ಶಿವಮೊಗ್ಗ : ಬಗರ್ ಹುಕುಂ ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಬಗರ್ ಹುಕುಂ ರೈತರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಮಲೆನಾಡ ರೈತ ವೇದಿಕೆಯ ಸಂಚಾಲಕ ತೀ.ನಾ.ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳಗುಪ್ಪದಲ್ಲಿನಾಳೆ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ನಾಗರೀಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳುತ್ತಿದ್ದಾರೆ.ಅವರು ಅಲ್ಲಿ ತಾವು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಗರ್ ಹುಕುಂ ರೈತರ ಪರವಾಗಿಮಾಡಿದ್ದೇನು ಎನ್ನುವುದನ್ನು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.
ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದ ರೈತರ ಹಕ್ಕುಪತ್ರ ನೀಡುವ ವಿಷಯದಲ್ಲಿ ೧೫ ಸಾವಿರ ಅರ್ಜಿ ವಜಾಗೊಳಿಸಲಾಗುತ್ತಿದೆ.ಸಚಿವ ಮಧು ಬಂಗಾರಪ್ಪ ಹಕ್ಕುಪತ್ರ ಹಂಚಿಕೆ ಬಗ್ಗೆ ಪಾದಯಾತ್ರೆ ನಡೆಸಿ ಮೊದಲ ಬಾರಿಗೆ ಶಾಸಕರಾದರು. ನಂತರ ಸಚಿವರಾದರು. ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ರೈತರಿಗೆ ಕಿರುಕುಳ ನೀಡುವುದು ನಿಲ್ಲಿಸಬೇಕು. ಆಗ ಬಂಗಾರಪ್ಪನವರ ಬಂಗಾರಧಾಮಕ್ಕೂ ಬೆಲೆ ಬರಲಿದೆ ಎಂದರು
ಶುಕ್ರವಾರ ಕೃಷಿ ಮೇಳದಲ್ಲಿ ಭಾಗಿಯಾಗಿದ್ದ ಶಾಸಕರಾದ ಆರಗ ಮತ್ತು ಬೇಳೂರು ರೈತರ ಬೆನ್ನಲುಬಾಗಬೇಕೆಂದಿದ್ದಾರೆ. ಇದನ್ನು ಮಾತನಾಡುವ ನೈತಿಕತೆ ಎರಡೂ ಪಕ್ಷದ ಪ್ರತಿನಿಧಿಗಳಿಗೆ ಇಲ್ಲ. ಕೆಲಸಕ್ಕೆ ಬಾರದ ಅರಣ್ಯ ಮಂತ್ರಿ, ಕೃಷ್ಣಬೈರೇಗೌಡರು ಈ ನೆಲಕ್ಕೆ ಬಾರದ ಕಾನೂನು ಮಾಡುವ ಮಂತ್ರಿಯಾಗಿದ್ದಾರೆ. ಅವರನ್ನ ಕಟ್ಟಿಕೊಂಡು ಅರಣ್ಯ ಸಮಿತಿ ಸಭೆ ನಡೆಸಿದ್ದಾರೆ. ೩ ಎಕರೆ ಜಮೀನು ಹೊಂದಿದವರಿಗೆ ನೋಟೀಸ್ ನೀಡಲ್ಲ ಎಂದಿದ್ದಾರೆ. ಆದರೆ ಜಿಲ್ಲೆಯಲ್ಲಿ ೮೦ ಜನಕ್ಕೆ ನೋಟೀಸ್ ನೀಡಿದ್ದಾರೆ ಎಂದರು.
೧೪೦ ರೈತರನ್ನು ಒಕ್ಕಲೆಬ್ಬಿಸಲು ನೋಟೀಸ್ ನೀಡಲಾಗಿದೆ ಎಣ್ಣೆಕೊಪ್ಪದಲ್ಲಿ ೪೧ ಜನ ಕುಟುಂಬಸ್ಥರನ್ನ ದಾಖಲಾತಿ ಇದ್ದರೂ ಒಕ್ಕಲೆಬ್ಬಿಸಲಸಗಿದೆ. ಸಚಿವ ಮಧು ಬಂಗಾರಪ್ಪ ಯಾರಿಗಾಗಿ ಕೆಲಸ ಮಾಡ್ತಾ ಇದ್ದಾರೆ. ಸಂಸತ್ ನಲ್ಲಿ ಕೆಲಸ ಮಾಡಿ ಎಂದರೆ ಶಿಕಾರಿಪುರದಲ್ಲಿ ಕೇಸ್ ಹಾಕಿ ಓಡಾಡುವಂತೆ ಮಾಡಿದರು ಎಂದರು.
ನ್ಯಾಯಯಾಂಗ, ಶಾಸಕಾಂಗ, ಮತ್ತು ಕಾಯಾಂಗ ಗಳು ಕಣ್ಣು ಮುಚ್ಚಿಕೊಂಡಿದೆ ರೈತರಿಗೆ ಹಾಗಾಗಿ ಅ.೨೧ ರಂದು ಬೇಡಿಕೆ ಈಡೇರುವವರೆಗೆ ಪ್ರತಿಭಟಿಸಲಾಗುವುದು. ಬೇಡಿಕೆ ಈಡೇರಿಕೆಗೆ ೧೨ ರೈತರ ಸಂಘಟನೆ ಪಾಲ್ಗೊಳ್ಳಿದೆ. ಬೇಡಿಕೆ ಈಡೇರದಿದ್ದರೆ ಪ್ರತ್ಯೇಕ ಅನುಚ್ಛೇಧ ೬ ರ ಅಡಿ ೧೨ ಜಿಲ್ಲೆಗಳಾದ ಮಲೆನಾಡಿನ ಜನಕ್ಕೆ ಪ್ರತ್ಯೇಕ ರಾಜ್ಯ ನೀಡಬೇಕು ಎಂದು ಆಗ್ರಹಿಸಿದರು.
ಬ್ರಿಟೀಶರ ವಿರುದ್ಧ ಹೋರಾಡುವಂತಾಗಿದೆ. ೮೦ ಜನ ಸಣ್ಣ ಇಳುವರಿದಾರರಿಗೆ ನೋಟೀಸ್ ನೀಡುವ ರೇಂಜರ್ ಆಫೀಸರ್ ನ್ನ ವಜಾಗೊಳಿಸಬೇಕು. ಭೂಗಳ್ಳ ಸರ್ಕಾರವಿದೆ. ನಮ್ಮ ಬೇಡಿಕೆ ಈಡೇರದಿದ್ದರೆ ನವೆಂಬರ್ ೧ ರಂದು ಅಧಿಕೃತವಾಗಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಡಲಾಗುವುದು. ಬೆಳಗಾವಿಯಿಂದ ಕೊಡಗಿನವರೆಗೆ ಪ್ರತ್ಯೇಕ ರಾಜ್ಯವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಜಿಲ್ಲಾಧ್ಯಕ್ಷ ಹೂವಪ್ಪ, ಪ್ರಮುಖರಾದ ಎಂ.ಡಿ.ನಾಗರಾಜ್, ಪ್ರಮೋದ್, ಮಂಜುನಾಥ್ ಮುಂತಾದವರು ಇದ್ದರು.