Site icon TUNGATARANGA

ನಗರಕ್ಕೆ ಶುದ್ಧ ನೀರಿನ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ, ಇಲ್ಲದೇ ಹೋದರೆ ನಿರ್ವಹಣೆಯ ಜವಬ್ದಾರಿಯನ್ನು ನಮಗಾದರೂ ಕೊಡಿ:ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಆಕ್ರೋಶ

ಶಿವಮೊಗ್ಗ,ಅ.23: ನಗರಕ್ಕೆ ಶುದ್ಧ ನೀರಿನ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ, ಇಲ್ಲದೇ ಹೋದರೆ ನಿರ್ವಹಣೆಯ ಜವಬ್ದಾರಿಯನ್ನು ನಮಗಾದರೂ ಕೊಡಿ ಎಂದು ಕುಡಿಯುವ ನೀರಿನ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಇಲಾಖೆಗೆ ಸವಾಲು ಹಾಕಿದೆ.

ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕುಡಿಯುವ ನೀರಿನ ಅವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಕಳೆದ ಹಲವು ದಿನಗಳಿಂದ ನಗರದಲ್ಲಿ ಶುದ್ಧ ನೀರಿನ ಕುಡಿಯುವ ವ್ಯವಸ್ಥೆ ಸರಿಯಾಗುತ್ತಿಲ್ಲ. ಇದರಿಂದ ಸಾವಿರಾರು ಜನರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. ಮಣ್ಣ ಮಿಶ್ರಿತ ನೀರು ಸರಬರಾಜು ಹಾಗುತ್ತಿದ್ದು, ಒಕ್ಕೂಟದ ಸದಸ್ಯರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಈ ಮಾತನ್ನು ಹೇಳಬೇಕಾಗಿದೆ ಎಂದರು.

ನ್ಯೂ ಮಂಡ್ಲಿಯಲ್ಲಿ ಇರುವ ಕೆ.ಆರ್.ವಾಟರ್ ವಕ್ರ್ಸ್‍ನ ನೀರು ಶುದ್ದೀಕರಣ ಘಟಕದಲ್ಲಿ ಸರಿಯಾದ ಯಂತ್ರಗಳೇ ಇಲ್ಲ, ಅವೈಜ್ಞಾನಿಕವಾಗಿ ಶುದ್ಧೀಕರಣ ಮಾಡಲಾಗುತ್ತಿದೆ. ಈ ಹಿಂದೆ ಉಪಯೋಗಿಸುತ್ತಿದ್ದ ಆಲಂ ಕೆ.ಕೆ.ಗೆಬದಲಾಗಿ ಅಲ್ಯೂಮಿನಿಯಂ ಕ್ಲೂರೈಡ್‍ನ್ನು ಬಳಸಲಾಗುತ್ತಿದೆ. ಈ ಕಾರ್ಯ ಕೂಡ ಅಪೂರ್ಣವಾಗಿ ನಡೆಯುತ್ತಿದ್ದು, ಮಣ್ಣು ಮಿಶ್ರಿತ ನೀರು ಟ್ಯಾಂಕ್‍ಗೆ ಸರಬರಾಜಾಗುತ್ತಿದೆ. ಆಲಂನ ಟ್ರೀಟ್‍ಮೆಂಟ್ ಘಟಕ ಅತ್ಯಂತ ಶಿಥಿಲವಾಗಿದ್ದು, ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.

ಪ್ರಮುಖವಾಗಿ ಇಲ್ಲಿರುವ ಎಲ್ಲಾ ಯಂತ್ರಗಳು ಹಾಗೂ ಶುದ್ದಿಕರಣದ ವಿಧಾನಗಳು ಕಳೆದ 50 ವರ್ಷದ ಹಿಂದಿನದಾಗಿದೆ, ಯಂತ್ರಗಳೆಲ್ಲ ತುಕ್ಕು ಹಿಡಿದಿವೆ. ಅನೇಕ ಯಂತ್ರಗಳು ಕೆಲಸವನ್ನೇ ಮಾಡುತ್ತಿಲ್ಲ. ನದಿ ನೀರಿನಿಂದ ಸರಬರಾಜಾಗುವ ಮಣ್ಣು ಮಿಶ್ರಿತ ನೀರನ್ನು ಈ ಯಂತ್ರಗಳು ತಿರುಗಿಸಿ ಬೇರ್ಪಡಿಸಬೇಕಾಗುತ್ತದೆ. ಆದರೆ ಆ ಯಂತ್ರಗಳೇ ತಿರುಗುತ್ತಿಲ್ಲ, ದೋಷಪೂರಿತ ಯಂತ್ರಗಳೇ ಇವೆ ಎಂದು ದೂರಿದರು. 

