ಹೊಸನಗರ: ಹೊಸನಗರ ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಸರ್ವರ್ ಸಮಸ್ಯೆ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಕಾರ್ಡ್‌ದಾರರು ಸಾಲಿನಲ್ಲಿ ಜನಸಾಗರವೇ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ
ಹೊಸನಗರ ತಾಲ್ಲೂಕಿನಲ್ಲಿ ಒಟ್ಟು ೪೬ನ್ಯಾಯಾಲಯ ಬೆಲೆ ಅಂಗಡಿಗಳಿದ್ದು ಒಟ್ಟು ೨೫ಸಾವರಕಿಂತಲ್ಲೂ ಹೆಚ್ಚು ಪಡಿತರ ಕಾರ್ಡ್‌ದಾರರು ಇದ್ದಾರೆ ಎಲ್ಲ ನ್ಯಾಯಾಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ೧೫ನೇ ತಾರೀಖಿನಿಂದ ಅಕ್ಕಿ ಕೊಡಲು ಪ್ರಾರಂಬಿಸುತ್ತಾರೆ ಅದರೆ ಅಕ್ಟೋಬರ್ ತಿಂಗಳಲ್ಲಿ ನ್ಯಾಯಬೆಲೆ ಅಂಗಡಿಗೆ ಸರ್ಕಾರದಿಂದ ಅಕ್ಕಿ ಬಂದಿದೆ ಅದರೆ ಸರ್ವರ್ ಸಮಸ್ಯೆಯಿಂದ ಕಾರ್ಡ್‌ದಾರರು ಬೆಳಿಗ್ಗೆಯಿಂದ ಅಂಗಡಿಯ ಬಾಗಿಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಸರ್ಕಾರ ಕಾರ್ಡ್‌ದಾರರಿಗೆ ಉಚಿತ ಅಕ್ಕಿ ನೀಡುತ್ತದೆ ಒಂದೆ ಸರಿ ಬಂದು ಅಕ್ಕಿ ತೆಗೆದುಕೊಂಡು ಹೋದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಅದರೆ ದೂರದ ಗ್ರಾಮದಿಂದ ದೂರದ ಊರಿನಿಂದ ಬಂದು ಎರಡು ಮೂರು ದಿನ ನ್ಯಾಯಬೆಲೆ ಅಂಗಡಿಯ ಮುಂದೆ ಕಾಯುವುದರಿಂದ ಅವರ ಕೆಲಸ ಹಾಳಗುತ್ತಿದೆ ಕೂಲಿ ಮಾಡಿ ಜೀವನ ಸಾಗಿಸುವವವರ ಪರಿಸ್ಥಿತಿ ಎನೂ ಆಗಬಹುದು ಎಂದು ಸರ್ಕಾರ ಉಹಿಸಿಕೊಳ್ಳಬೇಕು?
ಸರ್ವರ್ ಸಮಸ್ಯೆಗೆ ಕಾರಣವೇನು; ಹೊಸನಗರ ತಾಲ್ಲೂಕಿನಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ಕಾಡ್‌ದಾರರು ಕ್ಯೂ ನಿಂತಿರುವ ಬಗ್ಗೆ ಹೊಸನಗರ ಆಹಾರ ನಿರಿಕ್ಷಕ ಬಾಲಚಂದ್ರರವರನ್ನು ವಿಚಾರಿಸಿದಾಗ ಈ ಸಮಸ್ಯೆ ಇಡೀ ರಾಜ್ಯದ್ಯಂತ ಸಮಸ್ಯೆಯಿದೆ ಒಂದೇರಡು ದಿನದಲ್ಲಿ
ಸರ್ವರ್ ಸಮಸ್ಯೆ ಬಗೆ ಹರಿಯಲಿದೆ ಈ ಹಿಂದ ಆಹಾರ ಇಲಾಖೆಯ ಸರ್ವರ್‌ಗಳನ್ನು ಕೇಂದ್ರ ಸರ್ಕಾರದ ಆಹಾರ ಇಲಾಖೆ ನೋಡಿಕೊಳ್ಳುತ್ತಿತ್ತು ಸೆಪ್ಟಂಬರ್ ತಿಂಗಳಿಂದ ಸರ್ವರ್ ಸಮಸ್ಯೆಯನ್ನು ರಾಜ್ಯ ಸರ್ಕಾರ ಪಡೆದುಕೊಂಡಿದ್ದು ಒಂದೇರಡು ದಿನದಲ್ಲಿ ಬಗೆ ಹರಿಯಲಿದೆ ಪಡಿತರ ಕಾರ್ಡ್‌ದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದಾರೆ.
ಹೆಚ್.ಎಸ್.ನಾಗರಾಜ್