲ್ಲಿಸಬೇಕು ಹಾಗೂ ನಾನಾ ವಿಧವಾದ ವಂಚನೆಗಳ ಬಗ್ಗೆ ತಡಿಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿಸಿದರು.
ನಂತರ ಮಾತನಾಡಿದ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಜಯಪ್ರಕಾಶ್ ಅವರು, ಗ್ರಾಹಕರು ಡಿಜಿಟಲ್ ವ್ಯವಸ್ಥೆಗೆ ಬದಲಾಗಬೇಕು. ಹಿಂದೆ ಬ್ಯಾಂಕಿಂಗ್ ವ್ಯವಹಾರಗಳು ಪೆನ್ನು ಪೇಪರ್ ಫೈಲ್ಗಳಲ್ಲಿ ನಡೆಯುತ್ತಿತ್ತು. ಈಗ ಗ್ರಾಹಕರ ಸುಲಭ ಕಾಗಿ ಪ್ರತಿಯೊಂದು ಬ್ಯಾಂಕಿಂಗ್ ಸರ್ವಿಸ್ ಗಳನ್ನು ಡಿಜಿಟಲ್ ಗೊಳಿಸಿ ಅವರ ಕೈಯಲ್ಲೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಡಿಜಿಟಲ್ ವಹಿವಾಟು ಸುರಕ್ಷಿತ ಎಂಬ ಧೈರ್ಯ ಮೂಡಿಸುವ ಸಲುವಾಗಿ ಈ ಲೋಕಪಾಲ ಕಾರ್ಯಕ್ರಮ ಆಯೋಜಿಸುತ್ತಿದೆ. ಗ್ರಾಹಕರ ಪ್ರತಿಯೊಂದು ರೂಪಾಯಿಯು

ವ್ಯತ್ಯಾಸವಾಗದಂತೆ ಸುರಕ್ಷಿತವಾಗಿ ಇಡುವುದು ಬ್ಯಾಂಕಿಂಗ್ ನ ಉದ್ದೇಶ. ಗ್ರಾಹಕರು ಜಾಗೃತರಾದಾಗ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗಳು ಸುಲಭ ಎಂದರು ಸಭೆಯಲ್ಲಿ ಪ್ರಶ್ನೋತ್ತರ ಕಲಾಪವನ್ನು ಏರ್ಪಡಿಸಲಾಗಿತ್ತು ಸಭಿಕರ ಪ್ರಶ್ನೆಗಳಿಗೆ ಆರ್.ಬಿ.ಐ.ನ ಲೋಕಪಾಲರು ಹಾಗೂ ಇತರೆ ಸಿಬ್ಬಂದಿಗಳು ಉತ್ತರಿಸಿದರು ರಿಸರ್ವ್ ಬ್ಯಾಂಕ್ ಲೋಕಪಾಲ ಯೋಜನೆ ೨೦೨೧ ಗೆ ಸಂಬಂಧಿಸಿದಂತಹ ಕರಪತ್ರ ಹಾಗೂ ಕಿರು ಹೊತ್ತಿಗೆಯನ್ನು ಹಂಚಲಾಯಿತು ಕಾರ್ಯಕ್ರಮದಲ್ಲಿ ಉಪ ಲೋಕಪಾಲ ನಿಧಿ ಅಗರ್ವಾಲ್ ಕೆನರಾ ಬ್ಯಾಂಕ್ ಶಿವಮೊಗ್ಗ ಉಪ ಮಹಾ ಪ್ರಬಂಧಕರಾದ ದೇವರಾಜ್ ವಿವಿಧ ಬ್ಯಾಂಕ್ ನ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version