ಡಾ. ಸತೀಶ್‍ಕುಮಾರ್ ಶೆಟ್ಟಿ ಮಾತನಾಡಿ, ನೀರಿನ ಶುದ್ಧೀಕರಣದ ಘಟಕದ ಒಳಭಾಗ ಮತ್ತು ಹೊರಭಾಗಗಳಲ್ಲಿ ಅಸಮರ್ಪಕ ನಿರ್ವಹಣೆಯಿದೆ. ಈ ಎಲ್ಲಾ ತೊಂದರೆಗಳು ಕೆಲವು ವರ್ಷಗಳಿಂದ ಕಂಡು ಬರುತ್ತಿದ್ದರು. ಗಮನಹರಿಸಿಲ್ಲ. ಆಗಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಯಾವುದೇ ಪ್ರಯೋಗಲಾಯಗಳು ಇಲ್ಲಿ ಇಲ್ಲ. ತಜ್ಞರು, ಇಲ್ಲ, ನುರಿತ ರಾಸಾಯನಿಕ ತಜ್ಞರ ಅವಶ್ಯಕತೆ ಇದೆ. ಕ್ಲೂರಿನ್ ಪ್ರಮಾಣ ಹೆಚ್ಚಾಗಿದೆ. ಇದರಿಂದ ಅನೇಕ ಕಾಯಿಲೆಗಳು ಉಂಟಾಗುತ್ತವೆ ಎಂದರು.

ಹಾಗಾಗಿ ಮುಂದಿನ ಹತ್ತು ದಿನಗಳಲ್ಲಿ ದೋಷಪೂರಿತ ವ್ಯವಸ್ಥೆಗಳು ದುರಸ್ತಿಗೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು, ಜಲಮಂಡಳಿಯವರ ಕೈಯಲ್ಲಿ ಇದಾಗದಿದ್ದರೆ ಬೆಂಗಳೂರಿನಲ್ಲಿರುವಂತೆ ಹೊರಗುತ್ತಿಗೆಯನ್ನು ನೀಡಿಯಾದರೂ ಶುದ್ಧ ನೀರು ಕೊಡಬೇಕು. ಅದಾಗದಿದ್ದರೆ ನಮಗೆ ಹೇಳಿ ಒಕ್ಕೂಟದ ವತಿಯಿಂದ ಸಾರ್ವಜನಿಕರಿಂದ ವಂತಿಕೆ ಸಂಗ್ರಹಿಸಿ ನಾವೇ ಹೊಸ ಯಂತ್ರಗಳನ್ನು ಖರೀದಿಸಿ ನಿರ್ವಹಣೆ ಮಾಡಿ ಶುದ್ಧ ನೀರು ಕೊಡುತ್ತೇವೆ. ನಿಮ್ಮ ಕೈಲಾದರೆ ಮಾಡಿ ಇಲ್ಲದಿದ್ದರೆ ನಮಗೆ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ವ್ಯವಸ್ಥೆಯ ಮೇಲೇಯೇ ನಗರದ ಜನರ ಆರೋಗ್ಯವಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡಬೇಡಿ, ಕೂಡಲೇ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶೀಘ್ರವೇ ಸಮಸ್ಯೆಯನ್ನು ಬಗೆಹರಿಸದಿದ್ದರೆ ವೇದಿಕೆ ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಪ್ರಮುಖರಾದ ಇಕ್ಬಾಲ್ ನೇತಾಜಿ, ಸೀತಾರಾಮ್, ನಾಗರಾಜ್ ಗೋರೆ, ಚನ್ನವೀರಪ್ಪ ಗಾಮನಕಟ್ಟೆ, ರಘುಪತಿ ಇದ್ದರು.

ನಗರಕ್ಕೆ ಹೊಸ ನೀರು ಶುದ್ದೀಕರಣ ಘಟಕ ಬೇಕು

ಶಿವಮೊಗ್ಗ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗ ಇರುವ ನೀರಿನ ಸರಬರಾಜು ಸಾಮಥ್ರ್ಯ ತುಂಬ ಕಡಿಮೆ ಇದೆ. ಮತ್ತು ಹಳೆಯ ಪದ್ಧತಿ ಇದೆ. ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕವಾದ ಹೊಸದಾಗಿ ಶುದ್ಧೀಕರಣ ಘಟಕ ಸ್ಥಾಪನೆಯಾಗಬೇಕಾಗಿದೆ. ಅಲ್ಲದೆ 24*7 ಕುಡಿಯುವ ನೀರಿನ ಯೋಜನೆ ಕೂಡ ವಿಫಲವಾಗಿದೆ. ಹಾಗಾಗಿ ಹೆಚ್ಚಿನ ಸಾಮಥ್ರ್ಯದ ಹೊಸ ತಂತ್ರಜ್ಞಾನದ ನೀರು ಶುದ್ಧೀಕರಣ ಘಟಕ ಶಿವಮೊಗ್ಗಕ್ಕೆ ಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

Exit mobile version