Site icon TUNGATARANGA

ನಾಳೆ ರೈತರಿಗೆ, ವರ್ತಕರಿಗೆ ಮಾಹಿತಿ ಕಾರ್ಯಾಗಾರ

ಶಿವಮೊಗ್ಗ: ಜಿಲ್ಲಾ ಅಡಿಕೆ ವರ್ತಕರ ಸಂಘ, ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ಮತ್ತು ಜಾಗೃತಿ ಮತ್ತು ಆಡಳಿತ ವಿಭಾಗ ವತಿಯಿಂದ ಇಲ್ಲಿನ ಜಿಲ್ಲಾ ಅಡಿಕೆ ವರ್ತಕರ ಸಂಘದ ಎಪಿಎಂಸಿ ಪ್ರಾಂಗಣದಲ್ಲಿ “E-WAY BILL FOR CITIZEN” ವಿಷಯದ ಕುರಿತ ಮಲೆನಾಡು ವಿಭಾಗ ವ್ಯಾಪ್ತಿಯ ರೈತರಿಗೆ, ವರ್ತಕರಿಗೆ, ವ್ಯಾಪಾರಸ್ಥರಿಗೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಎ.ಮಾದೇಶ್‌ ಹೆಗ್ಡೆ ತಿಳಿಸಿದ್ದಾರೆ.

ಮಲೆನಾಡು ವಿಭಾಗದ ಸರಕು ಮತ್ತು ಸೇವಾ ತೆರಿಗೆಗಳ ಜಾರಿ ಮತ್ತು ಜಾಗೃತಿ ವಿಭಾಗದ ಜಂಟಿ ಆಯುಕ್ತ ವಿಜಯ್ ಕುಮಾರ್,  ಭತ್ತದ ಮತ್ತು ಆಡಳಿತ ವಿಭಾಗದ ಜಂಟಿ ಆಯುಕ್ತೆ ಹೆಚ್.ಎಸ್ ನಾಜೀಯಾ ಅಮಾನ್ ಕಾರ್ಯಗಾರವನ್ನು ಉದ್ಘಾಟಿಸುವರು.

ಜಿಲ್ಲಾ ವ್ಯಾಪ್ತಿಯ ಶಿಕಾರಿಪುರ, ಸಾಗರ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿ ವ್ಯಾಪ್ತಿಯ ಸುತ್ತಲಿನ ಹಾಗೂ ಹಾಸನ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ನೋಂದಾಯಿತ ಮತ್ತು ಅನೋಂದಾಯಿತ ಕರದಾತರು, ರೈತರು ತಮ್ಮ ತೆರಿಗೆದಾಯಕ ಕೃಷಿಗಳಾದ ಅಡಿಕೆ, ಶುಂಠಿ, ಮೆಣಸು

ಸರಕು-ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ಸೃಜಿಸಬೇಕಾದ ಇ-ವೇ ಬಿಲ್ ಖರೀದಿ ಮತ್ತು ಮಾರಾಟ ಮೇಲಿನ ಅನೋಂದಾಯಿತ  ತೆರಿಗೆ ಸೇರಿ ಮುಂತಾದ ತೆರಿಗೆ ವಿಚಾರಗಳಿಗೆ ಸಂಬಂಧಿತ ವಿಚಾರಗಳ ಕುರಿತು ವಿಡಿಯೋ ತುಣುಕುಗಳನ್ನು ಸಾರ್ವಜನಿಕ ಮಾಹಿತಿಗೆ ಬಿಡುಗಡೆಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version