Site icon TUNGATARANGA

ಕೃಷಿ ವಿಜ್ಞಾನ ಕೇಂದ್ರದ ಯಶಸ್ವಿ ಆಹಾರೋದ್ಯಮಿಗಳಿಗೆ ಪುರಸ್ಕಾರ:ಕಿಸಾನ್ ಸಮೃದ್ಧಿಯಿಂದ ಸಂದ ಭಾಗ್ಯ-ಡಾ. ಸುನಿಲ್ ಸಿ.

2024 25ನೇ ಕೃಷಿ ಮೇಳದಲ್ಲಿ ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗದಲ್ಲಿ ತರಬೇತಿ ಹೊಂದಿ ಯಶಸ್ವಿಯಾಗಿ ಉದ್ಯಮಿಗಳಾಗಿ ಹೊರಹೊಮ್ಮಿದ ರೈತ ಮತ್ತು ರೈತ ಮಹಿಳೆಯರಿಗೆ ಸಂದ ಪುರಸ್ಕಾರವು ಕೃಷಿ ವಿಜ್ಞಾನ ಕೇಂದ್ರದ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ. ವಿಶ್ವವಿದ್ಯಾಲಯದ ತಂತ್ರಜ್ಞಾನಗಳನ್ನು ರೈತರಿಗೆ ಪದ್ಧತಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳ ಮೂಲಕ ನಿರಂತರ ತಾಂತ್ರಿಕ ಸಲಹೆಗಳನ್ನು ನೀಡಿದ ಫಲಿತಾಂಶವಾಗಿ ದೊರೆತ ಪುರಸ್ಕಾರ ಅಂದರೆ ತಪ್ಪಾಗಲಾರದು.

ಆಹಾರೋದ್ಯಮಿಗಳ ಅಭಿಪ್ರಾಯ .
ಶ್ರೀಮತಿ ಪ್ರತಿಭಾ. ತ್ರಯಂಬಕ ರಾವ್ ಎಸ್ಎಲ್ಎನ್ ಸ್ವಾದಿಷ್ಟ , ಸಾಗರ- ಕೆವಿಕೆಯ ನಿರಂತರ ಸಂಪರ್ಕದಿಂದ ಹಲವು ಕೌಶಲ್ಯಗಳನ್ನು ಕಲಿತು ಯಶಸ್ವಿಯಾಗಿ ಉದ್ಯಮಿಗಳಾಗಿದ್ದೇವೆ.
ಶ್ರೀಮತಿ ಲೀಲಾವತಿ, ಎಸ್ ವಿ ಟಿ ಸರ್ವೈನ್ತೋ, ಸೀಗೆ ಬಾಗಿ, ಭದ್ರಾವತಿ- ಕೆವಿಕೆ ಶಿವಮೊಗ್ಗದಲ್ಲಿ ಕಲಿತಂತಹ ತರಬೇತಿ ವಿಷಯಗಳಿಂದ ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಸಾಧ್ಯವಾಯಿತು.

ಶ್ರೀಮತಿ ಸೌದಾಮಿನಿ, ದಾಮಿನಿ ನಾಚುರಲ್ಸ್, ಸಾಗರ – ಕೃಷಿ ವಿಜ್ಞಾನ ಕೇಂದ್ರದ ಪ್ರೋತ್ಸಾಹ ನಮ್ಮೆಲ್ಲರ ಯಶಸ್ವಿಗೆ ಕಾರಣ ಕಾರಣವೆಂದು. ತಿಳಿಸಲು ಹರ್ಷಿಸಿದರು.- ಕೃಷಿ ವಿಜ್ಞಾನ ಕೇಂದ್ರದ ಪ್ರೋತ್ಸಾಹ ನಮ್ಮೆಲ್ಲರ ಯಶಸ್ವಿಗೆ ಕಾರಣ ಕಾರಣವೆಂದು ತಿಳಿಸಲು ಹರ್ಷಿಸಿದರು.

Exit mobile version